ಲೋಕದರ್ಶನ ವರದಿ
ಕಾಗವಾಡ 09: ಸಕ್ಕರೆ ಕಾಖರ್ಾನೆಗಳು ರೈತರಿಂದ ಕಬ್ಬು ಸಾಗಾಟ ಮಾಡಿದ 14 ದಿನಗಳಲ್ಲಿ ಹಣ ಪಾವತಿಸುವದು, ನ್ಯಾಯಾಲಯದ ಆದೇಶ ಇದ್ದರೂ. ಇಲ್ಲಿಯ ಸಕ್ಕರೆ ಕಾಖರ್ಾನೆಗಳು ಕಳೆದ 120 ದಿನಗಳು ಕಳೆದರೂ ಹಣ ಪಾವತಿಸಿಲ್ಲಾ. ಇದು ರೈತರ ಮೇಲೆ ಒಂದು ರೀತಿ ಅನ್ಯಾಯ ಮಾಡಿದ್ದಾರೆ. ಇಂತಹ ಸಕ್ಕರೆ ಕಾಖರ್ಾನೆಗಳ ಮೇಲೆ ಜಿಲ್ಲಾಧಿಕಾರಿಗಳು, ಕ್ರಮ ಜರುಗಿಸಿ, ರೈತರ ಬಾಕಿ ಹಣ ನೀಡಲು ಮುಂದಾಗಬೇಕೆಂದು, ಕಾಗವಾಡದ ರೈತ ಹೋರಾಟಗಾರರಾದ ಸುಭಾಷ ಕಠಾರೆ ಕಾಗವಾಡದಲ್ಲಿ ತಹಶಿಲ್ದಾರರಿಗೆ ಮನವಿ ಅಪರ್ಿಸಿ, ಕೇಳಿಕೊಂಡರು.
ಕಳೆದ ವರ್ಷದ ಹಂಗಾಮಿನಲ್ಲಿ ಕಾಗವಾಡ, ಕೆಂಪವಾಡ, ಅಥಣಿ ಈ ಸಕ್ಕರೆ ಕಾಖರ್ಾನೆಗಳು, ರೈತರಿಂದ ಕಬ್ಬು ತಗೆದುಕೊಂಡು, ನುರಸಿ, ಸಕ್ಕರೆ ತೈಯಾರಿಸಿ, ಮಾರಾಟ ಮಾಡಿದ್ದಾರೆ. ಆದರೆ ರೈತರಿಗೆ ಕೊಡುವ ಹಣ, ಇನ್ನೂವರೆಗೆ ನೀಡದೆ ಇರುವದು. ಇದೊಂದು ವಿಪಯರ್ಾಸ. ಜಿಲ್ಲಾಧಿಕಾರಿಗಳು ಈ ಮೊದಲು ಸಭೆ ಆಯೋಜಿಸಿ, ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಕ್ರಮ ಯಾಕು ಜರುಗಿಸಿಲ್ಲಾ? ಎಂದು ರೈತ ಮುಖಂಡರಾದ ಸುಭಾಷ ಕಠಾರೆ, ಎಂ.ಬಿ.ಉದಗಾಂವೆ, ಅರುಣ ಜೋಶಿ, ಶಶೀಕಾಂತ ಜೋಶಿ, ಸಚಿನ್ ಕವಟಗೆ ವಾದಮಾಡಿದರು.
ವಿದ್ಯುತ್ ಪುರೈಕೆಯಲ್ಲಿ ಅನ್ಯಾಯ: ಹೆಸ್ಕಾಂ ಇಲಾಖೆವತಿಯಿಂದ, ಸರಕಾರ 10 ಅಶ್ವಶಕ್ತಿ ವರೆಗಿನ, ಪಂಪಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಿದ್ದಾರೆ. ಆದರೆ, ಸಮುದಾಯ ಏತ್ ನೀರಾವರಿ ಯೋಜನೆಗಳಲ್ಲಿಯ ಪ್ರತಿಯೊಬ್ಬ ರೈತರಿಗೆ ಒಂದು ಕಾಲ ಅಶ್ವಶಕ್ತಿ ಪಾಲಿಗೆ ಬರುತ್ತದೆ. ಈ ರೈತರಿಗೆ ಸರಕಾರ ನೀಡಿರುವ ಉಚಿತ ವಿದ್ಯುತ್ ಪುರೈಕೆ ಯೋಜನೆ, ಯಾಕೇ ನೀಡುತ್ತಿಲ್ಲಾ? ಎಂದು ರೈತ ಮುಖಂಡರಾದ ಆಶೋಕ ಕುಡಚೆ, ಅಮರ್ ಶಿಂದೆ, ಶ್ರೀಕಾಂತ್ ಕೊತ್ತಲಗೆ, ಪ್ರಕಾಶ ಮಿಜರ್ೆ, ರಾಜು ಮಗದುಮ್ಮ, ಪ್ರದೀಪ್ ಪಾಟೀಲ, ಕಾಕಾ ಚೌಗುಲೆ ಇವರು ಆರೋಪಿಸಿದರು.
ವಿದ್ಯುತ್ ಪುರೈಕೆ ಹೆಚ್ಚಿಸಿರಿ: ರಾಜ್ಯದ ವಿದ್ಯುತ್ ಪುರೈಕೆ ಸ್ಥಳದಲ್ಲಿ ಸಮರ್ಪವಾಗಿ ಮಳೆಯಾಗಿದೆ. ವಿದ್ಯುತ್ ಪೂರೈಕೆ ಸುಸ್ಥಿತಿಯಲ್ಲಿದೆ. ಆದರೆ, ಕಾಗವಾಡ ತಾಲೂಕಾ ಪರಿಸರದಲ್ಲಿ ಜೂನ್ ಹಾಗೂ ಜುಲೈ ತಿಂಗಳಿನ, ಈ ವರೆಗೆ ಮಳೆಯಾಗೆಯಿಲ್ಲಾ. ಮುಂಗಾರು ಹಂಗಾಮ್ ಕೈಕೊಟ್ಟಿದ್ದು, ರೈತರು ಆತಂಕದಲ್ಲಿದ್ದಾರೆ. ಕೆಲ ಬೆಳೆಗಳು ಉಳಿಸಿಕೊಳ್ಳಲು, ಈಗ ನೀಡುವ ವಿದ್ಯುತ್ ಸಮಯದಲ್ಲಿ ಹೆಚ್ಚಿಸಿರಿ, ಎಂದು ಮನವಿ ನೀಡಿದರು.
ಬರೆಗಾಲ ಘೋಷಣೆ ಮಾಡಿರಿ: ಮಳೆಗಾಲದ ಜೂನ್ ಮತ್ತು ಜುಲೈ ತಿಂಗಳಿನ, ಈ ವರೆಗೆ ಮುಂಗಾರು ಮಳೆ ಬಾರದೆ ಹೋಗಿದ್ದರಿಂದ, ರೈತರು ಭಿತ್ತನೆ ಮಾಡದೆ, ಭೂಮಿಗಳು ಬರಡಾಗಿ ಉಳಿದಿವೆ. ಇದರಿಂದ, ರೈತರ ದನಕರಗಳಿಗೆ, ಮೇವು, ಕುಡಿಯಲು ನೀರು ಮತ್ತು ರೈತರು ಆಥರ್ಿಕ ಸಂಕಟದಲ್ಲಿ ಸಿಲುಕಿದರಿಂದ, ಕಾಗವಾಡ ತಾಲೂಕಾ ಬರೆಗಾಲ ಎಂದು ಘೋಷಣೆ ಮಾಡಿರಿ ಎಂದು ಹೇಳಿ, ತಹಶಿಲ್ದಾರ ಮುಖಾಂತರ, ರಾಜ್ಯ ಸರಕಾರಕ್ಕೆ ಮನವಿ ಅಪರ್ಿಸಿದರು. ಮನವಿ ಕಾಗವಾಡ ತಾಲೂಕಾ, ಸಿರಸದಾರ ಎಂ.ಆರ್.ಪಾಟೀಲ ಮತ್ತು ಕಂದಾಯ ನೀರಿಕ್ಷಕ ಬಿ.ಬಿ.ಬೋರಗಲ್ ಸ್ವೀಕರಿಸಿದರು.