ಬಹಿಷ್ಕಾರ ಹಾಕಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮನವಿ

ಹೊನ್ನಾವರ,19 :ತಾಲೂಕಿನ ಬಳ್ಕೂರು ಗ್ರಾಮದ ಅಂಬಿಗ ಸಮಾಜದವರಿಗೆ ಹದಿನೆಂಟು ಹಳ್ಳಿಯ ಮುಖಂಡರು ಜಾತಿ ಬಹಿಷ್ಕಾರ ಹಾಕಿದ್ದು ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಗಂಗಾಂಬಿಕಾ ಟ್ರಸ್ಟ್ ವತಿಯಿಂದ ಅಂಬಿಗ ಸಮಾಜದವರು  ತಹಸೀಲ್ದಾರರ ಮೂಲಕ  ಜಿಲ್ಲಾಧಿಕಾರಿಯವರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದರು.

ಕುಮಟಾ ತಾಲೂಕಿನ ಗಂಗೆಕೊಳ್ಳದ ಅಂಬಿಗ ಸಮಾಜದ 18 ಹಳ್ಳಿ ಮುಖಂಡರು ಕಾನೂನು ವಿರುದ್ದವಾಗಿ ಹಾಕಿದ ಜಾತಿ ಬಹಿಷ್ಕಾರ ಪದ್ದತಿಯನ್ನು ರದ್ದುಗೊಳಿಸಬೇಕು. ಸಮಾಜ ಬಾಂಧವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಜಾತಿ ಬಹಿಷ್ಕಾರ ಹೇರಿ ಸಮಾಜದಲ್ಲಿ ಕಾನೂನು ವಿರುದ್ದ ವತರ್ಿಸುತ್ತಿರುವ 18 ಹಳ್ಳಿಯ 7 ಮುಖಂಡರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ದೀವಗಿಯ ಲಕ್ಷ್ಮಣ ಶುಕ್ರು ಅಂಬಿಗ, ಮೋಳ್ಕೋಡದ ನಾರಾಯಣ ನಾಗಪ್ಪ ಅಂಬಿಗ, ಗಂಗಾವಳಿಯ ಗಣಪತಿ ವೆಂಕಟ್ ಅಂಬಿಗ,  ಕತಗಾಲದ ನಾರಾಯಣ ಹನ್ಮಂತ ಅಂಬಿಗ ಕತಗಾಲ, ಮಿಜರ್ಾನದ ರಾಮಚಂದ್ರ ನಾಗಪ್ಪ ಅಂಬಿಗ, ಧಾರೇಶ್ವರದ ಕೇಶವ ಈಶ್ವರ ಅಂಬಿಗ, ಅನಿಲಗೋಡದ ದೇವಪ್ಪ ಕನ್ಯಾ ಅಂಬಿಗ ಇವರಿಂದ ತೀವ್ರ ಶೋಷಣೆಗೆ ಒಳಪಟ್ಟಿದ್ದೇವೆ ಎಂದು ಬಳಕೂರಿನ ಅಂಬಿಗ ಸಮಾಜದವರು ತಹಸೀಲ್ದಾರರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲೂ ಅಂಬಿಗ ಸಮಾಜದವರು ಜಾತಿ ಬಹಿಷ್ಕಾರದ ಅನ್ಯಾಯವನ್ನು ್ಲ ಅನುಭವಿಸುತ್ತ ಬಂದಿದ್ದಾರೆ. ಇದೇ ರೀತಿಯಲ್ಲಿ ಬಳಕೂರು ಗ್ರಾಮದ ಅಂಬಿಗ ಸಮಾಜದವರಿಗೂ ಜಾತಿ ಬಹಿಷ್ಕಾರರ ಹಾಕಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ ಹಾಗೂ ಕೃಷಿ ಕೂಲಿ ಮಾಡಿಕೊಂಡು ಬಂದಿರುವ ಅಂಬಿಗ ಸಮಾಜವು ಅನಾದಿಕಾಲದಿಂದಲೂ ಗಂಗಾವಳಿಯ ಗಂಗಾಮಾತೆಯನ್ನು ಕುಲದೇವರನ್ನಾಗಿ ನಡೆದುಕೊಳ್ಳುತ್ತ ಬಂದಿದೆ. ಇದಕ್ಕೆ ಪೂರಕವಾಗಿ ಸಮಾಜದ ಆಗು-ಹೋಗುಗಳ ಬಗ್ಗೆ ಹಿಂದಿನಿಂದಲೂ ಜಿಲ್ಲಾ ಮಟ್ಟದ ಅಂಬಿಗ ಸಮಾಜದ ಸಮಸ್ಯೆಗಳ ಕುರಿತು 18 ಹಳ್ಳಿಯ ಮುಖಂಡರು ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ ಎಂದುಮನವಿಯಲ್ಲಿ ತಿಳಿಸಿದ್ದಾರೆ.

ಅಂಬಿಗ ಸಮಾಜವು ಶೈಕ್ಷಣಿಕವಾಗಿ ತುಂಬ ಹಿಂದುಳಿದಿದೆ. ಇದರ ಬಲ ಹೀನತೆಯನ್ನು ಉಪಯೋಗಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿರುವ 18 ಹಳ್ಳಿಯ ಮುಖಂಡರು ಕೆಲವು ವರ್ಷಗಳಿಂದ ತಮ್ಮ ಸ್ವಾರ್ಥಕ್ಕಾಗಿ ಅಂಬಿಗ ಸಮಾಜದವರಿಗೆ ಜಾತಿ ಬಹಿಷ್ಕಾರ ಮಾಡುತ್ತ ಬಂದಿದ್ದಾರೆ ಎಂದು ತಹಸೀಲ್ದಾರರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

ನಾರಾಯಣ ಅಂಬಿಗ, ಗಂಗಾಧರ ಅಂಬಿಗ, ನಾಗರಾಜ ಅಂಬಿಗ, ಮಾರುತಿ ಅಂಬಿಗ, ಮಹೇಶ ಅಂಬಿಗ, ಧರ್ಮ ಅಂಬಿಗ, ದೇವಿ ಅಂಬಿಗ ಮತ್ತಿತರರು ಮನವಿ ಸಲ್ಲಿಸಿದರು. ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಉಪತಹಸೀಲ್ದಾರ ಸತೀಶ ಗೌಡ ಮನವಿ ಸ್ವೀಕರಿಸಿದರು.