ಬೆಳಗಾವಿ : ಇಲ್ಲಿನ ಪಿರನವಾಡಿಯ ಖಾನಾಪೂರ ಮತ್ತು ತಿಲಾರಿ ಮಾರ್ಗದ ವೃತ್ತದಲ್ಲಿ ಈಗಾಗಲೇ ಛತ್ರಪತಿ ಶಿವಾಜಿ ಮಾಹಾರಾಜರ ಮೂತರ್ಿ ಇದ್ದರು ಕೂಡ ಕೆಲವರು ಸಂಗೊಳ್ಳಿ ರಾಯಣ್ಣ ಮೂತರ್ಿ ಪ್ರತಿಸ್ಥಾಪನೆ ಮಾಡುತ್ತಿರುವದನ್ನು ಖಂಡಿಸಿ ಪಿರನವಾಡಿಯ ಕೆಲವು ನಾಗರಿಕರು ಜಿಲ್ಲಾಧಿಕಾರಿಗಳಿಗೆ ಶುಕ್ರವಾರದಂದು ಮನವಿ ಸಲ್ಲಿಸಿದರು.
ಪಿರನವಾಡಿಯಲ್ಲಿ ರಾಷ್ರೀಯ ಹೆದ್ದಾರಿಯ ಹತ್ತಿರದ ವೃತ್ತದಲ್ಲಿ ನಾವು ಸುಮಾರು ವರ್ಷಗಳ ಹಿಂದೆ ಖಾಲಿ ಇರುವ ಜಾಗೆಯಲ್ಲಿ ಶಿವಾಜಿ ಮೂತರ್ಿಯನ್ನು ಸ್ಥಾಪಿಸಿದ್ದೆವೆ. ಅಷ್ಟೇ ಅಲ್ಲದೆ ಮೂತರ್ಿಯ ಸತ್ತಮುತ್ತಲು ಇರುವಂತ ಜಾಗವನ್ನು ಶಿವಾಜಿ ಜಯಂತಿ ಹಾಗೂ ಕಾರ್ಯಕ್ರಮಗಳನ್ನು ಮಾಡುವದಕ್ಕಾಗಿ ಮಿಸಲಿಟ್ಟಿದ್ದೆವೆ. ಆದರೆ ಕೆಲ ಜನರು ಈ ವೃತ್ತದಲ್ಲಿ ಕ್ರಾಂತಿವೀರ ಸಂಗೊಳಿ ರಾಯಣ್ಣ ಮೂತರ್ಿಯನ್ನು ಪ್ರತೀಸ್ಟಾಪನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಅಶಾಂತಿಗೆ ಭಂಗವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅದಕ್ಕಾಗಿ ರಾಯಣ್ಣ ಮುತರ್ಿಯನ್ನು ಪ್ರತಿಸ್ಠಾಪನೆ ಮಾಡುವದನ್ನು ತಡೆಯಬೇಕು ಎಂದು ಅಲ್ಲಿನ ಬೆರಳೆಣಕೆಯ ಕೆಲವು ಜನರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.