ಲೋಕದರ್ಶನ ವರದಿ
ಬೆಳಗಾವಿ 11: ಹುಕ್ಕೆರಿ ತಾಲೂಕಿನ ನಾಂಗನೂರ ಕೆ.ಎಸ್ ಗ್ರಾಮದಲ್ಲಿ ಒಖಐ ಮಧ್ಯದಂಗಡಿಯನ್ನು ಸಕರ್ಾರದ ಆದೇಶದಂತೆ ಪ್ರಾರಂಬಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತ ಕೆಲವು ದಿನಗಳ ಹಿಂದೆ ನಾಂಗನೂರ ಕೆ.ಎಸ್ ಗ್ರಾಮದ ಹಲವು ಗ್ರಾಮಸ್ಥರು ಮದ್ಯದಂಗಡಿಯಿಂದ ಮಹಿಳೆ ಮತ್ತು ಮಕ್ಕಳಿಗೆ ತೊಂದರೆಯಾಗುತ್ತದೆ ಒಖಐ ಬೇಡ ಎಂದು ಪ್ರತಿಭಟನೆ ಮಾಡಿದ್ದರು ಆ ಪ್ರತಿಭಟನೆಯನ್ನು ಖಾಸಗಿ ಮದ್ಯದಂಗಡಿಯವರು ಮಾಡಿಸಿದ್ದರು ಅವರು ಯಾರು ನಾಗನೂರು ಕೆಎಸ್ನ ಗ್ರಾಮಸ್ಥರಲ್ಲ ಎಂದು ಎಂದು ಹೇಳುತ್ತ ಒಖಐನ್ನು ಗ್ರಾಮದಿಂದ ಒಂದುವರೆ ಕಿಲೋ ಮೀಟರ್ ಅಂತರದಲ್ಲಿ ಪ್ರಾರಂಬಿಸಲಾಗುತ್ತಿದ್ದು ಯಾರಿಗೂ ತೊಂದರೆ ಆಗುವದಿಲ್ಲ ಜಿಲ್ಲಾಧಿಕಾರಿಗಳು ಪರವಾಣಿಗೆಯನ್ನು ರದ್ದು ಮಾಡದೆ ಚಿಕ್ಕೋಡಿಯ ಅಬಕಾರಿ ಉಪ ಅಧೀಕ್ಷಕರು ಪರಿಶೀಲನೆ ಮಾಡಿ ನೀಡಿರುವ ಅನುಮತಿಯಂತೆ ಅಂಗಡಿಯನ್ನು ಪ್ರಾರಂಬಿಸಲು ಅನುಮತಿ ನೀಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.