ಲೋಕದರ್ಶನ ವರದಿ
ಬೆಳಗಾವಿ : ಘನತೆವೆತ್ತ ರಾಷ್ಟ್ರಪತಿ ರಾಮನಾಥ ಕೋವಿಂದ ಭಾರತ ಸರಕಾರ ಇವರು ಕಳೆದ ತಿಂಗಳ ದಿ.15 ರಂದು ಬೆಳಗಾವಿಗೆ ಭೇಟ್ಟಿ ನೀಡಿದ ಸಂದರ್ಭದಲ್ಲಿ, ಬೆಳಗಾವಿಯ ಸಂಸದರಾದ ಸುರೇಶ ಅಂಗಡಿ ಇವರ ಸಮ್ಮುಖದಲ್ಲಿ ಗಂಗಾರಾಮ ತಳವಾರ, ಜಿಲ್ಲಾ ಅಧ್ಯಕ್ಷರು ಇವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಗಂಗಾಮತ (ಕೋಳಿ) ಸಮಾಜದ ಪದಾಧಿಕಾರಿಗಳು ಗಂಗಾಮತ ಸಮುದಾಯವನ್ನು ಎಸ್.ಟಿ (ಪರಿಶಿಷ್ಟ ಪಂಗಡ) ಮೀಸಲಾತಿಗಾಗಿ ಸೇರಿಸುವ ನಿಟ್ಟಿನಲ್ಲಿ ಸಮಾಜದ 37 ಪರ್ಯಾಯ ಪಂಗಡಗಳ ಕಡತವು ರಜಿಸ್ಟ್ರಾರ ಜನರಲ್ ನವದೆಹಲಿಯವರಲ್ಲಿದ್ದು, ಹಾಗೂ ತಳವಾರ ಮತ್ತು ಪರಿವಾರ ಪಂಗಡಗಳು ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಸಲ್ಲಿಸಿರುವ ಪ್ರಯುಕ್ತ, ಇವುಗಳ ಚಾಲನೆಗಾಗಿ ಅಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ನಿಯೋಗದಲ್ಲಿ ಜಿಲ್ಲಾ ಗಂಗಾಮತ ಸಮಾಜ ಸಂಘ ಪ್ರಧಾನ ಕಾರ್ಯದಶರ್ಿ ಬಸವರಾಜ ಸುಣಗಾರ, ಪದಾಧಿಕಾರಿಗಳಾದ ರವಿಶಂಕರ ಚನಾಳ, ಶಿವಲಿಂಗಪ್ಪ ಗಸ್ತಿ, ಶಿವರುದ್ರಪ್ಪ ತಳವಾರ(ಬೆಂಗಳೂರು) ಶಿವಲಿಂಗಪ್ಪ(ಬೆಂಗಳೂರು) ಮಾಜಿ ಮಹಾಪೌರರಾದ ಅಪ್ಪಾಸಾಹೇಬ ಪೂಜಾರಿ, ಉಪಮಹಾಪೌರರಾದ ಮಧುಶ್ರೀ ಪೂಜಾರಿ ಅಣ್ಣಾಸಾಹೇಬ ಕೋಳಿ, ಅನೀಲ ಸುಣಗಾರ, ಉಪಸ್ಥಿತರಿದ್ದರು.