ಲೋಕದರ್ಶನ ವರದಿ
ಸಿದ್ದಾಪುರ; ಕಳೆದ ಮೂರು-ನಾಲ್ಕು ತಿಂಗಳಿಂದ ಕಿರಿಯಮಹಿಳಾ ಆರೋಗ್ಯ ಕಾರ್ಯಕತರ್ೆಯರ ವೇತನವು ನಿಯಮಿತವಾಗಿ ಸಿಗದ ಕಾರಣ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ ಕೂಡಲೇ ಪ್ರತೀ ತಿಂಗಳು ನಿಯಮಿತವಾಗಿ ವೇತನ ಸಿಗುವಂತೆ ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ಕಿರಿಯಮಹಿಳಾ ಆರೋಗ್ಯ ಕಾರ್ಯಕತರ್ೆಯರು ಬುಧವಾರ ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕರಿಗೆ ಮನವಿ ಸಲ್ಲಿಸಿದರು.
ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಇಲಾಖೆಯ ಕಿರಿಯಮಹಿಳಾ ಆರೋಗ್ಯ ಕಾರ್ಯಕತರ್ೆಯರಿಗೆ ನಿಯಮಿತವಾಗಿ ವೇತನ ನೀಡುತ್ತಿಲ್ಲ ಮೂರು-ನಾಲ್ಕು ತಿಂಗಳಿಗೊಮ್ಮ ವೇತನ ನೀಡಲಾಗುತ್ತಿದೆ ಇದರಿಂದ ಹಲವು ಸಮಸ್ಯೆಗಳು ಉದ್ಭವವಾಗುತ್ತಿರುವುದಲ್ಲದೆ ಸಾಲಕಟ್ಟುವುದಕ್ಕೆ,ಮಕ್ಕಳ ಶಾಲೆಗೆ ಕಳುಹಿಸುವುದಕ್ಕೆ ಸೇರಿದಂತೆ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಅಲ್ಲದೆ ತಾಲೂಕಿನಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಒಬ್ಬೋಬ್ಬರು ಎರಡು-ಮೂರು ಹುದ್ದೆಗಳನ್ನು ಪ್ರಬಾರೆಯಾಗಿ ನಿರ್ವಹಿಸುತ್ತಿದ್ದಾರೆ. ಒಂದು ಕಡೆ ಕೆಲಸದ ಒತ್ತಡ,ಇನ್ನೊಂದು ಕಡೆಗೆ ವೇತನವಾಗದೇ ಇರುವುದರಿಂದ ನಾವು ಒತ್ತಡಕ್ಕೆ ಸಿಲುಕಿದ್ದೇವೆ ಕೂಡಲೇ ಪ್ರತಿ ತಿಂಗಳೂ ನಮಗೆ ವೇತನ ಸಿಗುವಂತಹ ವ್ಯವಸ್ಥೆ ಮಾಡಬೇಕು ಸಂಬಳವಾಗುವವರೆಗೆ ನಾವು ಮಾಸಿಕ ವರದಿಯನ್ನು ನೀಡುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ
ಈ ಸಂದರ್ಭದಲ್ಲಿ ಡಿ.ಜಿ.ನಾಯ್ಕ,ನಾಗರತ್ನಾ ಪಟಗಾರ,ಮಮತಾ ಕೊಡಿಯಾ,ಯಮುನಾ ಪಟಗಾರ,ರಜನಿ ನಾಯ್ಕ,ಸಂಧ್ಯಾ ಸಿ.ಕೆ. ಯಶೋಧಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.