ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮನವಿ


ಲೋಕದರ್ಶನ ವರದಿ

ಮುದ್ದೇಬಿಹಾಳ 04:  ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು ಕನರ್ಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ದಿ.04ರಂದು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬರೆದ ಮನವಿಯನ್ನು ಇಲ್ಲಿನ ತಹಸೀಲ್ದಾರ್ ಎಂ.ಎಸ್. ಬಾಗವಾನಗೆ ಸಲ್ಲಿಸಿದರು.

13 ಜಿಲ್ಲೆ ವ್ಯಾಪ್ತಿ ಹೊಂದಿರುವ ಉಕ ಯಾವುದೇ ರೀತಿಯಲ್ಲಿ ಪ್ರಗತಿ, ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಆದರೆ ದಕ್ಷಿಣ ಕನರ್ಾಟಕ ಮಾತ್ರ ಎಲ್ಲ ರೀತಿಯಿಂದಲೂ ಉದ್ಧಾರವಾಗಿರುವುದು ಸತ್ಯ. ಬೆಳಗಾವಿಯ ಸುವರ್ಣಸೌಧಕ್ಕೆ ಉಪ ಲೋಕಾಯುಕ್ತ ಸೇರಿದಂತೆ ಪ್ರಮುಖ ಸಕರ್ಾರಿ ಕಚೇರಿಗಳು ಸ್ಥಳಾಂತರಗೊಳ್ಳಬೇಕು. 13 ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ನಮಗೆ ಪ್ರತ್ಯೇಕ ರಾಜ್ಯದ ಅವಶ್ಯಕತೆ ಇದೆ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲ ಇದ್ದು ಇದನ್ನು ನಾವೇ ಬಳಸಿಕೊಂಡು ಅಭಿವೃದ್ಧಿ ಸಾಧಿಸಬಹುದು. ಮುಖ್ಯಮಂತ್ರಿಗಳು ಇದಕ್ಕೆ ತಕ್ಷಣ ಸ್ಪಂಧಿಸಿ ಉತ್ತರ ಕನರ್ಾಟಕ ರಾಜ್ಯ ಎಂದು ಆದೇಶ ಮಾಡಲು ಕ್ರಮ ಕೈಕೊಳ್ಳಬೇಕು. ಮುಖ್ಯಮಂತ್ರಿಗಳು ಈಗಾಗಲೇ ನೀಡಿದ ಭರವಸೆಯಂತೆ ಸುವರ್ಣಸೌಧಕ್ಕೆ ಮಹತ್ವದ ಕಚೇರಿಗಳನ್ನು ಶೀಘ್ರ ಸ್ಥಳಾಂತರಿಸಬೇಕು.  ಅಲ್ಲಿವರೆಗೂ ರೈತರ ಹೋರಾಟ ನಿರಂತರವಾಗಿರುತ್ತದೆ ಎಂದ ಮನವಿಯಲ್ಲಿ ತಿಳಿಸಲಾಗಿದೆ.

ಕನರ್ಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣಗೌಡ ಬಿರಾದಾರ, ಜಿಲ್ಲಾ ಅಧ್ಯಕ್ಷ ಸಿದ್ದನಗೌಡ ಬಿರಾದಾರ ಅಡವಿಸೋಮನಾಳ, ತಾಲೂಕು ಅಧ್ಯಕ್ಷ ಸಂಗಪ್ಪ ಗುರಿಕಾರ, ಜಿಲ್ಲಾ ಕಾರ್ಯದಶರ್ಿ ಸಂಗಣ್ಣ ಬಾಗೇವಾಡಿ, ತಾಲೂಕು ಸಂಚಾಲಕ ಮಲ್ಲನಗೌಡ ಬಿರಾದಾರ, ಮಹಿಳಾ ಅಧ್ಯಕ್ಷೆ ಭಾಗೀರಥಿ ಹೂಗಾರ, ರೈತ ಧುರೀಣರಾದ ಆರ್.ವಿ.ಕುಂಟೋಜಿ, ಪಿ.ಬಿ.ಜಟ್ಟಗಿ, ಪಿ.ಎಲ್.ಗುರಿಕಾರ, ಆರ್.ವೈ.ದಡ್ಡಿ, ಬಸಪ್ಪ ಗುರಿಕಾರ, ಮಾಬುಬ್ಬಿ ನದಾಫ, ಸಂಗಮೇಶ ಗುಳಬಾಳ ಸೇರಿದಂತೆ 100ಕ್ಕೂ ಹೆಚ್ಚು ರೈತರು ಇದ್ದರು.

ಬಂದ್ಗೆ ಬೆಂಬಲ ಇಲ್ಲ:

ಈ ಮಧ್ಯೆ ಉತ್ತರ ಕನರ್ಾಟಕದ 13 ಜಿಲ್ಲೆಗಳು ಬಂದ್ ಆಚರಿಸಬೇಕು ಎಂದು ಕೆಲವರು ನೀಡಿದ್ದ ಕರೆಗೆ ಇಲ್ಲಿ ಸ್ಪಂಧನೆ ದೊರಕಿಲ್ಲ. ವ್ಯಾಪಾರ, ವ್ಯವಹಾರ ಚಟುವಟಿಕೆ ನಿತ್ಯದಂತೆ ಇತ್ತು. ಗುರುವಾರವಾಗಿದ್ದರಿಂದ ಸಂತೆಯೂ ಯಾವುದೇ ಅಡೆತಡೆ ಇಲ್ಲದೆ ನಡೆಯಿತು. ಬಿಜೆಪಿಯವರು ಬಂದ್ ಆಚರಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಂದ್ ಕೈಬಿಡುವಂತೆ ಮನವಿ ಮಾಡಿದ್ದರಿಂದ ಮತ್ತು ಸ್ಥಳಿಯ ಶಾಸಕ ಬಿಜೆಪಿಯ ಎ.ಎಸ್.ಪಾಟೀಲ ನಡಹಳ್ಳಿ ಬೆಂಗಳೂರಿಗೆ ತೆರಳಿದ್ದರಿಂದ ಬಂದ್ಗೆ ಅಷ್ಟಾಗಿ ಮಹತ್ವ ದೊರಕಲಿಲ್ಲ.