ಲೋಕದರ್ಶನ ವರದಿ
ಮುದ್ದೇಬಿಹಾಳ 04: ಪಟ್ಟಣದ ಪುರಸಭೆ ಹತ್ತಿರ ಇರುವ ಮುದ್ದೇಬಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದಶರ್ಿ ಹಾಗೂ ಕ್ಲಕರ್್ ಇವರು ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ರೈತರ ಎಸ್ಬಿ ಖಾತೆಯಲ್ಲಿ ಹಣಕಾಸಿನ ಗೋಲ್ಮಾಲ್ ನಡೆಸಿದ್ದಾರೆ. ರೈತರ ಎಫ್ಡಿ ಹಣ ಮರಳಿ ಕೇಳಿದರೆ ಅಸಭ್ಯವಾಗಿ ವತರ್ಿಸುತ್ತಾರೆ. ಇವರಿಬ್ಬರನ್ನೂ ಕೂಡಲೇ ಸಂಘದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸಂಘದ ನುರಾರು ಸದಸ್ಯರು ಇಲ್ಲಿನ ತಹಸೀಲ್ದಾರ್ಗೆ ದಿ.3ರಂದು ಮನವಿ ಸಲ್ಲಿಸಿದ್ದಾರೆ.
ಇದಕ್ಕೂ ಮೊದಲು ಸಂಘದ ಕುಂಟೋಜಿ, ಅಬ್ಬಿಹಾಳ, ಹೊಕ್ರಾಣಿ, ಶಿರೋಳ ಗ್ರಾಮಗಳ ಸದಸ್ಯರು ಸಂಘದ ಕಚೇರಿಗೆ ಆಗಮಿಸಿ ಕಾರ್ಯದಸರ್ಿ, ಕ್ಲಕರ್್ ಜೊತೆ ವಾಗ್ವಾದ ನಡೆಸಿದರು. ಆಕ್ರೋಶಗೊಂಡ ರೈತರು ಪಿಕೆಪಿಎಸ್ ಅಧ್ಯಕ್ಷರಿಗೆ ಪತ್ರ ಬರೆದು ಇವರಿಬ್ಬರನ್ನೂ ಕೆಲಸದಿಂದ ತೆಗೆದು ಹಾಕುವಂತೆ ಆಗ್ರಹಿಸಿದರು.
ಕಾರ್ಯದಸರ್ಿ ಸಿ.ಕೆ.ಕುಂಬಾರ, ಕ್ಲಕರ್್ ಅಗ್ಗಿಮಠ ಇವರು ಅಬ್ಬಿಹಾಳ ಗ್ರಾಮದ ಓರ್ವ ಸದಸ್ಯರ ಎಸ್ಬಿ ಖಾತೆಯ ರು.70000, ಕುಂಟೋಜಿಯ ಚನ್ನಪ್ಪ ಮಾಮನಿ ಇವರ ಸಾಲದ ಖಾತೆಯ 25000 ರೂ. ಹಣಕ್ಕೆ ಜೋರು ಮಾಡಿ ಸಹಿ ಮಾಡಿಸಿಕೊಂಡು ಅವರಿಗೆ ಹಣ ಕೊಡದೆ ವಂಚಿಸಿ ಆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ರೇಷನ್ ಹಂಚುವುದರಲ್ಲೂ ಗೋಲ್ಮಾಲ್ ಮಾಡುತ್ತಿದ್ದಾರೆ. ಸಂಘದ ಅಧ್ಯಕ್ಷೆ ಹಾಗೂ 6 ಜನರಿಂದ ಸಂಗ್ರಹಿಸಿದ ಎಫ್ಡಿ ಠೇವು ಹಣವನ್ನು ಮರಳಿ ಕೊಡಲು ಠರಾವು ಮಾಡಿದ್ದರೂ ಹಣ ಮರಳಿ ಕೊಟ್ಟಿಲ್ಲ. ಸಕರ್ಾರದ ಆದೇಶ ಎಂದು ಹೇಳಿ ರು.10000 ಹಣವನ್ನು ರೈತರಿಂದ ಡಿಪಾಜಿಟ್ ಮಾಡಿಕೊಂಡಿದ್ದು ಈಗ ಬರಗಾಲ ಇರುವುದರಿಂದ ಆ ಡಿಪಾಜಿಟ್ ಹಣ ಮರಳಿ ಕೊಡುವಂತೆ ಕೇಳಿದರೆ ಸರಿಯಾಗಿ ಸ್ಪಂಧಿಸುತ್ತಿಲ್ಲ. ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾರಣ ಇಬ್ಬರಿಂದಲೂ ರಾಜಿನಾಮೆ ಪಡೆದುಕೊಂಡು ಇವರಿಬ್ಬರನ್ನೂ ಸಂಘದಿಂದ ಹೊರಹಾಕಬೇಕು ಎಂದು ಸಂಘದ ಅಧ್ಯಕ್ಷರಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರೈತರಿಂದ ಡಿಪಾಜಿಟ್ ರೂಪದಲ್ಲಿ ಪಡೆದುಕೊಂಡಿರುವ ರು.10000 ಎಫ್ಡಿ ಹಣವನ್ನು ಮರಳಿ ಕೊಡಿಸಬೇಕು. ಕೊಡದಿದ್ದಲ್ಲಿ ರೈತರೆಲ್ಲ ಸಾಮೂಹಿಕವಾಗಿ ಪ್ರತಿಭಟಿಸಬೇಕಾಗುತ್ತದೆ. ಅದಕ್ಕೂ ಸ್ಪಂಧಿಸದಿದ್ದರೆ ಸಾಮೂಹಿಕ ಆತ್ಮಹತ್ಯೆ ನಿಧರ್ಾರ ಕೈಕೊಳ್ಳಬೇಕಾಗುತ್ತದೆ ಎಂದು ತಹಸೀಲ್ದಾರ್ ಎಂ.ಎಸ್.ಬಾಗವಾನ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಲಾಗಿದೆ.
ಪ್ರಮುಖರಾದ ಚನ್ನಪ್ಪ ಸಜ್ಜನ, ಚನ್ನಪ್ಪ ಕಾಟಿ, ಪಿ.ಬಿ.ಹೂಗಾರ, ಶರಣಪ್ಪ ಬಾಗೇವಾಡಿ, ಎಚ್.ಬಿ.ಬಡಿಗೇರ, ಹಣಮಂತ ಭಜಂತ್ರಿ, ಜಿ.ಎಸ್.ಕೋಳೂರ, ಎಂ.ಎಲ್.ವಾಲಿಕಾರ, ಪಿ.ಸಿ.ಸಜ್ಜನ, ಷಣ್ಮುಖಪ್ಪ ಪಣೇಕದಟ್ಟಿ, ವಿ.ಬಿ.ಮದರಿ, ಎಸ್.ಜಿ.ವಾಲಿಕಾರ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಇದ್ದರು.