ಲೋಕದರ್ಶನ ವರದಿ
ಅಥಣಿ 19: ವಗರ್ಾವಣೆ ಕರಡು ನಿಯಮ ಬದಲಾಯಿಸುವಂತೆ, ರಾಜ್ಯ ಸಕರ್ಾರ ಶಿಕ್ಷಕರ ವಗರ್ಾವಣೆಯಲ್ಲಿ ಆಗಿರುವ ಲೋಪದಫಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಪಟ್ಟಣದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಜಿ ಎಂ ಹಿರೇಮಠ ನೇತೃತ್ವದಲ್ಲೊ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ನೇಮಗೌಡ ಮೂಲಕ ಸಕರ್ಾರಕ್ಕೆ ಮನವಿ ನೀಡಿದರು.
ಈ ಸಮಯದಲ್ಲಿ ಜಿ ಎಂ ಹಿರೇಮಠ ಮಾತನಾಡಿ, 20% ಖಾಲಿ ಹುದ್ದೆ ಇರುವ ತಾಲೂಕುಗಳಿಂದ ವಗರ್ಾವಣೆ ಇಲ್ಲ ಎಂಬ ಅಂಶವನ್ನು ಕೈಬಿಡಬೇಕು, (ಕಳೆದ ಮೀಸಲಿಟ್ಟ ಘಟಕ ಪರಿಗಣಿಸಿ) ಎಲ್ಲ ತಾಲೂಕುಗಳಿಂದ ಅಂತರ ಘಟಕ ವಗರ್ಾವಣೆ ಬಯಸುವ ಶಿಕ್ಷಕರಿಗೆ ಅವಕಾಶ ಕಲ್ಪಿಸಬೇಕು. ಎಂದು ಆಗ್ರಹಿಸಿದರು.
ನೀಯಮಾವಳಿ ಪ್ರಕಾರ ವಗರ್ಾವಣೆ ಹೊಂದಲು ಒಬ್ಬ ಶಿಕ್ಷಕ ಕನಿಷ್ಠ 3 ವರ್ಷ ಒಂದು ವಲಯದಲ್ಲಿ ಸೇವೆ ಸಲ್ಲಿಸಬೇಕೆಂದು ನಿಯಮವಿದೆ. ಇದರಿಂದ ವಗರ್ಾವಾಗಿರುವ ಶಿಕ್ಷಕ/ಕಿಯರೇ ಪದೇ ಪದೇ ವರ್ಗವಾಗುತ್ತಿದ್ದು, ಆದ್ದರಿಂದ ವಗರ್ಾವನೆ ಹೊಂದಲು ಕನಿಷ್ಠ ಒಂದು ಸ್ಥಳದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿರಬೆಕು. ಆಗ ಬದಲಾಯಿಸಬೇಕು. ಅದರಂತೆ(ಪಟ್ಟಣ,ನಗರ ಮತ್ತು ಗ್ರಾಮೀಣ ಹಾಗೂ ಬೆರೆ ತಾಲೂಕುಗಳಿಗೆ)ಸಿ ಯಿಂದ, ಸಿ ಸಿ ಯಿಂದ, ಬಿ ಸಿ ಯಿಂದ, ಎ ಬಿ ಯಿಂದ, ಎ. ಹಾಗೂ ಬಿ.ಯಿಂದ, ಬಿ ಈ ಸ್ಥಳಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳಲ್ಲಿ ಮುಕ್ತಾವಾಗಿ ವಗರ್ಾವಣೆ ಹೊಂದಲು ಅವಕಾಶ ಕಲ್ಪಿಸಬೇಕು, ಸೇವಾ ಹಿರಿತನ ಪರಿಗಣಿಸಿ ವಗರ್ಾವಣೆ ಮಾಡಬೇಕು. ಸಿಆರ್ಪಿ/ ಬಿಆರಪಿ ವೃಂದದವರಿಗೂ ಎ ಬಿ ಸಿ ವಲಯಗಳಿಗೆ ವಗರ್ಾವಣೆ ಹೊಂದಲು ಅವಕಾಶ ನೀಡಬೇಕು. 1 ರಿಂದ 5ನೇ ತರಗತಿ ಶಾಲೆಗಳಲ್ಲಿ ವಿಜ್ಞಾನ, ಇಂಗ್ಲೀಷ, ಶಿಕ್ಷಕರ ಕೊರತೆ ಇದ್ದು, ಆ ಶಾಲೆಗಳನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಹೆಚ್ಚಿನ ಹುದ್ದೆ ಸೃಷ್ಟಿಸಿ ವಗರ್ಾವಣೆ ಹೊಂದಲು ಅವಕಾಶ ನೀಡಬೇಕು. ಹಿಂದಿ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಎಲ್ಲ ಶಿಕ್ಷಕರಿಗೂ ಹೆಚ್ಚಿನ ಹುದ್ದೆ ಸೃಷ್ಟಿಸಿ ವಗರ್ಾವನೆ ಹೊಂದಲು ಅವಕಾಶ ಕಲ್ಪಿಸಬೇಕು. ಎಂದು ಅವರು ಸಕರ್ಾರವನ್ನು ವತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಎ ಬಿ ಕುಟಕೋಳಿ, ಪಿ ಎಚ್ ಪತ್ತಾರ, ಬಿ ಎ ಮುಜಾವರ, ವಿ ಎ ಕನ್ನೂರ, ಸಿ ಆರ್ ಜಂಗಮಶೇಟ್ಟಿ, ಎಂ ಎಸ್. ಸಕ್ರಿ, ಎಸ್ ಬಿ ಕುಲಕರ್ಣಿ ಸೇರಿ ಮತ್ತಿತರರಿದ್ದರು.