ಲೋಕದರ್ಶನ ವರದಿ
ಯಲ್ಲಾಪುರ, 7 : ಕನರ್ಾಟಕ ರಾಜ್ಯ ಮಾಧ್ಯಮಿಕ ಸಂಘದ ಆಶ್ರಯದಲ್ಲಿ ತಮ್ಮ ಅನೇಕ ವರ್ಷಗಳ ಬೇಡಿಕೆ ಮತ್ತು ರಾಜ್ಯ ಶ್ರೇಷ್ಟ ನ್ಯಾಯಾಲಯದ ಆದೇಶವನ್ನು ಸಕರ್ಾರ ಪುರಸ್ಕರಿಸದೇ ಅನುದಾನಿತ ಶಾಲೆಯ ಶಿಕ್ಷಕರಿಗೆ ತೀವ್ರ ಅನ್ಯಾಯ ಮಾಡಿದೆ. ಈ ಕುರಿತು ಬೆಳಗಾವಿನಲ್ಲಿ ನಡೆಯುವ ಅಧಿವೇಶನದಲ್ಲಿ ಸಕರ್ಾರದ ಗಮನ ಸೆಳೆಯುವಂತೆ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರರಿಗೆ ತಾಲೂಕಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಸ್.ಭಟ್ಟ ನೇತ್ರತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಬಸವರಾಜ ಹೊರಟ್ಟಿಯವರು ಸಚಿವರಿದ್ದಾಗ ಅನುದಾನಕ್ಕೆ ಒಳಪಡುವ ಆದೇಶ ನೀಡಿದ್ದರು. ಅದರಂತೆ ಲಕ್ಷಾಂತರ ಶಿಕ್ಷಕರಿಗೆ ಅನೇಕ ವರ್ಷಗಳ ಕಾಲ ದುಡಿದವರಿಗೆ ನ್ಯಾಯ ದೊರಕಿತ್ತು. ಆದರೆ ಅವರಿಗೆ ಪಿಂಚಣಿಯನ್ನೂ ನೀಡಿಲ್ಲ. ನೂತನ ಪಿಂಚಣಿಯ ವ್ಯವಸ್ಥೆಯನ್ನೂ ಅಳವಡಿಸಿಲ್ಲ. ಅಲ್ಲದೇ ಇಂದು ಸೇರಿದ ಶಿಕ್ಷಕರ ಸಂಬಳಕ್ಕಿಂತಲೂ ಸಂಬಳ ತೀರಾ ಕಡಿಮೆಯಿದೆ. ಈ ಕುರಿತು ಶ್ರೇಷ್ಟ ನ್ಯಾಯಾಲಯ ಆದೇಶ ಮಾಡಿದ್ದರೂ ಆದೇಶವನ್ನು ಪುರಸ್ಕರಿಸಿಲ್ಲ ಈ ಕಾರಣಕ್ಕೆ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಅನಿದರ್ಿಷ್ಟ ಅವಧಿಯವರೆಗೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ. ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಹೋಲಿ ರೋಜರಿ ಪ್ರೌಢಶಾಲೆಯ ಶಿಕ್ಷಕ ಎಂ.ರಾಜಶೇಖರ, ಸಿ.ಎಸ್.ಚಂದ್ರಶೇಖರ, ಅಂತೋನಿ ರೋಡ್ರಿಗಿಸ್, ಇಡಗುಂದಿ ವಿಶ್ವದರ್ಶನದ ಶಿಕ್ಷಕರಾದ ಪ್ರಸನ್ನ ಹೆಗಡೆ, ನವೀನಕುಮಾರ, ವಾಯ್.ಟಿ.ಎಸ್.ಎಸ್ನ ಶಿಕ್ಷಕರಾದ ವಿನೋದ ಭಟ್ಟ, ಕೆ.ಸಿ.ಮಾಳ್ಕರ, ವಿಶ್ವದರ್ಶನ ಕನ್ನಡ ಮಾದ್ಯಮ ಪ್ರೌಢಶಾಲೆಯ ಶಿಕ್ಷಕರಾದ ಮುಕ್ತಾಶಂಕರ, ಮಹೇಶ ನಾಯ್ಕ ಮುಂತಾದ ಶಿಕ್ಷಕರು ಉಪಸ್ಥಿತರಿದ್ದರು.