ಧರ್ಮ ಸಾಮಾಜಿಕ ಜೀವನದ ಬುನಾದಿ: ಸಿದ್ಧಲಿಂಗ ಶ್ರೀಗಳು

ಲೋಕದರ್ಶನ ವರದಿ

ಧಾರವಾಡ 14: ಧರ್ಮ ದೇವರು ಮಾನವನನ್ನು ನೈತಿಕ ತಳಹದಿಯ ಮೆಲೆ ಬದುಕುವಂತೆ ಪ್ರೇರೆಪಿಸುತ್ತದೆ. ದೇಹಕ್ಕೆ ಆಹಾರ, ಮನಸ್ಸಿಗೆ ನೆಮ್ಮದಿ, ಆತ್ಮ ಕಲ್ಯಾಣಕ್ಕೆ ದೈವ ಸಂಸ್ಕಾರ ಅತಿ ಅವಶ್ಯವೆಂದು ಇನಾಮಹೊಂಗಲದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ಕರಿಯಮ್ಮದೇವಿ ದೇವಸ್ಥಾನ ಟ್ರಸ್ಟ ಕಮೀಟಿ ಶಾಂತಿ ನಿಕೇತನ ನಗರ ಧಾರವಾಡ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ನಿಗದಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಶಾಂತಿನಿಕೇತನ ನಗರದ ಸಾಮೂಹಿಕ ದುಗರ್ಾ ಪೂಜೆ ಹಾಗೂ ಧಾಮರ್ಿಕ ಸಭಾ ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಸ್ವಾಮಿಗಳು ಆಶೀರ್ವಚನ ನೀಡಿದರು. ನವರಾತ್ರಿಯ ಶುಭ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ಸಾಮೂಹಿಕವಾಗಿ ನವದುಗರ್ೆಯರ ಪೂಜೆ ಮಾಡಿರುವುದು ಮಹಿಳೆಯರಲ್ಲಿ ಇನ್ನೂ ದೈವಿ ಶಕ್ತಿ ಇದೆ ಎಂಬುದನ್ನು ಸಾಬೀತು ಪಡಿಸಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆ.ಎಸ್.ಎಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಆಧುನಿಕ ಯುಗದ ಭರಾಟೆಯಲ್ಲಿ ಕುಟುಂಬದ ಸದಸ್ಯರೆ ಅಪರಿಚಿತರಾಗಿರುವ ಕಾಲದಲ್ಲಿ ಎಲ್ಲ ಸುಮಂಗಲೆಯರು ಪವಿತ್ರ ಕ್ಷೇತ್ರ ಕರಿಯಮ್ಮನ ಸನ್ನಿಧಿಯಲ್ಲಿ ದುಗರ್ಾಪೂಜೆಯಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತಸದ ವಿಚಾರ. ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗಾಗಿ ಕೇವಲ ಧಾಮರ್ಿಕ ಕಾರ್ಯಕ್ರಮಗಳನ್ನು ರೂಪಿಸಿ ಮಹಿಳೆಯರನ್ನು ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರುವಲ್ಲಿ ವಿಶೇಷ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಆರೋಗ್ಯ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಸೇವೆ ಅನನ್ಯ. ಅದರೊಟ್ಟಿಗೆ ಧಾಮರ್ಿಕ ಕಾರ್ಯಕ್ರಮಗಳನ್ನು ರೀತಿ ಆಯೋಜಿಸುತ್ತ, ಅಧೋಗತಿಯತ್ತ ಸಾಗುತ್ತಿರುವ ಸಮಾಜಕ್ಕೆ ಸಂಜೀವಿನಿ ಆಗಿದ್ದಾರೆ ಎಂದು ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಹೇಳಿದರು.

ಕಷ್ಟ ಬಂದಾಗಲೇ ದೇವರ ನೆನಪಾಗುವದು ವಾಡಿಕೆ ಆದರೆ ನಮ್ಮ ಆತ್ಮ ಸಂತೋಷ, ಮನಸ್ಸಿನ ನೆಮ್ಮದಿಗಾದರು ನಾವು ದೇವರನ್ನು ನೆನೆಯಲೇಬೆಕು ಪೂಜೆಯಲ್ಲಿ ಪಾಲ್ಗೋಂಡಾಗ ದೊರೆಯುವ ನೆಮ್ಮದಿ ಮತ್ತೆಲ್ಲೂ ದೊರೆಯಲು ಸಾಧ್ಯವಿಲ್ಲ. ಒಳ್ಳೆಯ ಆಚಾರ, ವಿಚಾರಗಳು ದೊರೆಯುವುದೇ ಮಂದಿರಗಳಲ್ಲಿ. ಜಾತಿ, ಮತಗಳ ಭೇಧವಿಲ್ಲದೇ ನಡೆಯುವ ಸಾಮೂಹಿಕ ದುಗರ್ಾಪೂಜೆ ನಿಜಕ್ಕೂ ಸರ್ವಧರ್ಮಗಳ ಸಮನ್ವಯಕ್ಕೆ ತಾಜಾ ಉದಾಹರಣೆ ಎಂದು ಗ್ರಾಮಾಭಿವೃದ್ಧಿ ಧಾರವಾಡದ ನಿದರ್ೇಶಕ ಎಂ.ದಿನೇಶ ಹೇಳಿದರು.

ಶಾಂತಿ ನಿಕೇತನ ನಗರದ ಕರಿಯಮ್ಮ ದೇವಿಯ ಉಪಾಸಕ ಶ್ರೀಶೈಲ ಸಾಣಿಕೊಪ್ಪರವರು ಮಾತನಾಡಿ ದೇವಿಯು ಅತ್ಯಂತ ಜಾಗೃತ ದೇವಿಯಾಗಿದ್ದು, ಪ್ರತಿ ವರ್ಷವೂ ವಿಜ್ರಂಭಣೆಯಿಂದ ನವರಾತ್ರಿ ಆಚರಿಸುತ್ತಿದ್ದು, ಬಾರಿಯೂ ಸಾಮೂಹಿಕ ದುಗರ್ಾಪೂಜೆ ಇದಕ್ಕೆ ಇನ್ನೂ ಮೆರಗು ನೀಡಿದೆ ಎಂದು ಹೇಳಿದರು.

ಸಾಮೂಹಿಕ ದುಗರ್ಾಪೂಜೆಯಲ್ಲಿ ಸುಮಾರು 1000 ಸುಮಂಗಲೆಯರು ರಘುಪತಿ ತಂತ್ರಿ ಇವರ ಮಾರ್ಗದರ್ಶನದಲ್ಲಿ ಪಾಲ್ಗೊಂಡು ಪೂಜಾ ಕಾರ್ಯ ನೆರವೇರಿಸಿದರು. ಕರಿಯಮ್ಮ ದೇವಿ ಟ್ರಸ್ಟ ವತಿಯಿಮದ ಡಾ. ಅಜಿತ ಪ್ರಸಾದ, ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಎಂ.ದಿನೇಶ ಇವರನ್ನು ಸನ್ಮಾನಿಸಲಾಯಿತು.

ಮಹಾವೀರ ಉಪಾಧೆ್ಯೆಯವರನ್ನು ಕರಿಯಮ್ಮ ದೇವಿ ಟ್ರಸ್ಟ ಕಮಿಟಿಗೆ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿರುವದಾಗಿ ಕಾರ್ಯದಶರ್ಿ ಎನ್.ಎಚ್ ಕೋನರೆಡ್ಡಿ ಹೇಳಿದರು. ಅಧ್ಯಕ್ಷತೆಯನ್ನು ಪೂಜಾ ವ್ಯವಸ್ಥಾಪನ ಅಧ್ಯಕ್ಷೆ ಕೌಸರಬಾನು ವಹಿಸಿದ್ದರು ಜಯಂತಿ ಸ್ವಾಗತಿಸಿದರು. ಯೋಜನಾಧಿಕಾರಿ ಉಲ್ಲಾಸ ಮೆಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲೀಲಾ ನಿರೂಪಿಸಿದರು. ಸಿ. ಜೆ ಸಾಣಿಕೊಪ್ಪ, ವಿಶ್ವನಾಥ ಎಲಿಗಾರ, ಸಮಾರಂಭದಲ್ಲಿ ಉಪಸ್ಥಿತರಿದ್ದರು.