ಅಪಹೃತ ಭಾರತೀಯರಿಬ್ಬರ ಬಿಡುಗಡೆ: ಸುಶ್ಮಾ ಸ್ವರಾಜ್


ಹೊಸದಿಲ್ಲಿ : ವಾಣಿಜ್ಯ ಭೇಟಿಗಾಗಿ  ಮಲೇಶ್ಯಕ್ಕೆ ತೆರಳಿದ್ದ ವೇಳೆ ಅಪಹೃತರಾಗಿದ್ದ ಇಬ್ಬರು ಭಾರತೀಯರನ್ನು ಪಾರುಗೊಳಿಸಲಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ದೃಡೀಕರಿಸಿದ್ದಾರೆ. 

ವಾಣಿಜ್ಯ ಪ್ರವಾಸಾರ್ಥ ಮಲೇಶ್ಯಕ್ಕೆ ತೆರಳಿದ್ದ ಆರ್ ವಿ ವೈದ್ಯ ಮತ್ತು ಕೆ ಪಿ ವೈದ್ಯ ಅವರನ್ನು ಇದೇ ಆಗಸ್ಟ್ 3ರಂದು ಅಪಹರಿಸಲಾಗಿತ್ತು.  

ಮಲೇಶ್ಯದಲ್ಲಿನ ಭಾರತೀಯ ಹೈಕಮಿಶನರ್ ಮೃದುಲ್ ಕುಮಾರ್ ಮತ್ತು ಅವರ ತಂಡದವರು, ಮಲೇಶ್ಯ ಪೊಲೀಸರು ನಡೆಸಿರುವ ಪ್ರಯತ್ನದ ಫಲವಾಗಿ ಇಬ್ಬರೂ ಭಾರತೀಯ ಪ್ರಜೆಗಳನ್ನು ಪಾರುಗೊಳಿಸಲಾಗಿದೆ ಎಂದು ತಿಳಿಸಲು ಸಂತೋಷ ಪಡುತ್ತೇನೆ ಎಂಬುದಾಗಿ ಸುಶ್ಮಾ ಸ್ವರಾಜ್ ಟ್ವಿಟರ್ನಲ್ಲಿ ಹೇಳಿದ್ದಾರೆ. 

ಇದೇ ವೇಳೆ ಎಂ ವಿ ಮಹಷರ್ಿ ವಾಮದೇವ ಹಡಗಿನ ಸಿಬಂದಿಗಳಾದ ರೋಹಿತ್ ಪಾಲ್ ಮತ್ತು ರಿಷಬ್ ಗುಪ್ತಾ ಅವರು ಹಡಗಿನಲ್ಲಿ ಎಸಿ ಮತ್ತು ಬೆಳಕು ಇಲ್ಲದಿದ್ದ ಕಾರಣಕ್ಕೆ ಹೀಟ್ ಸ್ಟ್ರೋಕ್ ಗೆ ಗುರಿಯಾಗಿದ್ದು ಅವರನ್ನು ಮರಳಿ ದೇಶಕ್ಕೆ ಕರೆ ತರಲಾಗಿದೆ ಎಂದು ಸಚಿವೆ ಸುಶ್ಮಾ ತಿಳಿಸಿದ್ದಾರೆ.