ಗವಿಸಿದ್ಧೇಶ್ವರ ನರ್ಸಿಂಗ್ ಕಾಲೇಜಿಗೆ 100ಅ ಉತ್ತಮ ಫಲಿತಾಂಶ
ಕೊಪ್ಪಳ 04: ನಗರದ ಗವಿಸಿದ್ಧೇಶ್ವರ ವಿದ್ಯಾವರ್ದಕ ಟ್ರಸ್ಟನ ಶ್ರೀ ಗವಿಸಿದ್ಧೇಶ್ವರ ನರ್ಸಿಂಗ್ ಕಾಲೇಜಿಗೆ 100ಅ ಉತ್ತಮ ಫಲಿತಾಂಶ ಲಿಭಿಸಿದೆ. ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸೆಸ್ ಇವರು 2024-25ನೇ ಸಾಲೀನ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದಲಾಗಿದ್ದು, ಕಾಲೇಜಿನ ಭಾವನಾ (ಪ್ರಥಮ 81.5ಅ), ಪವಿತ್ರಾ (ದ್ವಿತೀಯ 78.2ಅ), ದೀಪಾ (ತೃತೀಯ 77.4.ಅ) ಸ್ಥಾನದಲ್ಲಿ ತೇರ್ಗಡೆ ಹೊದಿರುತ್ತಾರೆ.
ಒಟ್ಟು 37 ವಿದ್ಯಾರ್ಥಿಗಳಲ್ಲಿ 7 ಡಿಸ್ಟಿಂಕ್ಷನ್, 30 ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರು ಹಾಗೂ ಸಿಬ್ಬಂಧಿ ವರ್ಗ ಹರ್ಷ ವ್ಯಕ್ತಪಡಿಸಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.