ರಾಣೇಬೆನ್ನೂರು 3:ಕುರಿ ಉಣ್ಣೆ ಉತ್ಪಾದಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಸಂಘದಿಂದ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಿಂದಾಗಿ 2018-19 ನೇ ಸಾಲಿನ ಉಣ್ಣೆ ವಲಯ ಅಭಿವೃದ್ದಿ ಯೋಜನೆಯಡಿ 3.50 ಲಕ್ಷ ರೂ.ಗಳ ಉಣ್ಣಿ ಕತ್ತರಿಸುವ ಯಂತ್ರವನ್ನು ಖರೀದಿಸಲು ಅನುದಾನ ಬಿಡುಗಡೆಗೊಳಿಸಿದ್ದು. ಆದರಂತೆ ಯಂತ್ರವನ್ನು ಖರೀದಿಸಲಾಗಿದೆ. ಇದರಿಂದ ಕುರಿ ಉಣ್ಣಿ ಉತ್ಪಾದಕರಿಗೆ ಸಹಾಯವಾಗುವುದರ ಜೊತೆಗೆ ಉಣ್ಣೆಯನ್ನು ಒಂದೇ ರೀತಿಯಲ್ಲಿ ಬರುತ್ತದೆ. ಆದರೇ ಯಂತ್ರಕ್ಕೆ ಜನರೇಟರ್ ಅವಶ್ಯವಿದ್ದು ಸಕರ್ಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಸಂಘದ ಅಧ್ಯಕ್ಷ ನೀಲಕಂಠಪ್ಪ ದೇವರಗುಡ್ಡ ಹೇಳಿದರು. ತಾಲೂಕ ಕುರಿ ಮತ್ತು ಉಣ್ಣಿ ಉತ್ಪಾದಕರ ಹಾಗೂ ನೇಕಾರರ ವಿವಿದ್ದೋಶಗಳ ಸಹಕಾರಿ ಸಂಘಕ್ಕೆ 2018-19 ನೇ ಸಾಲಿನ ಉಣ್ಣೆ ವಲಯ ಅಭಿವೃದ್ದಿ ಯೋಜನೆಯಡಿ ಸಕರ್ಾರದಿಂದ 3.50 ಲಕ್ಞ ರೂಗಳ ಉಣ್ಣಿ ಕತ್ತರಿಸುವ ಯಂತ್ರವನ್ನು ಸಂಘದ ಅಧ್ಯಕ್ಷ ನೀಲಕಂಠಪ್ಪ ದೇವರಗುಡ್ಡ ಸಾರ್ವಜನಿಕ ಬಳಕೆಗೆ ಚಾಲನೆ ನೀಡಿದರು.
ಹಾವೇರಿ ಕೈಮಗ್ಗ ಹಾಗೂ ಜವಳಿ ಇಲಾಖೆ ಉಪನಿದರ್ೇಶಕ ಗಂಗಯ್ಯ ಮತ್ತು ಜಿಲ್ಲಾ ಪ್ರವರ್ಧನ ಅಧಿಕಾರಿ ತಿಪ್ಪೇಶಯ್ಯ ಕುರಿ ಉಣ್ಣೆ ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಕುರಿ ಉಣ್ಣೆ ಉತ್ಪಾದಕರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ದುರಗಪ್ಪ ಬೇವಿನಹಳ್ಳಿ, ಹುಚ್ಚಪ್ಪ ಗೊರವರ, ಆಂಜನೇಯಪ್ಪ ಅಣಜಿಯವರ, ನಾಗಪ್ಪ ಓಣಕೊಟ್ರಿಯವ, ಸಿದ್ದಣ್ಣ ದೇವರಗುಡ್ಡ, ಯಲ್ಲಪ್ಪ ತೆಗ್ಗಿನಮನಿ, ಮೂಕಪ್ಪ ಜಿವಪ್ಪನವರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.