ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ

Recruitment program for officers

ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ  

ಬಳ್ಳಾರಿ 12:  ಜೆಸಿಐ ಸಂಸ್ಥೆಯ ವತಿಯಿಂದ ನಗರದ ಶ್ರೀಮೇಧ ಕಾಲೇಜಿನಲ್ಲಿ ಜೆಸಿಐ ಬಳ್ಳಾರಿ ಸ್ಟೀಲ್ ಸಿಟಿ ಮತ್ತು ಜೆಸಿಐ ಬಳ್ಳಾರಿ ರಾಕ್ ಸಿಟಿ ಘಟಕಗಳ 2025ರ  ನೂತನ ಘಟಕಾಧ್ಯಕ್ಷರ ಮತ್ತು ಪದಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   

ಈ ಕಾರ್ಯಕ್ರಮದ ಉದ್ಘಾಟಕರಾಗಿ 2205ರ ವಲಯಾಧ್ಯಕ್ಷರಾದ ಜೆಸಿ ಗೌರೀಶ್ ಭಾರ್ಗವ್, ಮುಖ್ಯ ಅತಿಥಿಗಳಾಗಿ ಬಳ್ಳಾರಿ ಚೇಂಬರ್ಸ್‌ ಆಫ್ ಕಾಮರ್ಸ್‌ ನ ಅಧ್ಯಕ್ಷರಾದ ಸಿಎ ಯಶ್ವಂತ್ ರಾಜ್ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಶಿಕ್ಷಣ ತಜ್ಞರು ಸುರೇಶ್ ಬಾಬು, ವಲಯ ಉಪಾಧ್ಯಕ್ಷರಾದ ಜೆಸಿ ಪ್ರಮೋದ್ ಶಾಸ್ತ್ರಿ, ಜೆಸಿ ಮಧುಸೂಧನ್ ನಾವಡ ಇದ್ದರು, ಇದೇ ಸಂದರ್ಭದಲ್ಲಿ ಜೆಸಿಐ ಬಳ್ಳಾರಿ ಸ್ಟೀಲ್ ಸಿಟಿಯ ಅಧ್ಯಕ್ಷರಾದ ಜೆಸಿ ಸಾಗರ್ ಕುಲಕರ್ಣಿ ಮತ್ತು ಜೆಸಿಐ ರಾಕ್ ಸಿಟಿ ಅಧ್ಯಕ್ಷರಾದ ಜೆಸಿ ಡಾ.ವಿಜಯ್ ಕುಮಾರ್ ರವರು ಎರಡು ಘಟಕಗಳ ಅಧ್ಯಕ್ಷರು ಈ ವರ್ಷದ ತಮ್ಮ ಸಾಮಾಜಿಕ ಸೇವೆಯ ವಾರ್ಷಿಕ ವರದಿಯನ್ನು ಸಭೆಗೆ ಪ್ರಸ್ತುತ ಪಡಿಸಿ ನೂತನ ಘಟಕಾಧ್ಯಕ್ಷರಾದ ಜೆಸಿಐ ಬಳ್ಳಾರಿ ಸ್ಟೀಲ್ ಸಿಟಿಯಿಂದ ಜೆಸಿ ಉಮಾಕಾಂತರೆಡ್ಡಿ ಮತ್ತು ಜೆಸಿಐ ಬಳ್ಳಾರಿ ರಾಕ್ ಸಿಟಿಯಿಂದ ಜೆಸಿ ಮಹೇಶ್ ರವರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಇಬ್ಬರೂ ಅಧ್ಯಕ್ಷರಿಗೆ ಪ್ರಮಾಣ ವಚನ ಸ್ವೀಕರಿಸಿ 2025ರ ವರ್ಷವನ್ನು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಜೆಸಿಐ ನ ತತ್ವ ಸಿದ್ದಾಂತಗಳನ್ನು ಗೌರವಿಸುತ್ತಾ  ಜೆಸಿಐನ  ಎಲ್ಲಾ ವಿಭಾಗಗಳಿಂದಲೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುತ್ತೇವೆಂದು ತಮ್ಮ ಒಪ್ಪಿಗೆಯ ಮಾತುಗಳನ್ನು ಸಭೆಗೆ ತಿಳಿಸಿದರು.  

ಇಂದಿನ ಜಗತ್ತು ಕೌಶಲಗಳನ್ನು ಆದರಿಸಿ ಮುನ್ನಡೆಯುತ್ತಿದೆ, ಇಂದಿನ ಪ್ರತಿಯೊಬ್ಬ ಯುವಕರಿಗೂ ಕೌಶಲಗಳ ಅಗತ್ಯವಿದೆ ಅದನ್ನು ನಾವೆಲ್ಲರೂ ಜೊತೆಯಾಗಿ ಸಮಾಜಕ್ಕೆ ನೀಡೋಣವೆಂದು ಉಪಸ್ಥಿತರಿಂದ ಮುಖ್ಯ ಅತಿಥಿಗಳಾದ ಯಶ್ವಂತ್ ರಾಜ್ ಅವರು ಮಾತನಾಡಿದರು. ಐತಿಹಾಸಿಕವಾದ ನಮ್ಮ ಬಳ್ಳಾರಿಯ ಕೊಡುಗೆ ದೇಶಕ್ಕೆ ಅಪಾರವಾದುದಿದೆ,  ಜೆಸಿಐ ಸಂಸ್ಥೆಯಿಂದ ತರಬೇತಿಗಳು, ನಾಯತ್ವಗುಣಗಳನ್ನು ಯುವಕರಿಗೆ ನೀಡಿ ಅವರನ್ನು ದೇಶದ ಉತ್ತಮ ನಾಗರಿಕರನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಯೆಂದು ಗೌರವಾನ್ವಿತ ಅತಿಥಿಗಳಾದ ಸುರೇಶ್ ಬಾಬು ರವರು ತಿಳಿಸಿದರು. 

ಇದೇ ಸಂದರ್ಭದಲ್ಲಿ ಸಂಸ್ಥೆಗೆ ಹೊಸ ಸದಸ್ಯರ ಸೇರೆ​‍್ಡಯಾಯಿತು. ನೂರಾರು ಸಂಖ್ಯೆಯಲ್ಲಿರುವ ಸಂಸ್ಥೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಜೆಸಿಐ ಫೌಂಡೇಶನ್ ಸ್ಟಾರ್ ಎಸ್‌.ಪಿ.ವೆಂಕಟೇಶ್, ಜೆಸಿಐ ಫೌಂಡೇಶನ್ ಸ್ಟಾರ್ ಸುಧಾಕರ್, ಜೆಸಿ ರಾಘವೇಂದ್ರ ಅರಸ್, ಜೆಸಿ ವಟ್ಟಮ್ ಆಧಿತ್ಯ, ಜೆಸಿ ಪವನ್ ಕುಮಾರ್, ಜೆಸಿ ರಘು ಪ್ರಸಾದ್, ಜೆಸಿ ವಹಿದಾ ಚಂದನ್, ಜೆಸಿ ದಾಮೋದರ, ಜೆಸಿ ಪಂಪಾಪತಿ, ಜೆಸಿ ಮಲ್ಲಿಕಾರ್ಜುನ, ಜೆಸಿ ರವಿ ಕುಮಾರ್, ಜೆಸಿ ವಿಷ್ಣು ಕುಮಾರ್, ಜೆಸಿ ಡಾ.ಪ್ರಕಾಶ್ ಪಾಟಿಲ್ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.