ಲೋಕದರ್ಶನ ವರದಿ
ಗಾನಗಾವತಿ 10: ಈಗಿನ 100 ಹಾಸಿಗೆ ಆಸ್ಪತ್ರೆಯನ್ನು 250 ಹಾಸಿಗೆ ಮಾಡುವಂತೆ ತಾವು ಸರಕಾರಕ್ಕೆ ಶಿಫಾರಸ್ಸು ಪತ್ರ ಬರದಿರುವದಾಗಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ಸಾರ್ವಜನಿಕ ಉಪವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಪಂಚಕರ್ಮ ಚಿಕಿತ್ಸೆ ಮತ್ತು ವಿವಿಧ ನೂತನ ಘಟಕಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯಕ್ಕೆ ಪ್ರಥಮ:ಇಲ್ಲಿನ ಸರಕಾರಿ ಆಸ್ಪತ್ರೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ನುರಿತ ವೈದ್ಯರ ತಂಡ, ಮೇಲ್ದಜರ್ೆಗೆ ಏರಿದ ಆಸ್ಪತ್ರೆ ಇದಾಗಿದ್ದು ಖಾಸಗಿ ನಸರ್ಿಂಗ್ ಹೋಮ್ಗಳನ್ನು ಮೀರಿಸುವಂತಿದೆ ಎಂದು ಅವರು ತಿಳಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿಯವರ ಸತತ ಶ್ರಮದಿಂದ ಮತ್ತು ಇತರ ಸಿಬ್ಬಂದಿಗಳ ಸಹಕಾರದಿಂದ ಇದೆಲ್ಲಾ ಸಾಧ್ಯವಾಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿರುವದನ್ನು ಶ್ಲಾಘಿಸಿದ ಶಾಸಕರು ಬಡವರಿಗೆ ಈ ಆಸ್ಪತ್ರೆಯಿಂದ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.
ರಾಜ್ಯದ ಆರೋಗ್ಯ ಸಚಿವರು ಇಲ್ಲಿನ ಆಸ್ಪತ್ರೆಗೆ ವಿಶೇಷ ಗಮನ ನೀಡಿದ್ದಾರೆ. ಒಟ್ಟು 120 ಸಿಬ್ಬಂದಿ ಒಳಗೊಂಡಿರುವ ಈ ಆಸ್ಪತ್ರೆ ರಾಜ್ಯದಲ್ಲಿ ಪ್ರಥಮವಾಗಿದೆ. 10 ಜನ ನುರಿತ ಹಿರಿಯ ವೈದ್ಯರ ತಂಡ 24x7 ತಮ್ಮನ್ನು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಶ್ರಮ ಸಾರ್ಥಕವಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗುವ ಒಳ ರೋಗಿಗಳಿಗೆ ಉತ್ತಮ ದಜರ್ೆಯ ಪಥ್ಯಾಹಾರ ನೀಡುತ್ತಿದ್ದಾರೆ. ಬೆಳಿಗ್ಗೆ ಹಾಲು ಬ್ರೆಡ್, ಇಡ್ಲಿ ಚಟ್ನಿ. ಸಾಯಂಕಾಲ ಟೀ ಬಿಸ್ಕೇಟ್ ರಾತ್ರಿ ಚಪಾತಿ ಪಲ್ಯ ಮತ್ತು ಅನ್ನಸಾಂಬಾರ ಮೊಟ್ಟೆ ಬಾಳೆಹಣ್ಣು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಉತ್ತಮ ಚಿಕಿತ್ಸೆ ನೀಡುವ ಕಾರಣದಿಂದ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಸ್ಪತ್ರೆ ಮೇಲ್ಛಾವಣಿ ಮೇಲೆ 4 ಕೊಠಡಿಗಳನ್ನು ನಿಮರ್ಿಸಲು ಹೈದ್ರಾಬಾದ ಕನರ್ಾಟಕ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ ಕಾಮಗಾಗಿ ನಿರ್ವಹಿಸಲು 50 ಲ.ರು. ಜಿಲ್ಲಾಧಿಕಾರಿಗಳಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಟೆಂಡರ್ ಕರೆಯುವದು ಮಾತ್ರ ಬಾಕಿ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವೀರೇಶ ಸೂಳೆಕಲ್, ಶಿವುಕುಮಾರ ಅರಿಕೇರಿ, ನಾಗರಾಜನಾಯಕ, ತಾಳೂರುಮಠ ಶಾಲಿನಿ, ಡಿವೈಎಸ್ಪಿ ಸಂತೋಷ ಬನಹಟ್ಟಿ ಪಾಲ್ಗೊಂಡಿದ್ದರು.