ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ: ದಲಿತ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆ

ವಿಜಯಪುರ 21: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೋಲೆಗೈದ ನರಹಂತಕರಿಗೆ ಗಲ್ಲುಶಿಕ್ಷೆ ವಿಧಿಸುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ಭದ್ರತೆಗೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಸಮಿತಿಯಿಂದ ನಗರದ ಗಾಂಧಿ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳೊಂದಿಗೆ ಮಾನವ ಸರಪಳಿ ನಿರ್ಮಿಸಿ  ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ರಾ​‍್ಯಲಿ ಮೂಕಾಂತರ ಆಗಮಿಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿದಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಆಗ್ರಹಿಸಿದರು. 

ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಘಟನಾ ಸಂಚಾಲಕರಾದ ಅಕ್ಷಯ ಕುಮಾರ ಅಜಮನಿ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ ಕೋಲ್ಕತ್ತಾದ ಆರ್ಜಿಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಕೋಲೆಗೈದ ದುರಂತ ಘಟನೆ ಮಾನವ ಕೂಲವೇ ತಲೆ ತಗಿಸುವಂತಹ ನಿಚ ಕೆಲಸ ಮಾಡಿದ್ದಾರೆ, ಇದು ಇಲ್ಲಿಗೆ ನಿಲ್ಲಬೇಕು, ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಬೇಕು, ಅಂದಾಗ ಮಾತ್ರ ಇಂತಹ ಕೃತ್ಯಗಳು ಮರುಕಳಿಸುವುದಿಲ್ಲ,  

ದೇಶವ್ಯಾಪಿ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಮಹಿಳಾ ಸಿಬ್ಬಂದಿಗಳಿಗೆ ಮತ್ತು ಮಹಿಳೆಯರಿಗೆ ಆತಂಕವನ್ನು ಸೃಷ್ಟಿಮಾಡಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದು ಸಂತ್ರಸ್ತೆಯ ನ್ಯಾಯಕ್ಕಾಗಿ ವೈದ್ಯಕೀಯ ಕೆಲಸವನ್ನು ಸ್ಥಗಿತಗೊಳಿಸಿ ದೇಶದ ಮೂಲೆ ಮೂಲೆಯಲ್ಲಿ ಹೋರಾಟ ಮಾಡಲಾಗುತ್ತಿದೆ. 

ಸಂತ್ರಸ್ಥೆಯ ವೈದ್ಯಕೀಯ ಮರಣೋತ್ತರ ಪರಿಕ್ಷೆಯ ನಂತರ ಇದು ಗ್ಯಾಂಗ ರೆಪ್ ಪ್ರಕರಣವೆಂದು ಬಹಿರಂಗ ಗೊಂಡಿದ್ದು ಪೋಲಿಸ ಇಲಾಖೆಯ ವೈಪಲ್ಯ ಎದ್ದು ಕಾಣುತಿದೆ. 

ಆದ್ದರಿಂದ ಕೂಡಲೇ ವಿವಿದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ದೇಶದ ಎಲ್ಲಾ ಮಹಿಳೆಯರಿಗೆ ರಕ್ಷಣೆ ನೀಡಬೇಕು ಹಾಗೂ ಸಂವಿಧಾನದ ಅನುಚ್ಚೇದನ ಪ್ರಕಾರ ನೂತನ ಕಾನುನುಗಳನ್ನು ಜಾರಿಮಾಡಿ ಅತ್ಯಾಚಾರಕ್ಕೆ ಬಲಿಯಾದ ಮಹಿಳೆಯ ಕುಟುಂಬಕ್ಕೆ ಭದ್ರತೆ ಮತ್ತು ಸರ್ಕಾರದಿಂದ ಸರ್ಕಾರಿ ಹುದ್ದೆಯನ್ನ ನೀಡಿ, ಅತ್ಯಾಚಾರಿ ಆರೋಪಿಗಳನನ್ನು ಕೂಡಲೆ ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ, ಆರೋಪಿಗಳನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕು ಎಂದರು. 

ಈ ಸಂದರ್ಭದಲ್ಲಿ ಮಾದೇಶ ಚಲವಾದಿ, ದಾವೂದ್ ನಾಯ್ಕೊಡಿ, ಪಂಡಿತ್ ಯಲಗೋಡ, ಸದಾಶಿವ ಹೊಸಮನಿ, ಅಕ್ಷಯ್ ಹಾದಿಮನಿ, ವಿಶಾಲ್ ಪಾಟೀಲ್, ಸುಮಾ ತಡವಲಗ, ಯಮನೂರಿ ಮಾದರ, ಅನಿಲ್ ಹೊಸಮನಿ, ಪ್ರಕಾಶ್ ಹರಿಜನ್, ಸುದೀಪ್ ಹೊಸಮನಿ, ಸುದರ್ಶನ್ ಎಂ, ರಾಜಕುಮರ್ ಹೊಸಮನಿ, ಮುಸ್ಕಾಕ್ ಮಾಮದಾಪುರ, ಅಬಿಜಿತ್ ದೊಡಮನಿ, ಪ್ರಕಾಶ್ ಚಲವಾದಿ, ಸೇರಿದಂತೆ ವಿವಿಧ ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.