ಅತ್ಯಾಚಾರ: ನಟ ಮಿಥುನ್ ಚಕ್ರವತರ್ಿ ಪುತ್ರ ಮಹಾಕ್ಷಯ್ ಮದುವೆ ರದ್ದು


ಮುಂಬಯಿ : ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹಿಂದಿ ಚಿತ್ರ  ನಟ ಮಿಥುನ್ ಚಕ್ರವತರ್ಿ ಅವರ ಪುತ್ರ ಮಹಾಕ್ಷಯ್ ಮದುವೆ ರದ್ದಾಗಿದೆ.  

ಜುಲೈ 7ರಂದು ಶನಿವಾರ ಮಹಾಕ್ಷಯ್ ಮದುವೆ ತಮಿಳು ನಾಡಿನ ಉದಕ ಮಂಡಲದಲ್ಲಿ ನಡೆಯುವುದಿತ್ತು. ಆದರೆ ಅತ್ಯಾಚಾರದ ದೂರನ್ನು ಆಧರಿಸಿ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಅಂದು ಮದುವೆ ನಡೆಯಲಿದ್ದ ತಾಣಕ್ಕೆ ಆಗಮಿಸಿದ ಕಾರಣ ವಧುವಿನ ಕಡೆಯವರು ಅಲ್ಲಿಂದ ಒಡನೆಯೇ ನಿರ್ಗಮಿಸಿದರು ಎಂದು ವರದಿಯಾಗಿದೆ.  

'ಮಹಾಕ್ಷಯ್ ನನಗೆ ಮದುವೆಯಾಗುವ ಭರವಸೆ ನೀಡಿ, ಕಳೆದ ನಾಲ್ಕು ವರ್ಷಗಳಿಂದ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿ ನನ್ನನ್ನು ಗರ್ಭವತಿಯಾಗಿ ಮಾಡಿದ್ದಲ್ಲದೆ ನನಗೆ ಅದೇನೋ ಔಷಧವನ್ನು ಕೊಟ್ಟು ಗರ್ಭಪಾತವನ್ನೂ ಮಾಡಿಸಿದ್ದ ' ಎಂದು ಭೋಜಪುರಿ ನಟಿ ಪೊಲೀಸರಿಗೆ ದೂರು ನೀಡಿದ್ದಳು.  

ಮಹಾಕ್ಷಯ್ ಮತ್ತು ಆತನ ತಾಯಿ, ನಟಿ ಯೋಗಿತಾ ಬಾಲಿ ಅವರು ನನಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ; ಜೀವ ಬೆದರಿಕೆಯಿಂದ ಭೀತಳಾಗಿ ನಾನು ಮುಂಬಯಿಯಿಂದ ದಿಲ್ಲಿಗೆ ಬಂದು ನೆಲೆಸಿದ್ದೇನೆ; ನನಗೆ ನ್ಯಾಯ ಸಿಗಬೇಕು ಎಂದು ಸಂತ್ರಸ್ತೆ ಭೋಜಪುರಿ ನಟಿ ಕೋಟರ್ಿನಲ್ಲಿ ಹೇಳಿದ್ದಳು.  

ತಾವು ಬಂಧನಕ್ಕೆ ಗುರಿಯಾಗುವ ಸಂಭವ ಇರುವುದನ್ನು ಲೆಕ್ಕಿಸಿ ಮಹಾಕ್ಷಯ್ ಮತ್ತು ಯೋಗಿತಾ ಬಾಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.