ಲೋಕದರ್ಶನವರದಿ
ರಾಣೇಬೆನ್ನೂರು05: ನಗರ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಮುಸ್ಲಿಂ ಬಾಂಧವರು ರಮಜಾನ್ ಹಬ್ಬವನ್ನು ಬುಧವಾರ ಅತ್ಯಂತ ಸಡಗರ ಸಂಭ್ರಮ ಮತ್ತು ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಗರದಲ್ಲಿ ಬೆಳಿಗ್ಗೆಯಿಂದಲೇ ಮಕ್ಕಳು ಸೇರಿದಂತೆ ಹಿರಿಯರು ಹೊಸ ಉಡುಪುಗಳನ್ನು ಧರಿಸಿ ರಮಜಾನ್ ಹಬ್ಬದಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಕೋಟೆಯ ದಗರ್ಾ ಮಸೀದಿಯಿಂದ ಕಾಲ್ನಡಿಗೆಯ ಮುಖಾಂತರ 2 ಕಿಲೋ.ಮೀ ನಷ್ಟು ಅಂತರದಲ್ಲಿ ದೂರವಿರುವ ಮಾರುತಿ ನಗರದ ಈದ್ಗಾ ಮೈದಾನಕ್ಕೆ ತೆರಳಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂದಿತು.
ಸಹಸ್ರಾರು ಮುಸ್ಲಿಂ ಬಾಂಧವರು ಈದ್ಗಾದಲ್ಲಿ ಸುಮಾರು ಒಂದುವರೆ ಗಂಟೆಯ ಕಾಲ ಸಾಮೂಹಿಕವಾಗಿ ಪ್ರಾರ್ಥನೆಗೈದರು. ಮೌಲಾನವರು ಸೇರಿದ್ದ ಮುಸ್ಲಿಂ ಬಾಂಧವರಿಗೆ ಪ್ರಾರ್ಥನೆಯನ್ನು ಬೋಧಿಸಿದರು.
ವಿಶಾಲವಾದ ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದ ಮುಸ್ಲೀಂ ಬಾಂಧವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ವಹಾಬ್ ಶಾಫಿ, ಜೆಡಿಎಸ್ ರಾಜ್ಯ ಘಟಕದ ಸದಸ್ಯ ಎಂ.ಜೆ.ಕಮದೋಡ, ಶೇರುಖಾನ ಕಾಬೂಲಿ, ಎಸ್.ಎನ್.ಪಾಟೀಲ, ಮುನವರ ಸಾಬ ಬಾಗವಾಲೆ, ಶಬೀಬುಲ್ಲಾ ಕಂಬಳಿ, ಅಸೀಫ್ ಮುಲ್ಲಾ, ಹೈಸ್ಕೂಲ್ ಛೇರಮನ್ ಅಹ್ಮದ್ ಸಾಬ್ ಕಿಲ್ಲೇದಾರ, ಎಸ್.ಎಂ.ಜವಳಿ, ಫೈಜ್ ಅಹ್ಮದ್ ಅತ್ತಾರ, ನವಾಬ ಸಾಬ ಮುಲ್ಲಾ, ಅಝ್ರದ್ದೀನ ಬಾವಿಕಟ್ಟಿ, ಮದರಸಾಬ ಮೇಡ್ಲೇರಿ, ಬುಡನ ಖಾನ ಸೌದಾಗರ, ನಜುರುಲ್ಲಾ ಖಾನ ಸೌದಾಗರ, ಮಕಬುಲ್ಲಾ ಅಹ್ಮದ್ ಯಲ್ಲಾಪುರ, ಮುಸ್ತಾಬ್ ಅಹ್ಮದ್ ಹಿರೇಬಿದ್ರಿ, ಮುಖ್ಯಾರ ಬಮ್ಮನಹಳ್ಳಿ, ಮೇಹಬೂಬ್ ಅಲಿ ಕರಜಿಗಿ, ರಫಿಕ್ ಪಾಟೀಲ, ಮಹ್ಮದ ಶರೀಪ್ ದೌಲತಬೇಗ, ಅಲ್ಲಾಬಕ್ಷ ಮುಕ್ಕಳ್ಳಿ, ಇಕ್ಬಾಲ್ ಅಹ್ಮದ್ ಶಿಡೇನೂರ, ಅತಾವುಲ್ಲಾ ಕರ್ಜಗಿ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಇದ್ದರು.