ರಮೇಶ್ ಜಾರಕಿಹೊಳಿ ದೊಡ್ಡವರು: ಲಕ್ಷ್ಮಿ ಹೆಬ್ಬಾಳ್ಕರ್

ಬಾಗಲಕೋಟೆ 22: ರಮೇಶ್ ಜಾರಕಿಹೊಳಿ ದೊಡ್ಡವರು, ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವಳಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಚಿವ ಡಿ.ಕೆ.ಶಿವಕುಮಾರ್ ಗೆ ನಾನೊಬ್ಬಳೇ ಬೆಂಬಲಿಗಳು ಅಲ್ಲ, ಸಾಕಷ್ಟು ಜನ ಬೆಂಬಲಿಗರಿದ್ದಾರೆ. ಸಚಿವ ಜಾರಕಿಹೊಳಿ ನನ್ನ ಹೆಸರು ಬಳಕೆ ಮಾಡುವುದರ ಹಿಂದಿನ ಮರ್ಮ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಸಚಿವ ಜಾರಕಿಹೊಳಿ ನನಗೆ ಕಾಲಕಸ, ಪ್ರದರ್ಶನದ ವಸ್ತು, ಸ್ಲಮ್ ನಿಂದ ಬಂದೋಳು ಎಂದು ಹೇಳಿದ್ದಾರೆ, ಆದರೆ ನಾನು ನನ್ನ ಪಾಡಿಗೆ ಇದ್ದೇನೆ. ಅವರು ನಮ್ಮ ಜಿಲ್ಲೆಯ ದೊಡ್ಡ ನಾಯಕರು, ರಾಜ್ಯ ನಾಯಕರು ಅವರಿಗೆ ದೇವರು ಒಳ್ಳೆಯದು ಮಾಡಲಿ. ಅವರು ನನ್ನ ರಾಜಕೀಯ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ. ಅವರು ಯಾರಿಂದಲೂ ನನಗೆ ತಡೆ ಹಾಕಲು ಆಗುವುದಿಲ್ಲ. ಎಲ್ಲವನ್ನು ದೇವರು ನಿಧರ್ಾರ ಮಾಡಿದ್ದಾನೆ. ನನ್ನ ಶ್ರಮ, ಧರ್ಮ ನನ್ನನ್ನು ಕಾಪಾಡುತ್ತದೆ ಎಂದರು.