ಐತಿಹಾಸಿಕ ಹಂಪಿ ಉತ್ಸವದಲ್ಲಿ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನ
Rakta Ratri mythological drama performance at the historic Hampi festival
ಲೋಕದರ್ಶನ ವರದಿ
ಹಂಪಿ 15: ಐತಿಹಾಸಿಕ ಹಂಪಿ ಉತ್ಸವ-2026ರ ಶ್ರೀ ವಿದ್ಯಾರಣ್ಯ ವೇದಿಕೆ (ಮಹಾನವಮಿ ದಿಬ್ಬ ವೇದಿಕೆ)ಯಲ್ಲಿ ಬಸಂತಿ ಮತ್ತು ತಂಡ ಕೂಡ್ಲಿಗಿ ವತಿಯಿಂದ ದಿ. 14 ರ ರಾತ್ರಿ ತುಂಬಾ ಅದ್ಭುತವಾಗಿ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
ತಡರಾತ್ರಿಯಾದರೂ ಪ್ರೇಕ್ಷಕರು ತುಂಬಾ ಆಸಕ್ತಿಯಿಂದ ವೀಕ್ಷಿಸಿ ಕಲಾವಿದರ ಕಲೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ನಾಟಕ ಪ್ರದರ್ಶನದಲ್ಲಿ ಶ್ರೀ ಕೃಷ್ಣನ ಪಾತ್ರದಲ್ಲಿ ಬಸವರಾಜ.ಕೆ. ಶಿಕ್ಷಕರು ಹೊಸಪೇಟೆ, ಭೀಮನ ಪಾತ್ರದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ರಮೇಶ್ ಹಂಚಿನಮನೆ, ದುರ್ಯೋಧನ ಪಾತ್ರದಲ್ಲಿ ಡಾ.ಉಮಾಶಂಕರ ವಕೀಲರು, ಧರ್ಮರಾಯನ ಪಾತ್ರದಲ್ಲಿ ನಾಗರಾಜ ಮಾಡ್ಲಕನಹಳ್ಳಿ, ಅರ್ಜುನ ಪಾತ್ರದಲ್ಲಿ ಹೆಚ್.ಜಿ.ಪ್ರಕಾಶಗೌಡ ಮುಖ್ಯಗುರುಗಳು ವೈಭವ ಶಾಲೆ ಕಾನಹೊಸಳ್ಳಿ, ಅಶ್ವತ್ಥಾಮನ ಪಾತ್ರದಲ್ಲಿ ಶಿವಲಿಂಗಪ್ಪ ಬೆಳ್ಳಕಟ್ಟೆ, ಶಕುನಿ ಪಾತ್ರದಲ್ಲಿ ಬಿ.ಜಿ.ಸಿದ್ದನಗೌಡ ಬೆಳ್ಳಕಟ್ಟೆ, ಕರ್ಣನ ಪಾತ್ರದಲ್ಲಿ ಬಿ.ಧನುಂಜಯ, ದ್ರೌಪದಿ ಪಾತ್ರದಲ್ಲಿ ಸೋಗಿ ನಾಗರತ್ನಮ್ಮ, ಭಾನುಮತಿ ಹಾಗೂ ಉತ್ತರೆ ಪಾತ್ರದಲ್ಲಿ ದಿವ್ಯಕುಮಾರಿ ಕೂಡ್ಲಿಗಿ, ತುಂಬಾ ಮನೋಜ್ಞವಾಗಿ ಅಭಿನಯ ನೀಡಿದರು. ಸಂಗೀತ ನಿರ್ದೇಶನ ಶ್ರೀ ವಿರುಪಾಕ್ಷಪ್ಪ ಮೋರಿಗೇರಿ, ತಬಲ ಶರಣಕುಮಾರ್‌ಬಂಡಿ, ವಸ್ತ್ರ ವಿನ್ಯಾಸ ಮತ್ತು ವರ್ಣಾಲಂಕಾರ ಮುರಳಿ ಚಳ್ಳಿಕೆರೆಯವರು ನೆರವೇರಿಸಿದರು.
ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಜಿಲ್ಲಾಡಳಿತ ವತಿಯಿಂದ ಸ್ಮರಣಿಕ ಹಾಗೂ ಪ್ರಶಂಸಾಪತ್ರ ನೀಡಿ ಅಭಿನಂದಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 