ಕಂಪ್ಲಿಯಲ್ಲಿ ಸ್ಥಗಿತಗೊಂಡ ಸಂಪರ್ಕ ಸೇತುವೆ ಕಾಮಗಾರಿ : ವಾಹನ, ಸಾರ್ವಜನಿಕರ ಪರದಾಟ : ಪರ್ಯಾಯ ರಸ್ತೆಯಲ್ಲಿ ಸಿಲುಕಿಕೊಂಡಿರುವ ಭಾರಿ ಗಾತ್ರದ ಲಾರಿ

ಕಂಪ್ಲಿಯಲ್ಲಿ ಸ್ಥಗಿತಗೊಂಡ ಸಂಪರ್ಕ ಸೇತುವೆ ಕಾಮಗಾರಿ : ವಾಹನ, ಸಾರ್ವಜನಿಕರ ಪರದಾಟ : ಪರ್ಯಾಯ ರಸ್ತೆಯಲ್ಲಿ ಸಿಲುಕಿಕೊಂಡಿರುವ ಭಾರಿ ಗಾತ್ರದ ಲಾರಿ Construction of the connection bridge in Kampli has been halted: Vehicles and public are stranded: A

ಲೋಕದರ್ಶನ ವರದಿ 

ಕಂಪ್ಲಿ  29: ಪಟ್ಟಣದ ಕೋಟೆ ಸಮೀಪದ ಗಂಗಾವತಿ ರಸ್ತೆಯ ಪಕ್ಕದಲ್ಲಿರುವ ಬನೆಕನ ಕಾಲುವೆಯ ಹತ್ತಿರ ನಿರ್ಮಾಣ ಮಾಡುತ್ತಿರುವ ರಾಜ್ಯ ಹೆದ್ದಾರಿ 29ರ ಸಂಪರ್ಕ ಸೇತುವೆ ಕಾಮಗಾರಿ ಕಳೆದ ಮೂರು ತಿಂಗಳುಗಳಿಂದ ಸ್ಥಗಿತಗೊಂಡಿದ್ದು,ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಮಾಗಾಣಿ ಜಮೀನುಗಳಿಗೆ ತೆರಳುವ ರೈತರಿಗೆ ಅಡಚಣೆಯಾಗಿರುವುದರ ಜೊತೆಗೆ ಪರ್ಯಾಯ ರಸ್ತೆಯಲ್ಲಿ ಬೃಹತ್ ಲಾರಿ ಸಿಗಹಾಕೊಂಡಿರುವುದರಿಂದ ವಾಹನಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರವಾದ ಅಡಚಣೆಯಾಗಿದ್ದು, ಶೀಘ್ರವಾಗಿ ಸಂಪರ್ಕ ಸೇತುವೆ ಕಾಮಗಾರಿ ಮುಗಿಸುವಂತೆ ವಾಹನ ಸವಾರರು, ರೈತರು ಆಗ್ರಹಿಸಿದ್ದಾರೆ. ಕೋಟೆಯ ಗಂಗಾವತಿ ರಸ್ತೆಯಲ್ಲಿ ವಿಜಯನಗರ ಕಾಲದ ಪುರಾತನ ಕಾಲುವೆ ಇದ್ದು, ಇಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನವಿದ್ದ ಕಾರಣ ಈ ಕಾಲುವೆಗೆ ಬೆನಕನ ಕಾಲುವೆ ಎಂದು ಕರೆಯಲಾಗುತ್ತಿದೆ.

ದೇವಸ್ಥಾನದ ಹತ್ತಿರ ಹಾದು ಹೋಗಿರುವ ಕಾಲವೆಗೆ ರಾಜ್ಯ ಹೆದ್ದಾರಿಗೆ ಸಂಪರ್ಕಕ್ಕಾಗಿ ಸೇತುವೆ ನಿರ್ಮಿಸಲಾಗಿದೆ. ಇತ್ತೀಚೆಗೆ ಸೇತುವೆ ಶಿಥಿಲಗೊಂಡಿದ್ದು, ಸೇತುವೆಯ ಎರಡು ಬದಿಯ ರಕ್ಷಣಾ ಗೊಡೆಗಳುಬಿದ್ದು,ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತಲದೆ,ಹಲವಾರು ಅಫಘಾತಗಳು ಸಂಭವಿಸಿದ್ದವು. ಆದರೆ ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು, ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಮಾಡುತ್ತಿದ್ದು, ಪುರಾತನ ವರಸಿದ್ದಿವಿನಾಯಕ ದೇವಸ್ಥಾನದ ಬಹುತೇಕ ಭಾಗವನ್ನು ತೆರವುಗೊಳಿಸಬೇಕೆಂದು ಇಲಾಖೆ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ಭಕ್ತರು ಹಾಗೂ ಸಾರ್ವಜನಿಕರು ಅವೈಜ್ಞಾನಿಕ ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆಯ ಕಾಮಗಾರಿಯನ್ನು ಪರೀಶೀಲಿಸಿ ದೇವಸ್ಥಾನಕ್ಕೆ ದಕ್ಕೆಯಾಗದಂತೆ ಸೇತುವೆ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು.

ಆದರೆ ಮೂರು ತಿಂಗಳಾದರೂ ಸಹಿತ ಸೇತುವೆ ಕಾಮಗಾರಿಯನ್ನು ಆರಂಭಿಸದೇ ಇರುವುದರಿಂದ ಹಾಗೂ ಅರ್ಧಮರ್ಧ ಕಾಮಗಾರಿ ನಡೆಸಿರುವುದರಿಂದ ರಸ್ತೆಯಲ್ಲಿ ಆಳೆತ್ತದ ಗುಂಡಿಗಳು, ಕಬ್ಬಿಣದ ಕಂಬಿಗಳು ಇರುವುದರಿಂದ ಸಂಚಾರಕ್ಕೆ ಆಡಚಣೆಯಾಗಿದೆ. ರಸ್ತೆಯನ್ನು ಹಗೆದಿರುವುದರಿಂದ ವಾಹನಗಳ ಸಂಚಾರಕ್ಕೆ, ರೈತರ ಜಮೀನುಗಳಿಗೆ ತೆರಳು ತೀವ್ರವಾದ ತೊಂದರೆಯಾಗಿದ್ದು, ಶೀಘ್ರವಾಗಿ ದೇವಸ್ಥಾನಕ್ಕೆ ಹಾಗೂ ರೈತರ ಜಮೀನಿನ ರಸ್ತೆಗೆ ತೊಂದರೆಯಾಗದಂತೆ ರಸ್ತೆಯ ಸಂಪರ್ಕ ಸೇತುವೆಯನ್ನು ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ಪರ್ಯಾಯ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರೂ ರಸ್ತೆ ಅದು ಮಣ್ಣಿನ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಬೃಹತ್ ಲಾರಿಗಳು ಮಣ್ಣಿನ ರಸ್ತೆಯಲ್ಲಿ ಸಿಗಾಹಾಕೊಂಡು ವಾಹನ ಸಂಚಾರಕ್ಕೆ ತೊಂದರೆಯಾಗಿದೆಯಲ್ಲದೆ, ಗಂಟೆಗಟ್ಟಲೇ ಸಂಚಾರಕ್ಕೆ