‘ಬೆಂಕಿಯ ಶೀತ ಮತ್ತು ಶೀತದ ಕಾವು’ ಜೋಡಿ ಕಾದಂಬರಿ ಬಿಡುಗಡೆ

‘ಬೆಂಕಿಯ ಶೀತ ಮತ್ತು ಶೀತದ ಕಾವು’ ಜೋಡಿ ಕಾದಂಬರಿ ಬಿಡುಗಡೆ  Release of the novel duo ‘The Cold of Fire and the Warmth of Cold’

ಲೋಕದರ್ಶನ ವರದಿ 

ಕಂಪ್ಲಿ  29: ಪಟ್ಟಣದ ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾದಂಬರಿ ಲೋಕಾರಾ​‍್ಣ ಸಮಾರಂಭ ಮಂಗಳವಾರ ಹಮ್ಮಿಕೊಂಡಿತ್ತು.  ಲೇಖಕ ಬಂಗಿ ದೊಡ್ಡ ಮಂಜುನಾಥ ರಚಿಸಿದ ‘ಬೆಂಕಿಯ ಶೀತ ಮತ್ತು ಶೀತದ ಕಾವು’ ಜೋಡಿ ಕಾದಂಬರಿಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್‌.ವೀರಭದ್ರಗೌಡ ಸಮಾರಂಭಕ್ಕೆ ಚಾಲನೆ ನೀಡಿ, ಕೃತಿಗಳ ಶಿರೋನಾಮೆ ಆಸಕ್ತಿದಾಯಕವಾಗಿವೆ. ನಿತ್ಯ ಅನೇಕ ಕೃತಿಗಳು ಬಿಡುಗಡೆಗೊಳ್ಳುತ್ತವೆ. ಓದುಗರ ಗಮನಸೆಳೆವಂತ ಕೃತಿಗಳು ಮಾತ್ರ ಉಳಿಯುತ್ತವೆ.

ಕೆಲವೇ ಕೃತಿಗಳನ್ನು ರಚಿಸಿದ ನೀರಮಾನ್ವಿ, ದೇವನೂರು ಮಹಾದೇವರಂತಹವರು ಮನದಲ್ಲಿ ಉಳಿಯುತ್ತಾರೆ. ನಿಷ್ಠಿ ರುದ್ರ​‍್ಪರವರು ಸಾಹಿತ್ಯ ಸಮ್ಮೇಳನ ನಡೆಯಲು ಮುಂದಾಗಬೇಕು. ಕಂಪ್ಲಿಯಲ್ಲಿ ನಡೆದ 2003 ಮತ್ತು 2006ರ ಹೋಬಳಿ ಮಟ್ಟದ ಸಮ್ಮೇಳನಗಳು ಗಮನಸೆಳೆದವು ಎಂದರು. ಕಸಾಪ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರ​‍್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಬಳ್ಳಾರಿಯಲ್ಲಿ ಸಮ್ಮೇಳನ ನಡೆಯಬೇಕೆನ್ನುವುದು 69ವರ್ಷಗಳ ಜನತೆಯ ಕನಸಾಗಿದೆ. ಡಿಸ್ಸೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಸಮ್ಮೇಳನವು ಕೋರ್ಟ್‌ ಕಚೇರಿ ನೆಪದಲ್ಲಿ ಕಾಲ ವಿಳಂಭವಾಗುತ್ತಿದೆ.

ಸಮ್ಮೇಳನ ನಡೆಸಲು ನಿರಂತರ ಪ್ರಯತ್ನ ಸಾಗಿದೆ. ಸಾಹಿತಿಗಳಿಗೆ ಗಡಿ, ಭಾಷೆಗಳ ಮಿತಿಯಿಲ್ಲ ಎಂದರು. ಗಂಗಾವತಿಯ ಎಸ್‌.ಕೆ.ಎನ್‌.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಜೋಡಿ ಕಾದಂಬರಿಗಳನ್ನು ವಿಮರ್ಶಿಸಿ ಮಾತನಾಡಿದರು. ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಜೋಡಿ ಕಾದಂಬರಿಗಳನ್ನು ಬಿಡುಗಡೆಗೊಳಿಸಿದರು. ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಡಿ.ವೀರ​‍್ಪ, ನಗರಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣ ಎಸ್‌.ಪೋಳ್, ಪಿರಮಿಡ್ ಮಾಸ್ಟರ್ ಕೋನೇರು ಶ್ರೀರಾಮಕೃಷ್ಣ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಲೇಖಕ ಬಂಗಿ ದೊಡ್ಡ ಮಂಜುನಾಥ, ಕಸಾಪ ಪದಾಧಿಕಾರಿಗಳಾದ ಅಂಬಿಗರ ಮಂಜುನಾಥ, ಎಸ್‌.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಹಾದಿಮನಿ ಕಾಳಿಂಗವರ್ಧನ, ಅಶೋಕ ಕುಕನೂರು, ಎಸ್‌.ಶಾಮಸುಂದರರಾವು. ಯು.ಎಂ.ವಿದ್ಯಾಶಂಕರ, ಬಡಿಗೇರ ಜಿಲಾನ್‌ಸಾಬ್ ಸೇರಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಶಿಕ್ಷಕ ಜೀರು ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು.