ಹೊಸದಿಲ್ಲಿ 08: ರಾಜ್ಯಸಭಾ ಉಪಾಧ್ಯಕ್ಷರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಎನ್ಡಿಎ ಅಭ್ಯಥರ್ಿಯನ್ನು ಬೆಂಬಲಿಸಲು ಬಿಜೆಪಿಯ ಪರಿತ್ಯಕ್ತ ಮಿತ್ರ ಪಕ್ಷವಾಗಿರುವ ಶಿವಸೇನೆ ನಿರ್ಧರಿಸಿದೆ.
ಆ.9ರಂದು ನಡೆಯುವ ರಾಜ್ಯಸಭಾ ಉಪಾಧ್ಯಕ್ಷರ ಸ್ಥಾನ ಚುನಾವಣೆಗೆ ಎನ್ಡಿಎ ತನ್ನ ಅಭ್ಯಥರ್ಿಯಾಗಿ ಜೆಡಿಯು ಪಕ್ಷದ ಹರಿವಂಶ ನಾರಾಯಣ ಸಿಂಗ್ ಅವರನ್ನು ನಿಲ್ಲಿಸಿದೆ.
"ನಾವು ಎನ್ಡಿಎ ಅಭ್ಯಥರ್ಿಯನ್ನು ಬೆಂಬಲಿಸುತ್ತೇವೆ' ಎಂದು ಶಿವಸೇನೆಯ ಸಂಸದ ಅನಿಲ್ ದೇಸಾಯಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಈಚೆಗೆ ವಿರೋಧ ಪಕ್ಷಗಳು ಮೋದಿ ಸರಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯ ಮೇಲಿನ ಮತದಾನದಿಂದ ಶಿವಸೇನೆ ಹೊರಗುಳಿದಿತ್ತು.