ಗುಜ್ಜರ್ ಸಹಿತ ಐದು ಸಮುದಾಯಗಳಿಗೆ ಶೇ.1ರ ಮೀಸಲಾತಿ ನೀಡಿದ ರಾಜಸ್ಥಾನ

ಗುಜ್ಜರ್ ಸಮುದಾಯ ಸಹಿತ ಐದು ಸಮುದಾಯಗಳಿಗೆ ಶೇ.1ರ ಮೀಸಲಾತಿಗೆ ಅನುಮೋದನೆ ನೀಡಿದೆ.

ಜೈಪುರ 02: ಅತೀ ಹಿಂದುಳಿದ ವರ್ಗಗಳ ಕೆಟಗರಿಯಡಿ ರಾಜಸ್ಥಾನ ಸರಕಾರ ಇಂದು ಸೋಮವಾರ ಗುಜ್ಜರ್ ಸಮುದಾಯ ಸಹಿತ ಐದು ಸಮುದಾಯಗಳಿಗೆ ಶೇ.1ರ ಮೀಸಲಾತಿಗೆ ಅನುಮೋದನೆ ನೀಡಿದೆ. 

ಇದೇ ಜುಲೈ 7ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜೈಪುರ ರಾಲಿ ನಡೆಯುವುದಕ್ಕೆ ಪೂರ್ವಭಾವಿ ಎಂಬಂತೆ ಈ ಮೀಸಲಾತಿಯನ್ನು ರಾಜಸ್ಥಾನ ಸರಕಾರ ಪ್ರಕಟಿಸಿದೆ.  

ಪ್ರಧಾನಿ ಮೋದಿ ಅವರ ರಾಲಿ ನಡೆಯುವ ತಾಣದಲ್ಲೇ ತಾವು ಮೀಸಲಾತಿಯನ್ನು ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಗುಜ್ಜರ್ ಸಮುದಾಯದವರು ಈ ಮೊದಲು ಬೆದರಿಕೆ ಹಾಕಿದ್ದರು. 

ಪ್ರಧಾನಿ ಮೋದಿ ಅವರು ತಮ್ಮ ರಾಲಿ ನಡೆಯುವ ತಾಣದಲ್ಲೇ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಭೇಟಿಯಾಗುವರು.  

ಶೇ. 1ರ ಮೀಸಲಾತಿಯ ಲಾಭ ಪಡೆಯುವ ಸಮುದಾಯಗಳೆಂದರೆ ಗೋದಿಯಾ ಲೋಹರ್, ಬಂಜಾರಾ, ಗುಜ್ಜರ್, ರೈಕಾ ಮತ್ತು ಗಡಾರಿಯಾ.  

ಈ ಸಮುದಾಯಗಳಿಗೆ ಶೇ.1ರ ಮೀಸಲಾತಿಯನ್ನು ಕಲ್ಪಿಸುವ ದಿಶೆಯಲ್ಲಿ ಸರಕಾರ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಮೊದಲನೇಯದು ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶಕ್ಕೆ ಸಂಬಂಧಿಸಿದ ಮೀಸಲಾತಿ. ಎರಡನೇದು ಸರಕಾರಿ ಉದ್ಯೋಗಗಳಲ್ಲಿನ ಮೀಸಲಾತಿ