ಮಂಬೈ 22: ಮಾಜಿ ಕೇಂದ್ರ ಸಚಿವ ಚಿದಂಬರಂ ಬಂಧನ ರಾಜಕೀಯ ವಲಯದಲ್ಲಿ ಭಾರಿ ಸುದ್ದಿ ಮಾಡಿರುವಾಗಲೇ ಇತ್ತ ಇನ್ನೊಂದು ಕಡೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮಹಾರಾಷ್ಟ್ರ ನವನಿರ್ಮಾಣ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಗುರುವಾರ ವಿಚಾರಣೆಗೆ ಹಾಜರಾಗಿದ್ದಾರೆ.
ಪಕ್ಷದ ಕಾರ್ಯಕರ್ತರು ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗದಂತೆ ಅವರ ನಿವಾಸದ ಮುಂದೆ ಭಾರಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ನಾಯಕರಾದ ಬಾಲಾ ನಂದಗಾಂವ್ಕರ್ ಮತ್ತು ಅವಿನಾಶ್ ಅಬಿಯಾಂಕರ್ ಅವರು ಠಾಕ್ರೆ ಅವರ ನಿವಾಸಕ್ಕೆ ಆಗಮಿಸಿದ್ದು, ಅವರೊಂದಿಗೆ ಇಡಿ ಕಚೇರಿಗೆ ಬರಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಸಂದೀಪ್ ದೇಶಪಾಂಡೆ ಮತ್ತು ಸಂತೋಷ್ ಧುರಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು
ಐಎಲ್ ಮತ್ತು ಎಫ್ಎಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಭಾನುವಾರ ಠಾಕ್ರೆಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು.
2005 ರಲ್ಲಿ 441 ಕೋಟಿ ರೂ.ಗೆ ಕೊಹಿನೂರ್ ಮಿಲ್ ಖರೀದಿಸಿದ ಪಾಲುದಾರರಲ್ಲಿ ರಾಜ್ ರಾಕ್ರೆ ಒಬ್ಬರಾಗಿದ್ದರು. ಆದರೆ ಮೂರು ವರ್ಷಗಳಲ್ಲಿಯೇ ಅವರು ಯೋಜನೆಯಿಂದ ನಿರ್ಗಮಿಸಿದ್ದರು. ಸೆಪ್ಟೆಂಬರ್, 2018 ರಲ್ಲಿ ಐಎಲ್ & ಎಫ್ಎಸ್ ನಷ್ಟ ಅನುಭವಿಸಿತ್ತು ಮತ್ತು ಅದರ ಹಲವು ಹೂಡಿಕೆದಾರರನ್ನು ಬಂಧಿಸಲಾಗಿತ್ತು. ಇದರಲ್ಲಿ ಠಾಕ್ರೆ ಅವರ ಹೆಸರು ಕೇಳಿ ಬಂದ ನಂತರ ಈಗ ಇಡಿ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.