ಮಕ್ಕಳಲ್ಲಿ ಶಿಸ್ತು, ದೇಶಾಭಿಮಾನ ಬೆಳೆಸಿ: ಪತ್ತಾರ

ಲೋಕದರ್ಶನವರದಿ

ರಬಕವಿ-ಬನಹಟ್ಟಿ05 : ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಶಿಸ್ತು, ದೇಶಾಭಿಮಾನ, ಸಹಕಾರ, ಪರೋಪಕಾರ, ಸೇವೆಗಾಗಿ ಬಾಳುವ, ತಾಳ್ಮೆಯನ್ನು ಕಲಿಸುವಲ್ಲಿ ಭಾರತ ಸೇವಾದಳದ ಕಾರ್ಯ ಮಹತ್ವದ್ದಾಗಿದೆ ಎಂದು ಬಾಗಲಕೋಟ ಜಿಲ್ಲಾ ಸಂಘಟಕ ಮಹೇಶ ಎನ್.ಪತ್ತಾರ ಹೇಳಿದರು.

ರಬಕವಿ ಶ್ರೀಗುರುದೇವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ಶ್ರೀಗುರುದೇವ ಬ್ರಹ್ಮಾನಂದ ಶಾಖೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಪಠ್ಯಪೂರಕ, ಯೋಗ, ಆರೋಗ್ಯಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಭಾರತ ಸೇವಾದಳ ತರಬೇತಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ ಎಂದರು.

ಶಾಲಾ ಮುಖ್ಯಗುರು ಎಸ್.ವಿ.ದಳವೆ ಅಧ್ಯಕ್ಷತೆ ವಹಿಸಿ ಭಾರತ ಸೇವಾದಳ ತರಬೇತಿ ಪಡೆದ ಮೂವರು ಶಿಕ್ಷಕರು ನಮ್ಮ ಶಾಲೆಯಲ್ಲಿದ್ದು, ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ತಾಲೂಕಾ ಅಧಿನಾಯಕ ಸಿ.ಬಿ.ತೆಗ್ಗಿ, ತಾಲೂಕಾ ಸಮಿತಿ ಸದಸ್ಯ ಮ.ಕೃ.ಮೇಗಾಡಿ, ಶಾಖಾ ನಾಯಕಿಯರಾದ ಚಿಮ್ಮಡ ಶಾಲೆಯ ಜ್ಯೋತಿ ಗಡೆನ್ನವರ, ಯರಗಟ್ಟಿ ಶಾಲೆಯ ಸಂತೋಷಮಾ ರಾಮದುರ್ಗ,  ಆರ್.ಎಂ.ಅಚನೂರ, ಎಸ್.ವೈ.ತಳವಾರ ಉಪಸ್ತಿತರಿದ್ದರು.

      ಶಾಲಾ ಮಕ್ಕಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ದೈಹಿಕ ಶಿಕ್ಷಕ ವಿ.ಜೆ.ಕೋಪಡರ್ೆ ಸ್ವಾಗತಿಸಿದರು. ಯು.ಜೆ.ಕಟಾವಕರ ನಿರೂಪಿಸಿದರು. ಎಸ್.ಎಂ.ಕೌಜಲಗಿ ವಂದಿಸಿದರು.