ಲೋಕದರ್ಶನ ವರದಿ
ಅಂಕೋಲಾ 29 : ಡಾ.ದಿನಕರ ದೇಸಾಯಿ ರಸ್ತೆಗೆ ಹೊಂದಿಕೊಂಡಿರುವ
(ಕ್ರೈಸ್ತ ಮಿಶನರಿ ಆಸ್ಪತ್ರೆ ಪಕ್ಕ) ಶ್ರೀ ಕಾಮಾಕ್ಷಿ ಹೆಸರಿನ ಬೃಹತ್ ಶೋರೂಮ್ ಭವ್ಯವಾಗಿ ತಲೆಎತ್ತಿ
ನಿಂತಿದ್ದು, ಟಿವಿ, ಪ್ರಿಜ್ ಮತ್ತಿತರ ಗೃಹ ಬಳಕೆ ವಸ್ತುಗಳ ಮಾರಾಟ ಮತ್ತು ಸೇವೆಯಲ್ಲಿ ಅಂಕೋಲಾ ಹಾಗೂ
ಸುತ್ತಮುತ್ತಲು ವಿಶ್ವಾಸಕ್ಕೆ ಹೆಸರಾಗಿ ಹಲವು ವರ್ಷಗಳಿಂದ ತಮ್ಮ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು
ಬಂದಿರುವ ಲಂಭೋಧರ ರಾಯ್ಕರ ಮತ್ತು ಅವರ ಪುತ್ರ ಪ್ರೇಮಾನಂದ
ರಾಯ್ಕರ ಮಾಲಿಕತ್ವದ 'ರಾಯ್ಕರ ಟ್ರೇಡರ್ಸ್' ಅ.31 ಬುಧವಾರ ಬೆಳಿಗ್ಗೆ ಪರಮ ಪೂಜ್ಯ ಶ್ರೀ,ಶ್ರೀ ಸಚ್ಚಿದಾನಂದ
ಜ್ಞಾನೇಶ್ವರಿ ಭಾರತೀ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ. ಒಂದೇ ಸೂರಿನಡಿ ಪ್ರಸಿದ್ಧ
ಬ್ರ್ಯಾಂಡಿನ್ ಗೃಹೋಪಕರಣ ಸಾಮಗ್ರಿಗಳು ಸ್ಪಧರ್ಾತ್ಮಕ ಬೆಲೆಯಲ್ಲಿ ದೊರೆಯಲಿದ್ದು, ಆಕರ್ಷಕ ಉಡುಗೊರೆ
ಮತ್ತು ಸುಲಭ ಕಂತು ಗಳಲ್ಲಿ ಸಾಲ ಸೌಲಭ್ಯ ಸಹ ಗ್ರಾಹಕರಿಗೆ ನೀಡಲಿದ್ದಾರೆ.
ಒಟ್ಟಿನಲ್ಲಿ ದೀಪಾವಳಿ ಸಂಭ್ರಮಕ್ಕೆ ಅಂಕೋಲಾ
ಮತ್ತು ಜಿಲ್ಲೆಯ ಜನತೆಗೆ ತಮಗಿಷ್ಟವಾದ ಟಿವಿ, ಪ್ರಿಜ್, ವಾಷಿಂಗ ಮಶೀನ್, ಎಸಿ, ಕೂಲರ್, ಮಿಕ್ಸರ್,
ಗ್ರ್ಯಾಂಡರ್, ಫ್ಯಾನ್ ಮತ್ತಿತರ ಸಾಮಗ್ರಿಗಳ ಆಯ್ಕೆಗೆ
ಹೊಸದೊಂದು ಶೋರೂಮ್ ತೆರೆದುಕೊಳ್ಳುತಿದೆ.
ನಮ್ಮೆಲ್ಲಾ ಗ್ರಾಹಕರು ಮತ್ತು ಹಿತೈಷಿಗಳು ಉದ್ಘಾಟನೆ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ
ಆಗಮಿಸಿ ಆತಿಥ್ಯ ಸ್ವೀಕರಿಸಬೇಕಾಗಿ ರಾಯ್ಕರ ಕುಟುಂಬ ವರ್ಗದವರು ವಿನಂತಿಸಿದ್ದಾರೆ.