ಲೋಕದರ್ಶನವರದಿ.
ಹಗರಿಬೊಮ್ಮನಹಳ್ಳಿ 04:ಪಟ್ಟಣದ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿ ಹಾಗೂ ಕ್ಷೇತ್ರ ಸಮನ್ವಯ ಕಾಯರ್ಾಲಯದ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಗುರುಗಳಿಗೆ ಮಾಹಿತಿ ಹಕ್ಕು ಅಧಿನಿಯಮ 2005 ಕುರಿತು ಶುಕ್ರವಾರ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಕ್ಷೇತ್ರ ಶಿಕ್ಷಣಾದಿಕಾರಿ ಶೇಖರಪ್ಪ ಹೊರಪೇಟೆ ಕಾರ್ಯಗಾರ ಕುರಿತು ಪ್ರಾಸ್ತಾವಿಕ ನುಡಿಯಾಡಿ ಪ್ರತಿಯೊಬ್ಬರೂ ಮಾಹಿತಿ ಹಕ್ಕು ಅಧಿನಿಯಮದ ಪರಿಕಲ್ಪನೆಯನ್ನು ಅರಿಯುವುದು ಸದ್ಯದ ದಿನಮಾನಗಳಲ್ಲಿ ಅವಶ್ಯಕವಾಗಿದೆ ಹಾಗೂ ಶಾಲಾ ಶಿಕ್ಷಕರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅರಿತಿರಬೇಕು ಮಾಹಿತಿ ಎಂಬುದು ಸಾರ್ವಜನಿಕರ ಹಕ್ಕಾಗಿದೆ ,ಸರಕಾರಿ ನೌಕರರಾಗಿ ಕಾರ್ಯ ನಿರ್ವಹಿಸುವಾಗ ಬರುವ ಅಡೆ ತಡೆಗಳನ್ನು ಸಂಪೂರ್ಣ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸುಲ್ಲಿ ಸಫಲರಾಗುವಂತೆ ಮಾಡಲು ಈ ಕಾರ್ಯಗಾರವನ್ನು ರೂಪಿಸಲಾಗಿದೆ, ಹಾಗೂ ಈ ಕಾರ್ಯಗಾರದಿಂದ ಮಾಹಿತಿ ಹಕ್ಕಿನ ಅಜ್ಞಾನದ ತಿಳುವಳಿಕೆಯನ್ನು ಅಳಿಸಿ ಹಾಕುಉದಾಗಿದೆ ಹಾಗಾಗಿ ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತರಾದ ಎ.ಎಂ.ವಾಗೀಶ್ ಕಾರ್ಯಗಾರ ಕುರಿತು ಸಂಕ್ಷಿಪ್ತವಾಗಿ ಶಿಕ್ಷಕರಿಗೆ ವಿವರಣೆ ನೀಡಿ , ಮಾಹಿತಿ ಹಕ್ಕು ಅಧಿನಿಯಮದ ಸಂಪೂರ್ಣವಾದ ಮಾಹಿತಿ ಇಂದಿನ ದಿನಮಾನಗಳಲ್ಲಿ ಅರಿತಿರುವುದು ಅವಶ್ಯಕವಾಗಿದೆ ಹಾಗೂ ಯಾವುದರ ಬಗ್ಗೆ ಮಾಹಿತಿಯನ್ನು ಕೇಳಬಹುದು ಹಾಗೂ ಯವ ರೀತಿಯಲ್ಲಿ ಮಾಹತಿಯನ್ನು ನೀಡಬೆಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು , ಮಾಹಿತಿ ಹಕ್ಕು ಅಜರ್ಿಗಳಿಂದ ಆಡಳಿತದಲ್ಲಿ ಉಂಟಾಗುತ್ತಿರುವ ಅನೇಕ ತಪ್ಪುಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿವೆ,ಆಡಳಿತದಲ್ಲಿ ಉತ್ತಮತೆ ತರುವಲ್ಲಿ ಯಶಸ್ವಿಯಾಗಿವೆ,ಅಧಿಕಾರಿಗಳು ಕೇಳಿದ ಮಾಹಿತಿಯನ್ನು ಸರಿಯಾಗಿ ನೀಡಿ ತಮ್ಮ ಲೋಪದೋಷಗಳು ನಮ್ಮ ಅಲ್ಪ ತಿಳುವಳಿಕೆಯಿಂದ ಆಗುತ್ತಿವೆ ,ಮುಂಬರುವ ದಿನಮಾನಗಳಲ್ಲಿ ಇದು ಕ್ಲಿಷ್ಠಕರವಾಗಿವೆ ದಂಡದ ಜೊತೆ ಶಿಕ್ಷೆಯು ಮುಂದಿನ ದಿನಗಳಲ್ಲಿ ಬರಬಹುದಾಗಿದೆ,ಮಾಹಿತಿ ಹಕ್ಕನ್ನು ದುರುಪಯೋಗ ಮಾಡಿಕೊಳ್ಳದಂತೆ ಅನೇಕರಿಗೆ ಸಲಹೆ ನೀಡಿದ್ದೇನೆ ಯಾವುದೇ ಅಧಿಕಾರಿಗಳಿಗೆ ತೊಂದರೆಯಗಬಾರದು ,ಅನ್ಯಾಯದ ವಿರುಧ್ಧ ಹೋರಾಟ ಮಾಡಲು ಅಸ್ತ್ರವಾಗಿ ಬಳಸಬೇಕು ಎಂದರು. ಪ್ರತಿಯೊಂದು ಕಚೇರಿಗಳಲ್ಲಿ ಬೈ01 ಸಾರ್ವಜನಿಕ ಮಾಹಿತಿ ಆಧಿಕಾರಿಗಳು,ಬೈ02ಸಹಾಯಕ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು,ಮೊದಲನೆ ಪ್ರಾಧಿಕಾರ ಇಂತಹ ಸಂಪೂರ್ಣ ಮಾಹಿತಿ ಕಲ್ಪಿಸುವ ನಾಮ ಫಲಕಗಳನ್ನು ಹಾಕಲು ತಿಳಿಸಿದರು,ಅಂಗವಿಕಲರಿಗೆ ಸಹಾಯ ಮಾಡುವಂತೆ ಈ ಹಕ್ಕು ತಿಳಿಸುತ್ತದೆ.ಅಧಿಕಾರಿಗಳು ಯಾವ ಮಾಹಿತಿಯನ್ನು ಮಾಹಿತಿಯಡಿ ನೀಡಬಹುದೆಂಬುದು ಮೊದಲು ಅರಿಯಬೆಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಮನ್ವಯ ಅಧಿಕಾರಿ ಡಿ.ಬೋರಯ್ಯ,ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ರವಿನಾಯ್ಕ್,ಎಸ್.ವಿ.ಪಟೇಲ್,ಪಂಚಪ್ಪ, ಶಂಭುಲಿಗಯ್ಯ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಗುರುಗಳು ಇದ್ದರು.