ರಾ.ಚ.ವಿ. ವಿದ್ಯಾಥರ್ಿ ಕುಮಾರ ರೋಹಿತ ಚವ್ಹಾಣಗೆ ಚಿನ್ನದ ಪದಕ

ಲೋಕದರ್ಶನ ವರದಿ

ಬೆಳಗಾವಿ, 4: ಇತ್ತೀಚಿಗೆ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಆಯೋಸಿದ ಬೆಸ್ಟ್ ಫಿಜಿಕ್ (ದೇಹದಾಡ್ರ್ಯ) ಸ್ಪಧರ್ೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾಥರ್ಿಯಾದ ಕುಮಾರ. ರೋಹಿತ ಚವ್ಹಾಣ ಇವನು ಭಾಗವಹಿಸಿ ಚಿನ್ನದ ಪದಕವನ್ನು ಪಡೆದುಕೊಂಡು ವಿಶ್ವವಿದ್ಯಾಲಯದ ಕೀತರ್ಿಯನ್ನು ಹೆಚ್ಚಿಸಿದ್ದಾನೆ. 

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಶಿವಾನಂದ ಬಿ. ಹೊಸಮನಿ ಇವರ ನೇತೃತ್ವದಲ್ಲಿ ಕುಲಸಚಿವರು (ಆಡಳಿತ)ರಾದ ಪ್ರೊ. ಸಿದ್ದು ಪಿ. ಅಲಗೂರ, ಕುಲಸಚಿವರು (ಮೌಲ್ಯಮಾಪನ)ರಾದ ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿಗಳಾದ ಪರಶುರಾಮ ದುಡಗುಂಟಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರುಗಳಾದ ಬಸವರಾಜ ಚಿಕ್ಕನಗೌಡರ, ನರಸಿಂಹ ರಾಯಚೂರು, ಡಾ. (ಶ್ರೀಮತಿ) ಪೂಣರ್ಿಮಾ ಪಟ್ಟಣಶೆಟ್ಟಿ, ಡಾ. ಎಂ. ಎಂ. ಮಾವಿನಕಟ್ಟಿ, ಡಾ. ವ್ಹಿ. ಬಿ. ಗ್ರಾಮಪುರೋಹಿತ, ಡಾ. (ಶ್ರೀಮತಿ) ಭಾರತಿ ಕೆ. ನಾಯಕ, ಎಸ್. ಎಸ್. ಮಾನಗಾವಿ, ಡಾ. ಜಗದೀಶ ಗಸ್ತಿ, ದೈಹಿಕ ನಿದರ್ೇಶಕರು, ರಾ.ಚ.ವಿ. ಇವರೆಲ್ಲರ ಉಪಸ್ಥಿತಿಯಲ್ಲಿ ರೋಹಿತ ಚವ್ಹಾಣ ಇವರನ್ನು ಅಭಿನಂದಿಸಿ, ಇನ್ನೂ ಹೆಚ್ಚಿನ ಮಟ್ಟದ ಸ್ಪಧರ್ೆಗಳಲ್ಲಿ ಭಾಗವಹಿಸಿ ದೇಶದ ಕೀತರ್ಿ ಪತಾಕೆಯನ್ನು ಹಾರಿಸಲೆಂದು ಶುಭ ಹಾರೈಸಿ ಸನ್ಮಾನಿಸಲಾಯಿತು ಹಾಗೂ ವಿಶ್ವವಿದ್ಯಾಲಯದ ಪುರುಷರ ಖೋ-ಖೋ ತಂಡವು ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಮೊದಲ ಬಾರಿಗೆ ಆಯ್ಕೆಗೊಂಡಿರುತ್ತದೆ ಈ ಸಂದರ್ಭದಲ್ಲಿ ಕುಮಾರ ರೋಹಿತ ಇವನಿಗೆ ಹಾಗೂ ವಿಶ್ವವಿದ್ಯಾಲಯದ ಖೋ-ಖೋ ತಂಡದ ಕ್ರೀಡಾಪಟುಗಳಿಗೆ, ವ್ಯವಸ್ಥಾಪಕರಾದ ನೀಲಪ್ಪ ಕುರಿ, ತರಬೇತಿದಾರರಾದ ಬಸವರಾಜ ಮುತ್ನಾಳ, ಸೂರಜ ಪಾಟೀಲ ಇವರಿಗೆ ವಿಶ್ವವಿದ್ಯಾಲಯದ ಆಡಳಿತ ವರ್ಗ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಅಭಿನಂದನೆಗಳನ್ನು ಸಲ್ಲಿಸಿದರು ಎಂದು ಕುಲಸಚಿವರು (ಆಡಳಿತ) ಇವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.