ಎಸ್‌.ಎಸ್‌.ಎಲ್‌.ಸಿ ತರಗತಿಯ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ

Quiz Program for SSLC class students

ಬೆಳಗಾವಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಜಿಟಿಟಿಸಿ ಸಭಾ ಭವನದಲ್ಲಿ ಬೆಳಗಾವಿ ನಗರದ ಫ್ರೌಡಶಾಲೆಗಳ ವೃತ್ತಿ ಮಾರ್ಗದರ್ಶನ ಮತ್ತು ಎಸ್‌.ಎಸ್‌.ಎಲ್‌.ಸಿ ತರಗತಿಯ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮವನ್ನು ಶನಿವಾರ ಫೆ.8ರಂದು ಹಮ್ಮಿಕೊಳ್ಳಲಾಗಿತ್ತು. ಜಿಟಿಟಿಸಿ ಪ್ರಾಂಶುಪಾಲ ರಾಜಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಮನ್ವಯ ಅಧಿಕಾರಿ ಬಿ.ಜಿ ಮೊಗೇರ, ಉಪನ್ಯಾಸಕರಾದ ರಮಾಕಾಂತ ಮಠ, ಅರವಿಂದ ಖಡೇದ ಮುಂತಾದವರು ಉಪಸ್ಥಿತರಿದ್ದರು. ತದನಂತರ ರಸಪ್ರಶ್ನೆ ವಿಜೇತ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಮುಖ್ಯ ಉದ್ದೇಶದ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.