ಲೋಕದರ್ಶನ ವರದಿ
ಬೆಳಗಾವಿ 9, ಕನರ್ಾಟಕ ರಾಜ್ಯ ಸರಕಾರಿ ಪ್ರಥಮ ದಜರ್ೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದಿಂದ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಪ್ರಥಮ ದಜರ್ೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಯ ಹೋರಾಟ ಹಲವು ದಿನಗಳಿಂದ ನಡೆದುಕೊಂಡು ಬಂದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಡಾ. ರಾಜು ಕಂಬಾರ ಆಗ್ರಹಿಸಿದರು.
ಕಳೆದ ಹತ್ತಾರು ವರ್ಷಗಳಿಂದ ಸಂಘವು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಈ ಅವಧಿಯಲ್ಲಿ ಕೆಲವು ಉಪನ್ಯಾಸಕರ ವಯೋಮಿತಿ ಮೀರಿದ್ದರೆ, ಇನ್ನು ಕೆಲವು ಅತಿಥಿ ಉಪನ್ಯಾಸಕರು ಮನನೊಂದು ಇಹಲೋಕವನ್ನೇ ತ್ಯಜಿಸಿದ್ದಾರೆ. ಅತಿಥಿ ಉಪನ್ಯಾಸಕರ ಕರುಣಾಜನಕ ಸ್ಥಿತಿ ಸರಕಾರಕ್ಕೆ ಕಂಡುಬಂದರೂ ಮೌನವಾಗಿದೆ. ದೀಪಾವಳಿ ಹಬ್ಬವನ್ನೂ ಸಹ ಕತ್ತಲೆಯಲ್ಲಿ ಆಚರಿಸುವ ಪರಿಸ್ಥಿತಿ ಬಂದೊದಗಿದೆ. ಮುಖ್ಯಮಂತ್ರಿಯಾದಲ್ಲಿ ಉಪನ್ಯಾಸಕರಿಗೆ ಭದ್ರತೆ ನೀಡುತ್ತೇವೆ ಎಂದು ಸ್ವತಃ ಕುಮಾರಸ್ವಾಮಿಯವರೇ ಚುನಾವಣೆಯ ಮುನ್ನ ಭರವಸೆ ನೀಡಿದ್ದರು. ಆದರೆ ಸರಕಾರ ರಚನೆಯಾಗಿ ಇಷ್ಟು ಸಮಯ ಕಳೆದರೂ ಇನ್ನು ಅತಿಥಿ ಉಪನ್ಯಾಸಕರಿಗೆ ನೀಡಲಾದ ಭರವಸೆ ಮಾತ್ರ ಪೂರ್ಣಗೊಂಡಿಲ್ಲ. ಎಚ್.ಡಿ. ಕುಮಾರಸ್ವಾಮಿಯವರು ಕೊಟ್ಟ ಮಾತಿನಂತೆ ರಾಜ್ಯದ 412 ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಭದ್ರತೆ ನೀಡಬೇಕೆಂದು ಅವರು ಆಗ್ರಹಿಸಿದರು.
ಶೈಕ್ಷಣಿಕ ವರ್ಷದಲ್ಲಿ ಹಾಗೂ 2016-17 ಸಾಲಿನಲ್ಲಿ ಸೇವೆಯಲ್ಲಿದ್ದ ಅತಿಥಿ ಉಪನ್ಯಾಸಕರನ್ನು ವಿದ್ಯಾರ್ಹತೆ, ಸೇವಾ ಹಿರಿತನ, ವಯೋಮಿತಿ ಅಧಾರದ ಮೇರೆಗೆ ವಿಲೀನಗೊಳಿಸಬೇಕು. ರಾಜ್ಯದಲ್ಲಿ 12000ಕ್ಕಿಂತಲೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆಯಲ್ಲಿದ್ದಾರೆ. ಅವರೆಲ್ಲರ ಭವಿಷ್ಯ ಹಾಳಾಗುತ್ತಿದೆ.
ದೇಶದ ಇತರ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ 20000 ಸಾವಿರಕ್ಕಿಂತ ಹೆಚ್ಚು ಮಾಸಿಕ ವೇತನ ನೀಡಲಾಗುತ್ತಿದೆ. ಅವುಗಳ ತುಲನೆಯಲ್ಲಿ ರಾಜ್ಯದ ಅತಿಥಿ ಉಪನ್ಯಾಸಕರಿಗೆ ಕೇವಲ 11000 ಮಾತ್ರ ಮಾಸಿಕ ವೇತನ ನೀಡಲಾಗುತ್ತಿದೆ. ಅಲ್ಲದೆ ಮಹಿಳಾ ನೌಕರರಿಗೆ ಸಿಗುತ್ತಿರುವ ಹೆರಿಗೆ ಮತ್ತು ಇನ್ನಿತರ ಸೌಲಭ್ಯಗಳು ಮಹಿಳಾ ಅತಿಥಿ ಉಪನ್ಯಾಸಕರಿಗೂ ಲಭ್ಯವಾಗಬೇಕು ಎಂದು ಅವರು ಮನವಿ ಮಾಡಿಕೊಂಡರು.
ಇದೇ ತಿಂಗಳ 26ರಂದು ಮುಂಜಾನೆ 10.30ಕ್ಕೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಮಟ್ಟದ ಅತಿಥಿ ಉಪನ್ಯಾಸಕರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಆ ಸಭೆಯಲ್ಲಿ ಅಂತಿಮ ನಿಧರ್ಾರಗಳನ್ನು ಕೈಗೊಳ್ಳಲಾಗುವುದು. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ, ಮುಂಬರುವ ಅಧಿವೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಡಾ. ಕಂಬಾರ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎನ್. ಕಾಂಬಳೆ, ನಿಂಗಪ್ಪ ಸಂಗ್ರೇಜಿಕೊಪ್ಪ, ಅಡಿವೇಶ ಇಟಗಿ, ಬಸವರಾಜ ಹೊಲಮನಿ ಮತ್ತಿತರರು ಹಾಜರಿದ್ದರು.