ಪಿಡಿಒಗಳಿಗಳಿಗೆ ಭದ್ರತೆ ಒದಗಿಸಿ: ಜಿಲ್ಲಾ ಕಾರ್ಯದರ್ಶಿ ಕಟ್ಟಿಮನಿ

ಲೋಕದರ್ಶನ  ವರದಿ

ಯಲಬುರ್ಗಾ  15: ಪಿಡಿಒಗಳು ಯಾವುದೇ ಭಯವಿಲ್ಲದೆ ಕಾನೂನಿನ ಪ್ರಕಾರ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲಾ ನಮಗೆ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ತೊಂದರೆಯಾದರು ನಮಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು ನಿಭರ್ಿತಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲಾ ಎಂದು ಪಿಡಿಓ ಸಂಘದ ಜಿಲ್ಲಾ ಕಾರ್ಯದರ್ಶಿ ಎಪ್ಡಿ ಕಟ್ಟಿಮನಿ ಹೇಳಿದರು.

ಪಿಡಿಓಗಳ ಮೇಲೆ ಹಲ್ಲೆ ಹಾಗೂ ಮಾನಸಿಕ ಕಿರುಕುಳ ನೀಡುವವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಕನರ್ಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಶನಿವಾರ ತಹಸೀಲ್ದಾರ ಶ್ರಿಶೈಲ ತಳವಾರ ಹಾಗೂ ತಾಪಂ ಇಒ ಡಾ. ಜಯರಾಂ ಛವ್ಹಾಣ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಕನರ್ಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಕಾರ್ಯದಶರ್ಿ ಅಮೀರ್ ನಾಯಕ ಮಾತನಾಡಿ ರಾಜ್ಯಾದ್ಯಂತ ಪಿಡಿಒಗಳ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿರುವ ಘಟನೆಗಳು ನಡೆಯುತ್ತಿವೆ. ಮೇಲಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಿರುಕುಳ ವಿಪರೀತವಾಗಿದೆ. ವಿನಾಕಾರಣ ಹಲ್ಲೆ ನಡೆಸುವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಮುಕ್ತವಾಗಿ ಬಿಡಬೇಕು, ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮನವಿ ಪತ್ರ ಸ್ವೀಕರಿಸಿ ತಹಸೀಲ್ದಾರ ಶ್ರಿಶೈಲ ತಳವಾರ, ಇಒ ಡಾ. ಜಯರಾಂ ಚೌಹ್ಹಣ ಮಾತನಾಡಿ ತಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಮನವಿ ಪತ್ರವನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಹಾಗೂ ತಾಲೂಕ ಮಟ್ಟದ ಸಮನ್ವಯ ಸಮಿತಿಯನ್ನ ರಚಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವದು ಹಾಗೂ ಯಾರು ದೈರ್ಯಗೆಡದೆ ನಿಮ್ಮ ಕಾರ್ಯವನ್ನು ಮಾಡಿ ಯಾರು ಆತ್ಮಹತ್ಯೆಗೆ ಮುಂದಾಗಬಾರದು ಎಂದರು.

ತಾಲೂಕು ಅಧ್ಯಕ್ಷ ಶರಣಪ್ಪ ಕೆಳಗಿನಮನಿ, ಬಸವರಾಜ ಬಡಿಗೇರ, ಹನುಮಂತಗೌಡ ಪಾಟೀಲ, ವಿರೇಶ, ಫಯಾಜ ಬಳೂಟಗಿ, ದೊಡ್ಡಬಸಮ್ಮ, ವೀರಭದ್ರಗೌಡ ಮೂಲಿಮನಿ, ಹನುಮಂತಪ್ಪ ಕಮ್ಮಾರ, ಆನಂದ ವೈ, ಮಂಜುಳಾದೇವಿ, ಅಬ್ದುಲ ಗಫಾರ, ರಾಮಣ್ಣ ಹೊಸಮನಿ, ಗವಿಸಿದ್ದಯ್ಯ ಗಂಧದ, ಶಿವಪುತ್ರಪ್ಪ ತಿಪ್ಪನಾಳ, ಬಸವಲಿಂಗಪ್ಪ ಹಂಚಿನಾಳ,  ಇತರರು ಇದ್ದರು.