ಎಬಿವ್ಹಿಪಿಯಿಂದ ಪ್ರತಿಭಟನೆ * ಕಿಂಗ್ಪಿನ್ ಶಿವಕುಮಾರನಿಗೆ ಕಠಿಣ ಶಿಕ್ಷೆಗೆ ಒತ್ತಾಯ ಶಿಕ್ಷಣ ಇಲಾಖೆ ಸಾರಥಿ ಇಲ್ಲದ ರಥದಂತಾಗಿದೆ : ರಾಜೇಶ

ಲೋಕದರ್ಶನ ವರದಿ

ತಾಳಿಕೋಟೆ,5: ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಯು ವಿಧ್ಯಾಥರ್ಿ ಜೀವನದ ಮುಖ್ಯ ಘಟ್ಟಗಳಾಗಿವೆ ಇವುಗಳನ್ನು ಸರಿದೂಗಿಸುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಚಿವರೇ ಇಲ್ಲದೇ ಮುನ್ನಡೆದಿರುವದು ಶಿಕ್ಷಣ ಇಲಾಖೆ ಸಾರಥಿ ಇಲ್ಲದ ರಥದಂತಾಗಿದೆ ಎಂದು ಎಬಿವ್ಹಿಪಿ ಮುದ್ದೇಬಿಹಾಳ ತಾಲೂಕಾ ಸಂಚಾಲಕ ರಾಜೇಶ ಮಸರಕಲ್ಲ ಅವರು ಹೇಳಿದರು.

ಪಿಯು ಬೋರ್ಡಗೆ ನಿದರ್ೇಶಕರ ನೇಮಕ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸುವ ಕುರಿತು ಅಖೀಲ ಭಾರತೀಯ ವಿದ್ಯಾಥರ್ಿ ಪರಿಷತ್ ರಾಜ್ಯಾಧ್ಯಂತ ಪ್ರತಿಭಟನೆಗೆ ಕರೆ ನೀಡಿದ ಹಿನ್ನೇಲೆಯಲ್ಲಿ ತಾಳಿಕೋಟೆ ಪಟ್ಟಣದಲ್ಲಿ ಪ್ರತಿಭಟನಾ ನೇತೃತ್ವ ವಹಿಸಿ ಮಾತನಾಡುತ್ತಿದ್ದ ಅವರು ರಾಜ್ಯ ಸಕರ್ಾರದ ಒಳ ಜಗಳಗಳಿಂದ ಶಿಕ್ಷಣ ಇಲಾಖೆಗೆ ಮಂತ್ರಿ ಸ್ಥಾನ ತುಂಬಲು ರಾಜ್ಯ ಸಕರ್ಾರ ನಿರ್ಲಕ್ಷ ವಹಿಸುತ್ತಾ ಸಾಗಿದೆ ಕಳೆದ 2 ವರ್ಷಗಳ ಹಿಂದೆ ಪಿಯು ಬೋರ್ಡ ಪ್ರಶ್ನೇ ಪತ್ರಿಕೆ ಸೋರಿಕೆಯಿಂದ ತೀವ್ರ ಮುಖಬಂಗ ಅನುಭವಿಸಿತ್ತಲ್ಲದೇ ಲಕ್ಷಾಂತರ ವಿದ್ಯಾಥರ್ಿಗಳ ಗೊಂದಲ ಸೃಷ್ಠಿಯಾಗಿತ್ತು ಇನ್ನೇನು ಪಿಯುಸಿ ಪರಿಕ್ಷೆಗಳು ಕೆಲವೇ ತಿಂಗಳುಗಳು ಭಾಕಿ ಉಳಿದಿದ್ದರೂ ಇಲ್ಲಿಯವರೆಗೆ ನಿದರ್ೇಶಕರನ್ನು ನೇಮಕ ಮಾಡದೇ ನಿರ್ಲಕ್ಷ ವಹಿಸುತ್ತಾ ಸಾಗಿದ್ದರಿಂದ ವಿಧ್ಯಾಥರ್ಿಗಳಲ್ಲಿ ಆತಂಕ ಸೃಷ್ಠಿಮಾಡಿದೆ ಕೂಡಲೇ ಸಕರ್ಾರವು ಏಚ್ಚೆತ್ತು ಪಿಯು ಬೋರ್ಡಗೆ ನಿದರ್ೇಶಕರನ್ನೋಳಗೊಂಡಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಕ ಮಾಡಬೇಕು ಈ ವಿಷಯ ಕುರಿತು ನಿರ್ಲಕ್ಷ ವಹಿಸುತ್ತಾ ಸಾಗಿದ್ದಲ್ಲಿ ಎಬಿವ್ಹಿಪಿ ರಾಜ್ಯಾಧ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಏಚ್ಚರಿಸಿದರು.

ಇನ್ನೋರ್ವ ಎಬಿವ್ಹಿಪಿ ತಾಳಿಕೋಟೆ ತಾಲೂಕಾ ಸಂಚಾಲಕ ದೇವರಾಜ ನಾಯ್ಕಲ್ ಮಾತನಾಡಿ ಶಿಕ್ಷಣ ಇಲಾಖೆಗೆ ಸಂಬಂದಿಸಿದ ನಿದರ್ೇಶಕರು ಮತ್ತು ಸಚಿವರಿಲ್ಲದ ಕಾರಣ ಶಿಕ್ಷಣ ಇಲಾಖೆ ಅದೋಗತಿಯ ಹಾದಿಯಲ್ಲಿ ಸಾಗುತ್ತಿದೆ ಈ ಕಾರಣದಿಂದ ವಿದ್ಯಾಥರ್ಿ ಜೀವನದ ಮೊದಲ ಘಟ್ಟದಲ್ಲಿಯೇ ಆತಂಕ ಸೃಷ್ಠಿಯಾಗುವಂತಾಗಿದೆ ಕೂಡಲೇ ಸಕರ್ಾರವು ಏಚ್ಚೆತ್ತುಕೊಳ್ಳಬೇಕು ಅಲ್ಲದೇ 2016 ಸಾಲಿನ ಪಿಯುಸಿ ಪ್ರಶ್ನೇ ಸೋರಿಕೆಯಲ್ಲಿ ಬಂದಿತನಾಗಿದ್ದ ಕಿಂಗ್ ಪಿನ್ ಶಿವಕುಮಾರ ಲಕ್ಷಾಂತರ ಬಡ ಪ್ರತಿಭಾವಂತ ವಿದ್ಯಾಥರ್ಿಗಳ ಜೀವನದ ಚೆಲ್ಲಾಟವಾಡಿ ರಾಜ್ಯದ ಮಯರ್ಾದೆಯನ್ನು ಹಾಗೂ ಪಿಯು ಬೋರ್ಡನ ಮಯರ್ಾದೆಯನ್ನು ಹರಾಜು ಹಾಕಿದಂತಹ ವ್ಯಕ್ತಿ ಮತ್ತೇ ಒಂದು ವಾರದ ಹಿಂದೆಯೇ ನಡೆದ ಕೆಎಸ್ಸಿಪಿ (ಪೋಲಿಸ್ ಕಾನ್ಸ್ಟೇಬಲ್) ಪ್ರಶ್ನೇ ಪತ್ರಿಕೆ ಸೋರಿಕೆ ಮಾಡುವಲ್ಲಿ ಬಂದಿತನಾಗಿದ್ದಾನೆ ಶಿಕ್ಷಣ ಕ್ಷೇತ್ರವನ್ನೇ ಹಾಳು ಮಾಡಿ ವಿದ್ಯಾಥರ್ಿಗಳ ಜೀವನದ ಜೊತೆ ಚಲ್ಲಾಟ ವಾಡುತ್ತಿರುವ ಕಿಂಗ್ ಪಿನ್ ಶಿವಕುಮಾರನ ಬಗ್ಗೆ ರಾಜ್ಯ ಸಕರ್ಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು  ಮೃದು ದೋರಣೆ ತಾಳುತ್ತಿರುವದು ಖಂಡನಿಯವಾದಂತಹದ್ದಾಗಿದೆ ಕೂಡಲೇ ಕಿಂಗ್ ಪಿನ್ ಶಿವಕುಮಾರನ ಮೇಲೆ ನಿದರ್ಾಕ್ಷೀಣ ಕ್ರಮ ಗೈಗೊಳ್ಳಬೇಕು ಮತ್ತು ಕೂಡಲೇ ಪಿಯು ಬೋರ್ಡಗೆ ನಿದರ್ೇಶಕರನ್ನು ನೇಮಕ ಮಾಡಬೇಕು ಮತ್ತು ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಕ ಮಾಡಿ ವಿದ್ಯಾಥರ್ಿಗಳ ಸೃಷ್ಠಿಯಾಗಿರುವ ಆತಂಕವನ್ನು ದೂರಮಾಡಬೇಕೆಂದು ಎಬಿವ್ಹಿಪಿ ಒತ್ತಾಯಿಸುತ್ತದೆ ಎಂದರು.

ಎಬಿವ್ಹಿ ನೇತೃತ್ವದಲ್ಲಿ ವಿದ್ಯಾಥರ್ಿಗಳು ಎಸ್.ಕೆ.ಕಾಲೇಜ್ದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ವಿಜಯಪುರ ಸರ್ಕಲ್ಕ್ಕೆ ಆಗಮಿಸಿ ಕೆಲವೊತ್ತು ಮಾನವ ಸರಪಳಿ ನಿಮರ್ಿಸಿ ರಸ್ತೆ ತಡೆ ನಡೆಸಿ ರಾಜ್ಯ ಸಕರ್ಾರದ ವಿರೂದ್ದ ಘೋಷಣೆ ಕೂಗಿದರು. ನಂತರ ಬಸ್ ನಿಲ್ದಾಣದ ಮೂಲಕ ತಹಶಿಲ್ದಾರ ಕಚೇರಿಗೆ ಆಗಮಿಸಿ ಕೆಲವೊತ್ತು ಧರಣಿ ನಡೆಸಿ ತಹಶಿಲ್ದಾರರ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನಾ ನೇತೃತ್ವವನ್ನು ಎಬಿವ್ಹಿಪಿ ನಗರ ಕಾರ್ಯದಶರ್ಿ ಸಂಗಮೇಶ ಬಿರಾದಾರ, ಕಿರಣ ಬಡಿಗೇರ, ಮಲ್ಲು ಮೇಟಿ, ಶ್ರೀಶೈಲ ಹೂಗಾರ, ಬಸನಗೌಡ ಪಾಟೀಲ, ಹಾಜಿಮಲಂಗ್, ಋಷಿಕೇಶ ಗೊಟಗುಣಕಿ, ಮೊದಲಾದವರು ವಹಿಸಿದ್ದರು.