ಪ್ರೌಢಶಾಲೆಯನ್ನಾಗಿ ಉನ್ನತೀಕರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ರಸ್ತೆ ತಡೆದು ಪ್ರತಿಭಟನೆ

ಲೋಕದರ್ಶನ ವರದಿ

ಕಂಪ್ಲಿ 07: ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಉನ್ನತೀಕರಿಸುವಂತೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ದಿಢೀರ್ ರಸ್ತೆ ತಡೆ ಚಳುವಳಿ ನಡೆಸಿ ಸಂಚಾರಕ್ಕೆ ಅಸ್ತವ್ಯಸ್ತವನ್ನುಂಟು ಮಾಡಿದ ಘಟನೆ ಮೆಟ್ರಿ ಗ್ರಾಮದ ರಾಜ್ಯ ಹೆದ್ದಾರಿ 29ರಲ್ಲಿ ಜರುಗಿತು. 

ಕಳೆದ ಹತ್ತು ವರ್ಷಗಳಿಂದಲೂ ಗ್ರಾಮದಲ್ಲಿ ಸಕರ್ಾರಿ ಪ್ರೌಢಶಾಲೆ ಆರಂಭಿಸುವಂತೆ ಇಲ್ಲವೇ ಹೊನ್ನಳ್ಳಿ ಸಿದ್ದಪ್ಪನವರ ಸಹಿಪ್ರಾ ಶಾಲೆಯನ್ನು ಉನ್ನತೀಕರಿಸುವಂತೆ ಕೋರಿದ್ದು, ಈತನಕವೂ ಈಡೇರಿಲ್ಲ. ಅಲ್ಲದೆ, ಫೆ.8ರಂದು ಪ್ರೌಢಶಾಲೆ ಉನ್ನತೀಕರಣಕ್ಕಾಗಿಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಫೆ.22ರಂದು ಪಾದಯಾತ್ರೆ ಹಮ್ಮಿಕೊಂಡಿದ್ದು, ಜಿಪಂ ಸದಸ್ಯೆ ವೆಂಕಟನಾರಮ್ಮ, ತಾಪಂ ಸದಸ್ಯ ಸಿ.ಡಿ.ಮಹಾದೇವ ಅವರು ಭರವಸೆ ನೀಡಿದ್ದರಿಂದ ಪಾದಯಾತ್ರೆ ಮೊಟಕುಗೊಳಿಸಿದ್ದೆವು. ಗ್ರಾಮದಲ್ಲಿ ಸಕರ್ಾರಿ ಪ್ರೌಢಶಾಲೆ ಆರಂಭಗೊಳ್ಳಲೇಬೇಕು. ಈ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ನಾವು ವಾಷರ್ಿಕ ಪರೀಕ್ಷೆಯನ್ನು ಬಹಿಷ್ಕರಿಸಿ, ಪ್ರೌಢಶಾಲೆ ಆರಂಭಗೊಳ್ಳುವತನಕ ನಾವು ವರ್ಗಾವಣೆ  ಪತ್ರ ತೆಗೆದುಕೊಳ್ಳದೇ ಪ್ರತಿಭಟಿಸುತ್ತೇವೆ. ಬಿಇಒ ಖುದ್ದಾಗಿ ಆಗಮಿಸಿ, ಪ್ರೌಢಶಾಲೆ ಆರಂಭಿಸುವ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಆಗ್ರಹಿಸಿದರು. 

    ವಿಷಯ ತಿಳಿದು ಪಿಎಸ್ಐ ಕೆ.ಬಿ.ವಾಸುಕುಮಾರ್ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾನಿರತ ಮಕ್ಕಳ ಮನವಿಪತ್ರ ಸ್ವೀಕರಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ, ಪೊಲೀಸರಿಗೆ ಮಾಹಿತಿ ನೀಡದೇ ಏಕಾಏಕಿ ರಸ್ತೆ ತಡೆ ಹಮ್ಮಿಕೊಂಡಿರುವುದು ಸರಿಯಲ್ಲ. ರಸ್ತೆ ತಡೆಯಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ. ಕಾನೂನನ್ನು ಕೈಗೆತ್ತಿಕೊಳ್ಳದೆ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸಬೇಕು. ಗ್ರಾಮಕ್ಕೆ ಸಕರ್ಾರಿ ಪ್ರೌಢಶಾಲೆ ಬೇಕೆನ್ನುವ ಬೇಡಿಕೆ ಸೂಕ್ತವಾಗಿದ್ದರೂ ಕೇವಲ ಮಕ್ಕಳೇ ರಸ್ತೆ ತಡೆಗೆ ಮುಂದಾದ ಕ್ರಮ ಸರಿಯಲ್ಲ. ಯಾವುದೇ ಅಚಾತುರ್ಯ ಘಟನೆ ಜರುಗಿದಲ್ಲಿ ಯಾರು ಹೊಣೆ ಎಂದು ಪ್ರಶ್ನಿಸಿದರು ಕೂಡಲೇ ಪ್ರತಿಭಟನೆ ಸ್ಥಗಿತಗೊಳಿಸಿ ತರಗತಿಗೆ ತೆರಳುವಂತೆ ಮನವೊಲಿಸಿ ಹೇಳಿದರು.

      ಎಸ್ಡಿಎಂಸಿ ಅಧ್ಯಕ್ಷ ಎ.ಅಯ್ಯಪ್ಪ ಮಾತನಾಡಿ, ಎಸ್ಡಿಎಂಸಿ ಗಮನಕ್ಕೆ ತಾರದೇ ವಿದ್ಯಾಥರ್ಿಗಳು ತಾವೇ ತಾವಾಗಿ ರಸ್ತೆ ತಡೆಯಲ್ಲಿ ಪಾಲ್ಗೊಂಡಿದ್ದು ನಮಗೆ ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ನೊಂದು ನುಡಿದರು. 

    ರಸ್ತೆ ತಡೆ ಪ್ರತಿಭಟನೆಯಲ್ಲಿ ಹೊನ್ನಳ್ಳಿ ಸಿದ್ದಪ್ಪನವರ ಸಹಿಪ್ರಾ ಶಾಲೆ ವಿದ್ಯಾರ್ಥಿಗಳಾದ ಕೆ.ಅಂಬಿಕಾ, ಸಿ.ಡಿ.ಲಕ್ಷ್ಮಿ, ಎಸ್.ರಕ್ಷಿತಾ, ಎಚ್.ಕಿರಣ್ ಕುಮಾರ್, ಶರಣ, ಎಚ್.ನಂದೀಶ್, ಎನ್.ನೀಲಾವತಿ, ಎಂ.ಲಕ್ಷ್ಮಿ, ಕೆ.ಪೂಜಾ, ಕೆ.ಮಮತಾ ಸೇರಿ 6,7 ಮತ್ತು 8ನೇವರ್ಗದ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.