ಜನಿವಾರ ಧರಿಸಿದ್ದ ವಿದ್ಯಾರ್ಥಿಗಳಿಗೆ ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆ ವೇಳೆ ಜನಿವಾರ ಧರಿಸಿದ್ದ ವಿದ್ಯಾರ್ಥಿಗಳಿಗೆ ಅವಮಾನ ಮಾಡಿದ ಘಟನೆಯನ್ನು ಖಂಡಿಸಿ ಜನಿವಾರ ಧಾರಿಣಿ ಸಮಾಜದಿಂದ ತಾಳಿಕೋಟಿ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸಿಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಸಮಾಜದ ಗಣ್ಯರಾದ ವಾಸುದೇವ ಹೆಬಸೂರ, ಅಣ್ಣಪ್ಪ ಜಗತಾಪ, ಜಿ.ಟಿ.ಘೋರೆ್ಡ, ಮುದುಕಪ್ಪ ಬಡಿಗೇರ, ಮಾನಸಿಂಗ್ ಕೊಕಟನೂರ, ಅಮಿತಸಿಂಗ್ ಮನಗೂಳಿ, ರವಿ ಚಂದುಕರ,ದತ್ತು ಉಬಾಳೆ, ವಿಠಲ್ ಮೋಹಿತೆ, ಪ್ರಮೋದ್ ಅಗರ್ವಾಲ್, ತಮ್ಮಣ್ಣ ದೇಶಪಾಂಡೆ,ಪ್ರಕಾಶ ಉಬಾಳೆ, ಸತ್ಯನಾರಾಯಣ ತಾಳಪಲ್ಲೆ ಹಾಗೂ ಸಮಾಜ ಬಾಂಧವರು ಇದ್ದರು.