ಬರಗಾಲ ಪರಿಹಾರ ಕಾಮಗಾರಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ 

ಇಂಡಿ, 6: ವಿಜಯಪೂರ ಜಿಲ್ಲೆ ಬರಗಾಲ ಜಿಲ್ಲೆ ಎಂದು ಸರಕಾರ ಘೋಷಣೆ ಮಾಡಿದ್ದರೂ ಬರಗಾಲ ಪರಿಹಾರ ಕಾಮಗಾರಿ ಸರಿಯಾಗಿ ಜಾರಿ ಮಾಡಿಲ್ಲವೆಂದು ಮತ್ತು ಸರಕಾರ ನಿದ್ರಾವಸ್ತೆಯಲ್ಲಿದೆ ಎಂದು ಕನರ್ಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಂತರ ಸಂಘದ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ ಜಿಲ್ಲೆಯಲ್ಲಿ ಭೀಕರವಾದ ಬರಗಾಲ ಬಂದಿದೆ. ಮಳೆ ಇಲ್ಲದೇ ಬೆಳೆಗಳೆಲ್ಲಾ ಒಣಗಿ ಹೋಗಿವೆ. ಜನ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತೆ ಆಗಿದೆ. ತಕ್ಷಣವೇ ರೈತರ ಬೆಳೆಗಳಿಗೆ ಬೆಳೆ ವಿಮಾ ಹಾಗೂ ಎಕರೆಗೆ  10 ಸಾವಿರದಂತೆ ಪರಿಹಾರ ನೀಡಬೇಕು ಹಾಗೂ ಕೆರೆಗೆ ನೀರು ತುಂಬಬೇಕು. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿ ಮಾಡಬೇಕು ಹಾಗೂ ಅದರಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.

ನಂತರ ಮಾತನಾಡಿದ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ ಆಲಮಟ್ಟಿ, ನಾರಾಯಣಪೂರ ಆಣೆಕಟ್ಟಿನ ನೀರಿ ಜಿಂದಾಲ ಸ್ಟೀಲ ಕಾಖರ್ಾನೆಗೆ ಕೊಡುವದನ್ನು ಬಂದ ಮಾಡಿ ರೈತರ ಜಮೀನಿಗೆ ನೀರು ಹರಿಸಬೇಕು. ಒಣಗುತ್ತಿರುವ ಹತ್ತಿ ಮೆಣಸಿನ ಗಿಡ ಮುಂತಾದ ಬೆಳೆಗಳನ್ನು ಉಳಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು. ಸರಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರ ಅಕ್ರಮ ಸಾಗುವಳಿ ಜಮೀನು ಸಕ್ರಮಗೋಳಿಸಿ ಹಕ್ಕು ಪತ್ರ ಕೊಡಬೇಕು ಗೋಶಾಲೆಗಳನ್ನು ತೆಗೆದು ಜಾನುವಾರುಗಳನ್ನು ರಕ್ಷಿಸಬೇಕು ಎಂದು ಸರಕಾರಕ್ಕೆ ಆಗ್ರಹಪಡಿಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಬಾರತಿ ವಾಲಿಯವರು ಮಾತನಾಡಿ ರೈತರ ಯಾವುದೇ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಮತ್ತು ರೈತರ ಬಗ್ಗೆ ಸರಕಾರಕ್ಕೆ ಕಿಂಚಿತ್ತು ಕಾಳಜಿಯಿಲ್ಲ. ರೈತ ವಿರೋಧಿ ಸರಕಾರ ಆಡಳಿತ ಚುಕ್ಕಾಣಿ ನಡೆಸಿದೆ. ಸರಕಾರ ಎಚ್ಚೆತ್ತಕೊಳ್ಳದಿದ್ದರೇ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಚಿದಾನಂದ ಬೆಳ್ಳೆನವರ, ಸುಭಾಸ ತಳಕೇರಿ, ಜಿ.ಎಸ್. ಇಂಗಳಗಿ, ಶಿದ್ರಾಮ ಬಂಗಾರಿ, ಶ್ರೀಶೈಲ ಕಾಮಬಳೆ, ಗಿರಿಮಲ್ಲ ಬಿದರಿ, ಮಳಸಿದ್ದ ತಳಕೇರಿ ಸೇರಿದಂತೆ ನೂರಾರು ರೈತ ಮುಖಂಡರು ಪಾಲ್ಗೋಂಡಿದ್ದರು.