ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ವಿಜಯಪುರ 20:  ಟೋಲ್ ಶುಲ್ಕವನ್ನು ಸಂಪೂರ್ಣ ರದ್ದುಗೊಳಿಸಿ ಟೋಲ್ ಮುಕ್ತ ಭಾರತ ನಿಮರ್ಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಮೋಟಾರ ಟ್ರಾನ್ಸ್ಪೋಟರ್್ ಕಾಂಗ್ರೆಸ್ ಕರೆ ನೀಡಿದ್ದ ಲಾರಿ ಮುಷ್ಕರವನ್ನು ಬೆಂಬಲಿಸಿ ವಿಜಯಪುರದಲ್ಲಿಯೂ ಟ್ರಾನ್ಸ್ಪೋಟರ್್ ಲಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಜೀವನಾವಶ್ಯಕ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದೆಲ್ಲ ಲಾರಿಗಳು ರಸ್ತೆಗೆ ಇಳಿಯಲಿಲ್ಲ.

ಶುಕ್ರವಾರ ಸಿಂದಗಿ ಬೈಪಾಸ್ನಲ್ಲಿ ಜಮಾಯಿಸಿದ ಲಾರಿ ಸಂಘಟನೆಗಳ ಪದಾಧಿಕಾರಿಗಳು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸುವ ಜೊತೆಗೆ, ಬೇಡಿಕೆಗಳುಳ್ಳ ಕರಪತ್ರ ಹಾಗೂ ಸ್ಟೀಕರ್ಗಳನ್ನು ಲಾರಿಗಳಿಗೆ ಅಂಟಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಅಮೋಘಿ ಚಿಂಚಲಿ ಮಾತನಾಡಿ, ಲಾರಿ ಚಾಲಕರು ಹಾಗೂ ಮಾಲಕರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲಾರಿ ಚಾಲಕರ ಹಾಗೂ ಮಾಲೀಕರ ನ್ಯಾಯಯುತವಾದ ಬೇಡಿಕೆಗಳನ್ನು ಸಕರ್ಾರ ಈಡೇರಿಸಬೇಕು ಎಂದು ಒತ್ತಾಯಿಸಿದರು. ಟೋಲ್ ಶುಲ್ಕವೂ ಸಹ ಅತೀಯಾಗಿದೆ, ಅದರ ಜೊತೆಗೆ ಟೋಲ್ನಲ್ಲಿ ಸಾಕಷ್ಟು ಹೊತ್ತು ನಿಲ್ಲಬೇಕಾದ ಅನಿವಾರ್ಯತೆ, ಈ ಎಲ್ಲ ಕಾರಣಗಳಿಂದಾಗಿ 70 ಸಾವಿರ ಕೋಟಿ ರೂ.ನಷ್ಟು ಇಂಧನ ಸೇರಿದಂತೆ ವಿವಿಧ ರೀತಿಯಲ್ಲಿ ಆಥರ್ಿಕ ನಷ್ಟ ಉಂಟಾಗುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಕೂಡಲೇ ಟೋಲ್ ರದ್ದುಗೊಳಿಸಿ ಟೋಲ್ ಮುಕ್ತ ಭಾರತ ನಿಮರ್ಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಬಹುಮುಖ್ಯವಾಗಿ ಲಾರಿ ಹಾಗೂ ಟ್ರಾನ್ಸ್ಪೋಟರ್್ ವಾಹನಗಳ ಥಡರ್್ ಪಾಟರ್ಿ ಇನ್ಸ್ಯೂರೆನ್ಸ್ನ್ನು 150 ಪಟ್ಟು ಹೆಚ್ಚಿಗೆ ಮಾಡಿರುವುದು ಲಾರಿ ಚಾಲಕರ ಹಾಗೂ ಮಾಲಕರ ತೀವ್ರ ಆತಂಕಕ್ಕೆ ಕಾರಣವಾಗಿದೆ, ಇದನ್ನುಕೂಡಾ ರದ್ದುಗೊಳಿಸಬೇಕು. ಪೆಟ್ರೋಲ್ ಹಾಗೂ ಡಿಸೈಲ್ ಬೆಲೆ ನಿಯಂತ್ರಿಸಲು ಗಂಭೀರವಾದ ಪ್ರಯತ್ನ ಮಾಡಬೇಕು ಎಂದು ಆಗ್ರಹಪಡಿಸಿದರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸುರೇಶ ಪಾರಗೊಂಡ, ರಜಾಕ ತಾಜಿಮತರಕ, ಆಸೀಫ ಬಗಲಿ, ರಜಾಕ ದಗರ್ಾ, ಕಲಾದಗಿ, ಇಸಾಕ ದಗರ್ಾ, ನೂರ್ ಉಲ್ಲಾ ಪಟಾಯತ್ ಮೊದಲಾದವರು ಪಾಲ್ಗೊಂಡಿದ್ದರು.