ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ

ಮುದ್ದೇಬಿಹಾಳ 20: ಪಟ್ಟಣದ  ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಡಾ, ಬಿ ಆರ್ ಅಂಬೇಡ್ಕರ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ತಹಶೀಲ್ದಾರ ಕಚೇರಿಯವರಿಗೆ ಪಾದಾಯತ್ರೆ ಮೂಲಕ ಬ್ರಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶಿಲ್ದಾರ ಮೂಲಕ ಗೃಹ ಸಚಿವ ಜಿ ಪರಮೇಶ್ವರವರಿಗೆ ಮನವಿ ಸಲ್ಲಿಸಿದರು.  

ದಲಿತ ಮುಖಂಡ ಡಿ. ಬಿ ಮೂದೂರ, ಹರೀಷ ನಾಟಿಕಾರ, ತಿಪ್ಪಣ್ಣ ದೊಡಮನಿ, ಸಿ ಜೆ ವಿಜಯಕರ, ಪ್ರಕಾಶ ಸರೂರ ಅವರು ಮಾತನಾಡಿ ದೇಶಕ್ಕೆ ಸ್ವಾತಂತ್ರ ಸಿಕ್ಕು ಇಷ್ಟು ದಿನಗಳು ಕಳೆದರೂ ದೇಶದಲ್ಲಿ ದಲಿತ ಮೇಲೆ ದೌರ್ಜನ್ಯಗಳು ನಿಂತಿಲ್ಲ ಎನ್ನುವುದಕ್ಕೆ ಸಧ್ಯ ನಡೆಯುತ್ತಿರುವ ಘಟನೆಗಳೆ ಸಾಕ್ಷಿ.   

ಬೆಂಗಳೂರು ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ದಲಿತರ ಜಾತಿ ನಿಂದನೆ ಮಾಡಿದ್ದು ಇಡಿ ಮನುಕುಲವೇ ತಲೆ ತಗ್ಗಿಸುವಂತಾಗಿದೆ ಸಧ್ಯ ಇವರನ್ನು ಬಿಜೆಪಿ ಪಕ್ಷದ ವರಿಷ್ಠರು ಕೂಡಲೆ ಇತನ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಜೊತೆಗೆ ಶಾಸಕನ ಆಸ್ತಿ ಪಾಸ್ತಿ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಮೂಲಕ ರಾಜ್ಯದಿಂದ ಗಡಿಪಾರು ಮಾಡಬೇಕು.  

ಬಸವನ ಬಾಗೇವಾಡಿ ವಿಭಾಗದ ಡಿ.ವಾಯ್‌.ಎಸ್‌.ಪಿ, ಮಲ್ಲಪ್ಪ ನಂದಗಾವಿ ಇವರು ಹಾಜರಾದ ದಿನದಿಂದ ಸುಮಾರು 21 ಪ್ರಕರಣ ದಾಖಲಾದರು ಸಹಿತ ಯಾವುದೆ ಆರೋಪಿಗಳನ್ನು ಬಂಧಿಸದೆ ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ್ದು ಅಲ್ಲದೆ, ಸಂವಿಧಾನ ಕಾನೂನು ಇವಾಗ ಬದಲಾಗಿದೆ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಅಗುವುದಿಲ್ಲವೆಂದು ಮತ್ತು ಪ.ಜಾ-ಪ.ಪಂ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು ಪಡಿಕೊಳ್ಳಲು ವಿಳಂಬ ಮಾಡುತ್ತಿರುವ ಮಲ್ಲಪ್ಪ ನಂದಗಾವಿ ಯವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು. 

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ದಲಿತ ಯುವಕನಿಗೆ ದೇವಸ್ಥಾನ ಪ್ರವೇಶ್ ಮಾಡಿದ್ದಾನೆ ಎಂಬ ಕಾರಣ ದಲಿತ ಯುವಕನನ್ನು ದೇವಸ್ಥಾನದ ಕಂಬಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ಮತ್ತು ನಗರದಲ್ಲಿ ಬಹಿಷ್ಕಾರ ಹಾಕಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸರಕಾರ ನೊಂದ ಕುಟುಂಬಕ್ಕೆ 50ಲಕ್ಷ ಪರಿಹಾರ ಒದಗಿಸುವುದು. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಿ ಗ್ರಾಮದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ದೌರ್ಜನ್ಯ ಮಾಡಿದ ಆರೋಪಿಗಳನ್ನು ಕೂಡಲೆ ಬಂಧಿಸಿ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ರೀತಿಯ ಪರಿಹಾರ ಒದಗಿಸಬೇಕು ಹಾಗೂ ಆರೋಪಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. 

ಪ್ರತಿಯೊಂದು ಊರಿನ ಪೊಲೀಸ್ ಬೀಟ್ ಮಾರಾಟ ಮಾಡಿಸಿ ಅವರಿಂದ ತಿಂಗಳ ಸಂಭಾವನೆಯನ 07 -ವಿಜಯಪೂರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಎಮ್‌ಟಿ ಪೊಲೀಸರು ಇವರಿಂದ ಗ್ರಾಮಕ್ಕೆ ಸಾರಾಯಿಯನ್ನು ತೆಗೆದುಕೊಳ್ಳುತ್ತಿರುವ ಸಿಬ್ಬಂದಿಗಳನ್ನು ಕೂಡಲೆ ಅಮಾನತುಗಳಿಸಬೇಕು ಡಿವಾಯ್‌ಎಸ್‌ಪಿ,ಇವರಿಗೆ 40.000 ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿರುವುದನ್ನು ಸೂಕ್ತ ತನಿಖೆ ನಡೆಸಿ, ಸಿ ಪಿ ಐ ಹಾಗೂ ಪಿಎಸೈ ಅವರನ್ನು ಬೇಗೆಡೆಗೆ ವರ್ಗಾವಣೆ ಮಾಡಬೇಕು. ತಾಳಿಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ವಿನಾಕಾರಣ ಮಾನಸಿಕ ಕಿರುಕುಳ ನೀಡಿ ಅವನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿರುವ ಅಧಿಕಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಆ ಕುಟುಂಭಕ್ಕೆ ಪರಿಹಾರ ಕೊಡಿಸಲು ಮುಂದಾಗಬೇಕು ಇಲ್ಲವಾದಲ್ಲಿ ಸರಕಾರದ ವಿರುದ್ಧ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಗಿರಿಯಪ್ಪ ತಳವಾರ, ಆನಂದ ಮೂದೂರ, ಶಿವು ಶಿವಪೂರ, ಪ್ರಶಾಂತ ಕಾಳೆ, ಸಿದ್ದು ಕಟ್ಟಿಮನಿ, ಆರ್‌. ಎಂ ಮ್ಯಾಗೇರಿ, ಪರುಶುರಾಮ ನಾಲತವಾಡ, ದೇವವರಾಜ ಹಂಗರಗಿ, ಬಸವರಾಜ ಸರೂರ, ಭಗವಂತ ಕಬಾಡೆ, ಶೇಖು ಆಲೂರ, ರೇವಣಸಿದ್ದಪ್ಪ ವಾಲಿಕಾರ, ಪರುಶುರಾಮ ಜಲಪೂರ, ಬಸಲಿಂಗಪ್ಪ ಬಿದರಕುಂದಿ, ಸಿದ್ದು ಬಿದರಕುಂದಿ, ಶಿವರಾಜ ಕಾರಕೂರ ಸೇರಿದಂತೆ ಹಲವರು ಇದ್ದರು.