ಚಿಕ್ಕೋಡಿಯಲ್ಲಿ ಹಾರಾಡಿತು ಪ್ಯಾಲಿಸ್ಟೈನ್ ಧ್ವಜ : ಹಬ್ಬದ ಮೆರವಣಿಗೆಯಲ್ಲಿ ಕಿಡಿಗೇಡಿಗಳ ಕೃತ್ಯ

ಬೆಳಗಾವಿ : ಈದ್ ಮಿಲಾದ ಹಬ್ಬದ ಮೆರವಣಿಗೆಯಲ್ಲಿ ಪ್ಯಾಲಿಸ್ಟೈನ್ ಧ್ವಜವನ್ನು ಹಿಡಿದು ಕೆಲ ಯುವಕರು ಕುಣಿದು ಕುಪ್ಪಳಿಸಿರುವ ಘಟನೆ ನಡೆದಿದರುವ ಘಟನೆ ಜಿಲ್ಲೆಯ ಚಿಕ್ಕೋಡಿಯಲ್ಲಿ ವರದಿಯಾಗಿದೆ. 

   ಚಿಕ್ಕೋಡಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ಟೈನ್ ಧ್ವಜ ಹಿಡಿದು ಕೆಲ ಯುವಕರು ಡ್ಯಾನ್ಸ್ ಮಾಡಿದ್ದಾರೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದ್ದು, ಇದಕ್ಕೆ ಆಕ್ರೋಶ ವ್ಯಕ್ತವಾಗತೊಡಗಿದೆ.

   ಹಬ್ಬದ ಸಂದರ್ಭದಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸಿ ಪುಂಡಾಟವನ್ನು ಪುಂಡರು ಮೆರೆದಿದ್ದಾರೆ. ಸುಮಾರು 6 ಅಡಿ ಎತ್ತರ ಉದ್ದವಿರುವ ಧ್ವಜ ಹಾರಿಸಿ ಪ್ರದರ್ಶನ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದಿದ್ದ ಈದ ಮಿಲಾದ್ ಮೆರವಣಿಗೆ ವೇಳೆ ಕೈಯಲ್ಲಿ ಪ್ಯಾಲಿಸ್ತೇನ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ ಯುವಕರು ಗುಂಪು.

   ಗಣೇಶೋತ್ಸವ ವಿಸರ್ಜನೆ ಹಿನ್ನೆಲೆಯಲ್ಲಿ ಇಂದು ಮುಂದುಡಿಕೆಯಾಗಿದ್ದ ಮೆರವಣಿಗೆಯಲ್ಲಿ ಯುವಕರಿಂದ ಧ್ಚಜ ವಶಕ್ಕೆ ಪಡೆದ ಪೊಲೀಸರು. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.