ಆಶ್ರಯ ಬಡಾವಣೆ ಅಭಿವೃದ್ಧಿಗೆ ನೂರು ಕೋಟಿ ಅನುದಾನ ಸರಕಾರಕ್ಕೆ ಪ್ರಸ್ತಾವನೆ-ಪಟೇಲ್

Proposal to the government for a grant of 100 crores for the development of the shelter home - Patel

ಕೊಪ್ಪಳ 29: ನಗರದ ಹೊರವಲಯ ಸಿಂಧೋಗಿ ರಸ್ತೆಯಲ್ಲಿರುವ ಆಶ್ರಯ ಬಡಾವಣೆ ಗಳ ಅಭಿವೃದ್ಧಿಗೆ ಸರಕಾರಕ್ಕೆ ನೂರುಕೋಟಿಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷಅಮ್ಜದ್ ಪಟೇಲ್ ಹೇಳಿದರು.

ಅವರು ಮಂಗಳವಾರ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದ ಬಳಿಕ ತಮ್ಮಕಚೇರಿ ಸಭಾಂಗಣದಲ್ಲಿ ಏರಿ​‍್ಡಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದಅವರು ಆಶ್ರಯ ಬಡಾವಣೆಗಳಲ್ಲಿ ಈಗಾಗಲೇ ಶೇ, 80 ರಷ್ಟು ನಿವೇಶನ ಹಂಚಲಾಗಿದೆ. ಇನ್ನುಳಿದ ಶೇ, 20 ರಷ್ಟು ನಿವೇಶನ ಹಂಚುವ ಪ್ರಕ್ರಿಯೆ ಮುಂದುವರೆದಿದೆ. ಅಲ್ಲಿ ವಾಸಿಸಲು ಜನರಿಗೆಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಸರಕಾರಕ್ಕೆ ವಿಶೇಷ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸಂಸದರು ಶಾಸಕರುಕೂಡ ಸರಕಾರಕ್ಕೆ ಮನವರಿಕೆ ಮಾಡಿಕೊಂಡಿದ್ದಾರೆ. ಶೀಘ್ರ ಅನುದಾನ ಲಭ್ಯವಾದ ಬಳಿಕ ಸಮಗ್ರಅಭಿವೃದ್ಧಿ ಪಡಿಸಿ ಅಲ್ಲಿ ಸಾರ್ವಜನಿಕರಿಗೆ ವಾಸಿಸಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಿಕೊಡಲಾಗುವುದು ಎಂದರು.  

ಕೊಪ್ಪಳ ನಗರದಲ್ಲಿಅಂತರ್ಜಲ ಹೆಚ್ಚಿಸಲು ಹಳೆ ಬಾವಿಗಳನ್ನು ಸ್ವಚ್ಛಗೊಳಿಸಿ ದುರಸ್ತಿ ಮಾಡಿಅದರ ನೀರು, ಬಳಕೆಗೆ ಅವಕಾಶ ಮಾಡಿಕೊಡುವಕಾರ್ಯ ಕೈಗೊಳ್ಳಲಾಗುವುದು ಕೆರೆಗಳ ಅಭಿವೃದ್ಧಿ ಪಡಿಸಲಾಗುವುದು ಬಿಪಿಎಲ್‌ಕಾರ್ಡ್‌ ಹೊಂದಿರುವ ನಗರದ ನಿವಾಸಿಗಳಿಗೆ ಆರೋಗ್ಯದ ಹಿತದೃಷ್ಟಿಯಿಂದಅನಾರೋಗ್ಯದ ಸಂದರ್ಭದಲ್ಲಿ ಪರಿಹಾರ ನೀಡುವ ವ್ಯವಸ್ಥೆಕೂಡ ಮಾಡಲಾಗಿದಎಲ್ಲಾ ಬಡವಿದ್ಯಾರ್ಥಿ ಗಳಿಗೆ ಲ್ಯಾಪ್ಟಾಪ್ ವಿತರಣೆಕೂಡ ಮಾಡಲಾಗುವುದುರಾಜ್ ಕಾಲುವೆ ದುರಸ್ತಿಗೊಳಿಸಲಾಗುವುದು ಅಲ್ಲದೆ ಕೊಪ್ಪಳ ನಗರಸಭೆಗೆ ನಗರದಐದುಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವಎಲ್ಲಾ ಪಟ್ಟಣ ಹಳ್ಳಿ ಸೇರಿಸಿ ನಗರ ಸಭೆಗೆ ಗ್ರಡ್‌ಒನ್ ಸ್ಥಾನಮಾನ ಕಲ್ಪಿಸಿಕೊಡಲು ಜಿಲ್ಲಾ ಆಡಳಿತ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ ಅವರುಜಿಲ್ಲಾಕೇಂದ್ರವಾದ ಕೊಪ್ಪಳ ನಗರದ ಸರ್ವಾಂಗಣ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ವಿವರಿಸಿದರು.