ಚಿತ್ರದುರ್ಗ 10: ಗ್ರಾಮ ಲೆಕ್ಕಾಧಿಕಾರಿಗಳ ವಿವಿಧ ಈಡಿಕೆಗಳಿಗಾಗಿ ಅನಿರಿಷ್ಟಾವಧಿ ಮುಷ್ಕರ. ವಿಷಯಕ್ಕ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ದಿ. 22 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾ ಭವನ, ಚಿತ್ರದುರ್ಗದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು, ಹಾಗೂ ಸರ್ವ ಸದಸ್ಯರ ಒಪ್ಪಿಗೆಯಂತೆ ಸರ್ವಾನುಮತದಿಂದ ದಿ. 26-09-2024 ರಿಂದ 03-10-2024 ರವರೆಗೆ ರಾಜ್ಯಾದ್ಯಂತ ಮುಷ್ಕರ ನಡೆಸಿದ ಕಾರಣ ದಿ. 03-10-2024 ರಂದು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದ್ದಾರೆ.
ಅದರಂತೆ ಸದರಿ ದಿನದಿಂದಲೇ ರಾಜ್ಯವ್ಯಾಪಿ ಮುಷ್ಕರವನ್ನು ಹಿಂಪಡೆಯಲಾಗಿರುತ್ತದೆ. ತದನಂತರ ಸರ್ಕಾರವು ಈ ವೃಂದದ ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿರುವುದಿಲ್ಲ ಮತ್ತು ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ ಬದಲಾಗಿ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿರುತ್ತದೆ, ಆದ್ದರಿಂದ ಉಲ್ಲೇಖದ ಸಭೆಯಲ್ಲಿ ಮೇಲ್ಕಂಡ ಎಲ್ಲಾ ಕಾರಣಗಳಿಗಾಗಿ ಮುಷ್ಕರದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿಗೆ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಇಂದು ಎರಡನೆಯ ಹಂತದ ಅನಿವೃಷ್ಟಾವಧಿ ಮುಷ್ಕರ ನಮ್ಮ ಬೇಡಿಕೆಗಳು ನಮ್ಮ ಹಿತ ರಕ್ಷಣೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ನಮ್ಮ ಬೇಡಿಕೆಗಳು ಇರುವುದು ಕ್ರಮ ಸಂಖ್ಯೆಯಲ್ಲಿ 22 ಇರುತ್ತದೆ. ತಹಶೀಲ್ದಾರರು ಹುಕ್ಕೇರಿ ಇವರಿಂದ ನಮ್ಮ ಬೇಡಿಕೆಗಳ ಅರ್ಜಿಯನ್ನು ತಹಶೀಲ್ದಾರ್ ಮೂಲಕ ಸಚಿವರಿಗೆ ತಲುಪಿಸಬೇಕಾಗಿ ಈ ಅರ್ಜಿಯನ್ನು ನೀಡುತ್ತಿದ್ದೇವೆ ತಾವು ಶ್ರೀ ಕೃಷ್ಣ ಬೈರೇಗೌಡ ಕಂದಾಯ ಸಚಿವರು ಕರ್ನಾಟಕ ಸರ್ಕಾರ ವಿಕಾಸ ಸೌಧ ಬೆಂಗಳೂರು ಇವರು ಈ ಅರ್ಜಿಯನ್ನು ಪರೀಶೀಲಿಸಿ ಅಂಗೀಕರಿಸಬೇಕೆಂದು ಕರ್ನಾಟಕ ರಾಜ್ಯಾದ್ಯಂತ ಮುಷ್ಕರವನ್ನು ಹಮ್ಮಿಕೊಂಡಿರುತ್ತೇವೆ ನಮ್ಮ ಈ ವಿವಿಧ ಬೇಡಿಕೆಯನ್ನು ತಾವು ಬಹುಬೇಗ ಈಡೇರಿಸುತಿರಿ ನಾವು ನಮ್ಮನ್ನು ಕೆಲಸಗಳಿಗೆ ಹಾಜರಾಗುತ್ತೇವೆಂದು ಈ ಮೂಲಕ ನಮಗೆ ವಿಜ್ಞಾಪಿಸಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎನ್ ಆರ್ ಪಾಟೀಲ್ ರವರು ನಮಗೆ ಮೂಲಭೂತ ಸೌಕರ್ಯ ಹಾಗೂ ಕಚೇರಿ ಹಾಗೂ ನಮಗೆ ಕೆಲಸಕ್ಕೆ ಬೇಕಾಗಿರುವ ಡಾಟಾವನ್ನು ನೀಡಬೇಕು ಎಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಉಮೇಶ್ ನಾಗರಾಳೆ ವಿವಿಧ ಬೇಡಿಕೆ ಈಡಿಸಬೇಕೆಂದು ಮೌನವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ನಮ್ಮ ಬೇಡಿಕೆಗಳು ಈಡೇರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಿಠ್ಠಲ್ ಭೂಕನಟ್ಟಿ. ತಾಲೂಕ್ ಕಾರ್ಯದರ್ಶಿಗಳಾದ ಸೂರಜ್ ಪರಿಟ್. ಗೌರವಸಲೇಗಾರರಾದ ಜಗದೀಶ್ ಕಿತ್ತೂರೆ. ಹಾಗೂ ಬಿ ಕೆ ಚೌಗುಲಾ.ಆರ್ ಎಂ ಪಾಟೀಲ್, ಗಂಗಪ್ಪ ಲಮಾಣಿ. ಬಸವರಾಜ್ ದೋಸಿ. ಕುಮಾರ್ ರಾಥೋಡ್. ಎಸ್ ಪಿ ಹಿರೇಮಠ. ಶ್ರೀಮತಿ ಮುಕ್ತ ಕಾಂಬೋಜಿ ಶ್ರೀಮತಿ ಪೂಜಾ ಮೇದಾರ್ ಶ್ರೀಮತಿ ಸುಧಾ ಬರಗಾಲಿ. ಪಿ ಎಲ್ ನಾಯಕ್. ಹುಸೇನ್ ತಹಶೀಲ್ದಾರ್. ಶಾನುಲ್ ಮುಲ್ತಾನಿ. ಪ್ರಭಾಕರ್ ಜಿ ಜೆ ದಸ್ತಗಿರ್ ಕಿಲ್ಲೆದಾರ್. ರವಿ ಹೊಡೆದ. ಹಾಗೂಹುಕ್ಕೇರಿ ತಾಲೂಕ ವಿವಿಧ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು