ಕೊರೋನಾ ಸೋಂಕು : ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಬೆಂಗಳೂರು, ಜುಲೈ 08: ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು,  ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಇತ್ತೀಚೆಗಷ್ಟೇ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರಿಗೆ ಕೊರೋನಾ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

  ಸುಮಲತಾ ಅವರ ನಿಕಟವರ್ತಿಯಾಗಿರುವ ರಾಕ್ ಲೈನ್ ವೆಂಕಟೇಶ್ ಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಇದರಿಂದ ಯಾರ್ಯಾರಿಗೆ ಸೋಂಕು ತಗುಲಿದೆಯೋ ಎಂಬ ಗೊಂದಲ ಎಲ್ಲರನ್ನು ಕಾಡತೊಡಗಿದೆ.

  ಸದ್ಯ ರಾಕ್ ಲೈನ್ ವೆಂಕಟೇಶ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಲತಾ ಅಂಬರೀಶ್ ಅವರಿಗೆ ಸೋಮವಾರ ಕೊರೋನಾ ಸೋಂಕು ತಗುಲಿರುವ ವರದಿ ಬಂದ ನಂತರ ರಾಕ್ ಲೈನ್ ವೆಂಕಟೇಶ್ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊರೋನಾ ಪಾಸಿಟಿವ್ ವರದಿ ಬಂದಿದೆ.

  ಸೋಂಕು ಧೃಢಪಟ್ಟ ಹಿನ್ನೆಲೆಯಲ್ಲಿ ರಾಕ್ ಲೈನ್ ವೆಂಕಟೇಶ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರoತೆ. ಎಲ್ಲೆಲ್ಲೂ ಕೊರೋನಾ ರುದ್ರನರ್ತನ ನಡೆಯುತ್ತಿದ್ದು , ಚಿತ್ರೋದ್ಯಮದ ಮಂದಿಗಳು ಚಿಂತೆಗೀಡಾಗಿದ್ದಾರೆ.

  ಈಗಾಗಲೇ ಕೆಲವು ಚಿತ್ರಗಳ ಚಿತ್ರೀಕರಣ ನಡೆಯುತ್ತಿದ್ದು , ಇದರ ನಡುವೆಯೇ ಸೋಂಕು ಹರಡುವ ಸುದ್ದಿಯಿಂದ ಮುಂದೇನು ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿದೆ.