ಲೋಕದರ್ಶನ ವರದಿ
ಕನಕಗಿರಿ 16 : ಮಳೆಯ ಅಭಾವದಿಂದ ಅಂತರ ಜಲಮಟ್ಟ ಕಡಿಮೆಯಾಗಿದ್ದು, ಕುಡಿಯುವ ನೀರು ಸೇರಿದಂತೆ ಪಟ್ಟಣದ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪ.ಪಂ.ನೂತನ ಅಧ್ಯಕ್ಷೆ ಸರಸ್ವತಿ ಕನಕಪ್ಪ ಎಂದರು.
ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಸಿ.ಸಿ.ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು ಅಧಿಕಾರ ಅವಧಿ ಕಡಿಮೆ ಇದ್ದು, ಪಕ್ಷ ಬೇಧ ಮರೆತು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸಕರ್ಾರದಿಂದ ಜಾರಿಗೊಳಿಸಿ ಯೋಜನೆಗಳನ್ನು ಪ್ರತಿ ಒಬ್ಬರಿಗೂ ತಲುಪಿಸುವಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಾಗುವುದು. ಪಟ್ಟಣದ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಎಂದರು.
ಸನ್ಮಾನ : ಹಸಿರು ಸೇನ ರೈತ ಸಂಘ ಸೇರಿದಂತೆ ಅನೇಕರು ಪ.ಪಂ.ನೂತನ ಅಧ್ಯಕ್ಷೆ ಸರಸ್ವತಿ ಕನಕಪ್ಪ ಅವರಿಗೆ ಸನ್ಮಾನಿಸಿದ್ದರು.
ಈ ಸಂದರ್ಭದಲ್ಲಿ ಪ.ಪಂ.ಉಪಾಧ್ಯಕ್ಷ ಹುಲುಗಪ್ಪ ವಾಲೇಕಾರ, ಪ್ರಮುಖರಾದ ಡಾ. ದೊಡ್ಡಯ್ಯ ಅರವಟಗಿಮಠ, ಮಹಾತೇಶ ಸಜ್ಜನ್, ವಾಗೇಶ ಹಿರೇಮಠ, ಬಿ.ಕನಕಪ್ಪ, ಶರಣಪ್ಪ ಭಾವಿಕಟ್ಟೆ, ಬಸಣ್ಣ ಸಮಗಂಡಿ, ಸಣ್ಣ ಕನಕಪ್ಪ, ಹರೀಶ ಪೂಜಾರ, ರಂಗಪ್ಪ ಕೊರಗಟಗಿ, ಹುಲಿಗೆಮ್ಮ ನಾಯಕ ಸೇರಿದಂತೆ ಪ.ಪಂ. ಸದಸ್ಯರು ಇದ್ದರು.