ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಬೇಕು: ಪ್ರೊ. ಮಂಟೂರ

ಲೋಕದರ್ಶನ ವರದಿ

ಮೂಡಲಗಿ 12: ವಿದ್ಯಾಥರ್ಿಗಳು ಪದವಿ ಶಿಕ್ಷಣ ಮುಗಿಸಿದ ನಂತರ ಉನ್ನತ ಶಿಕ್ಷಣದಲ್ಲಿ ಆಸಕ್ತಿದಾಯಕ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಪದವಿ ಶಿಕ್ಷಣದ ಅರ್ಹತೆ ಹೊಂದಿರುವ ಸರಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಲು ಅದಕ್ಕೆ ಪೂರಕವಾದ ಜ್ಞಾನ ಮತ್ತು ಪ್ರತಿಭೆ ಹೊಂದುವುದು ಅವಶ್ಯವಿದೆ ಒಂದು ವೇಳೆ ಸರಕಾರಿ ಕೆಲಸದ ಸೌಲಭ್ಯಗಳು ದೊರೆಯದೆ ಇದ್ದಾಗ ಸ್ವಯಂ ಉದ್ಯೋಗವನ್ನು ಹೊಂದಲು ಇಂದಿನ ಯುವ ಸಮುದಾಯ ಮುಂದಾಗಬೇಕೆಂದು ಮೂಡಲಗಿಯ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ.ಸಂಗಮೇಶ ಮಂಟೂರ ಅಭಿಪ್ರಾಯ ಪಟ್ಟರು. 

ಸ್ಥಳೀಯ ಆರ್ಡಿಎಸ್ ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಬಿ.ಕಾಂ. ವಿದ್ಯಾಥರ್ಿಗಳಿಗೆ ಆಯೋಜಿಸಿದ  ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸ್ವಯಂ ಉದ್ಯೋಗದ ಅವಕಾಶಗಳು ಹೆಚ್ಚಾಗುತ್ತಿದ್ದು ಪದವಿ ಶಿಕ್ಷಣ ಮುಗಿದ ನಂತರ ವಿಶೇಷ ಕೌಶಲ್ಯಗಳನ್ನು ಹೊಂದಿರುವ ಸ್ವಯಂ ಉದ್ಯೋಗದ ಜ್ಞಾನ ತಿಳಿವಳಿಕೆ ಪ್ರಭುದತೆಯನ್ನು ಬೆಳಸಿಕೊಂಡರೆ ಸರಕಾರಿ ಸಂಭಾವಣೆಗಿಂತ ಹೆಚ್ಚು ಸಂಭಾವಣೆಯನ್ನು ಸ್ವಯಂ ಉದ್ಯೋಗಗಳಲ್ಲಿ ಗಳಿಸ ಬಹುದಾಗಿದೆ  ಅಲ್ಲದೇ ಪದವಿ ಶಿಕ್ಷಣ ಮುಗಿದ ನಂತರ ಸ್ನಾತಕೋತ್ತರ ಪದವಿಗಳ ಸುರ್ವಣಾಕಾಶವಿದ್ದು. ಅವುಗಳ ಪ್ರಯೋಜನವನ್ನು ಪಡೆದು ಕೊಳ್ಳುವುದು ಅವಶ್ಯವಿದೆ ಎಂದರು. 

ಕಾಲೇಜು ಉಪನ್ಯಾಸಕ ಪಿ.ಬಿ. ಚೌಡಕಿ ಮಾತನಾಡಿ ವಿದ್ಯಾಥರ್ಿಗಳಲ್ಲಿ ಉತ್ತಮ ಪ್ರತಿಭೆ ಮತ್ತು ಅಧ್ಯಯನ ಶೀಲತೆ ಚಟುವಟಿಕೆ ಸ್ವಭಾವ ಹೊಂದಿರವವರು ಅನೇಕ ಸರಕಾರಿ ಮತ್ತು ಅರೇಸರಕಾರಿ ಕೇಂದ್ರಗಳಲ್ಲಿ ಉದ್ಯೋಗ ಮಾಡುತ್ತಿದ್ದು ಅಂತಹ ಉದ್ಯೋಗದ ಜ್ಞಾನ ಮತ್ತು ಪ್ರತಿಭೆ ಬೆಳಸಿಕೊಳ್ಳಬೇಕಾದರೆ ನಮ್ಮಲ್ಲಿ ನಿರಂತರ ಅಧ್ಯಯನ ಮತ್ತು ಶ್ರಮದಾಯಕ ಜೀವನ ಅವಶ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಎಸ್.ಬಿ.ಗೋಟೂರೆ ವಹಿಸಿಕೊಂಡು ಮಾತನಾಡಿ ಪದವಿ ಶಿಕ್ಷಣ ಮುಗಿದ ನಂತರ ಅನೇಕ ಉದ್ಯೋಗ ಅವಕಾಶಗಳಿದ್ದು ಅವುಗಳನ್ನು ಸರಿಯಾಗಿ ಬಳಿಕೆ ಮಾಡಿಕೊಂಡಾಗ ಮಾತ್ರ ನಮ್ಮ ಬದುಕು ಅರ್ಥಪೂರ್ಣವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಂ.ಎಸ್.ಬಾಡಗಂಡಿ, ಮಲ್ಲಪ್ಪ ಬಿ.ಪಾಟೀಲ, ಸುನೀತಾ ಸುಳ್ಳನ್ನವರ ಹಾಜರಿದ್ದರು ಘಟಕಾಧಿಕಾರಿ ಉಪನ್ಯಾಸಕಿ ಸುನಂದಾ ಅಂಗಡಿ ಸ್ವಾಗತಿಸಿದರು ವಿದ್ಯಾಥರ್ಿ ಸಾಗರ ಮಾರಾಪೂರಿ ನಿರೂಪಿಸಿದರು ವಿದ್ಯಾಥರ್ಿ ಸಾವಿತ್ರಿ ಪಾಟೀಲ ವಂದಿಸಿದರು.