ಲೋಕದರ್ಶನ ವರದಿ
ಕೂಡ್ಲಿಗಿ 03:ತತ್ವಪದಗಳು ಮನುಕುಲದ ಜೀವನದ ದಾರಿದೀಪಗಳು ಅವುಗಳಲ್ಲಿರುವ ಸಂದೇಶಗಳು ಸರ್ವಕಾಲಕ್ಕೂ ಸರ್ವರಿಗೂ ದಾರಿದೀಪಗಳಾಗಿವೆ ಎಂದು ಕುಪ್ಪನಕೇರಿ ಸಕರ್ಾರಿ ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯರಾದ ಎಮ್.ಡಿ.ಕೃಷ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ತಮ್ಮ ಶಾಲಾ ಆವರಣದಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಕತ್ವದಲ್ಲಿ ಕೂಡ್ಲಿಗಿ ಶ್ರೀ ಸೌಖ್ಯ ಸರಸ್ವತಿ ಎಸ್.ಟಿ.ಸ್ವ ಸಹಾಯ ಮಹಿಳಾ ಸಂಘದವತಿಯಿಂದ ಆಯೋಜಿಸಲಾಗಿದ್ದ, ಗಾಯಕ ಕಲಾವಿದ ಎನ್.ಮುದ್ದಪ್ಪ ರವರಿಂದ ತತ್ವಪದಗಳ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ, ಈ ಮೂಲಕ ಹಳೆ ತಲೆಮಾರಿನ ಕಲೆಗೆ,ಸಾಹಿತ್ಯಕ್ಕೆ ಪುರ್ನಜೀವನಕೊಟ್ಟಂತಾಗುತ್ತದೆ. ತತ್ವಪದಗಳಲ್ಲಿನ ಸಂದೇಶಗಳ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ವೀ ಜೀವನ ನಡೆಸಲು ಸಾಧ್ಯ ಹಾಗೂ ಇಂತಹ ಕಾರ್ಯಕ್ರಮಗಳಿಂದ ಸಮಾಜ ತಿಳಿಹೊಂದಲುಸಾಧ್ಯ ಮತ್ತು ಈ ಮೂಲಕ ಕಲಾವಿದರನ್ನು ಪ್ರೋತ್ಸಾಯಿಸಿದಂತಾಗುತ್ತದೆ ಎಂದರು.
ಮುಖ್ಯ ಅತಿಥಿ ಶಿಕ್ಷಕ ಶಿರಸಾಚಾರಿ ಮಾತನಾಡಿ ಮಾನವನ ಅಂತರಾಳದ ಸ್ವಚ್ಚತೆಗೆ ತತ್ವಪದಗಳನ್ನು ಆಲಿಸುವುದರೊಂದಿಗೆ ಜೀವನದಲ್ಲಿ ಅಂಶಗಳ ಅಳವಡಿಕೆ ಅತ್ಯಗತ್ಯ,ಸಂಗೀತ ಸರ್ವರೋಗಗಳಿಗೂ ಔಷಧಿಯಾಗಿದ್ದು ಜಾನಪದ ಗಾಯನ ಮನೋವ್ಯಾಧಿಗಳಿಂದ ಬಳಲುವವರಿಗೆ ಸಿಧ್ದೌಷಧಿಯಾಗಿದೆ, ಸಕರ್ಾರ,ಸಂಭಂಧಿಸಿದ ಇಲಾಖೆ ಕಲಾವಿಧರ ಕ್ಷೇಮಭಿವೃಧ್ದಿಗೆ ಹತ್ತಾರು ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ ಮತ್ತು ಸಾರ್ವಜನಿಕರು ಇಂತಹ ಕಲಾವಿಧರ ಕಾರ್ಯಕ್ರಮಗಳಲ್ಲಿ ಸಕ್ರೀಯ ಪಾಲ್ಗೊಂಡು ಪ್ರೋತ್ಸಾಯಿಸಬೇಕಿದೆ ಎಂದರು.
ಪ್ರಾಸ್ಥಾವಿಕವಾಗಿ ಕನರ್ಾಟಕ ಜಾನಪದ ಪರಿಷತ್ ಕಾರ್ಯದಶರ್ಿ ಪತ್ರಕರ್ತ ಬಡಿಗೇರ ನಾಗರಾಜ ಮಾತನಾಡಿ ಕಲೆ ನಮ್ಮನಾಡಿನ ಪ್ರತಿಷ್ಠೆಯ ಪ್ರತೀಕವಾಗಿದ್ದು, ಕಲಾವಿದರು ನಾಡಿನ ಸಂಸ್ಕೃತಿಯನ್ನು ಪತಿನಿಧಿಸುವ ಮಾನವಸಂಪತ್ತಾಗಿದ್ದಾರೆ, ಅವರ ಏಳ್ಗಗೆ ಸಕರ್ಾರ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಸಕರ್ಾರದ ಮೇಲೆ ಈ ನಿಟ್ಟಿನಲ್ಲಿ ಪ್ರಭಾವ ಬೀರಬೇಕಿದೆ ಎಂದರು. ಪತ್ರಕರ್ತ ಹಾಗೂ ವಂದೇ ಮಾತರಂ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಮಾತನಾಡಿದರು.
ಕಲಾವಿದ ಎನ್.ಮುದ್ದಪ್ಪ ನವರಿಂದ ತತ್ವಪದಗಳ ಗಾಯನಕಾರ್ಯಕ್ರಮ ಜರುಗಿತು, ಸಹಕಲಾವಿದರಾದ ಅಕ್ಕಿ ಬಸಣ್ಣನವರಿಂದ ಹಾರ್ಮೋನಿಯಂ, ಹಿರೇಹೆಗ್ಢಾಳ ಪ್ರಭುದೇವರಿಂದ ಕ್ಯಾಷಿಯೋ, ತಬಲಾಸಾಥಿ ಮತ್ತು ಡೋಲಾಕ್ ವಾಧ್ಯ ಸೇವೆ ಕೆ, ಶಂಕರ್ ರವರಿಂದ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯ್ತಿ ಸದಸ್ಯ ಬಣಕಾರ ಚಿನ್ನಾಪ್ರಪ್ಪ ನೆರವೇರಿಸಿದರು. ಮುಖ್ಯ ಅಥಿತಿಗಳಾಗಿ ಹಿರಿಯ ಕಲಾವಿದರಾದ ವಿಭೂತಿ ವೀರಣ್ಣ,ಬಾಣದ ನರಸಿಂಹಪ್ಪ,ಪುರಾಣ ಪ್ರವಚನಕಾರ ಅಗಸಗಟ್ಟಿ ತಿಂದಪ್ಪ,ಎಸ್.ಡಿಎಮ್.ಸಿ ಅಧ್ಯಕ್ಷ ಕೆ.ರಮೇಶ,ಗ್ರಾಮದಹಿರಿಯರಾದ ತಳವಾರ ಅಂಜಿನಪ್ಪ, ಕೋಟ್ಯಾಳ್ನಾಗಪ್ಪ, ರಾಮಜ್ಜ, ತಳವಾರಏಳೂರಪ್ಪ, ಗೌಡ್ರು ನಾಗಪ್ಪ, ಹನುಮಂತಪ್ಪ, ಭರ್ಮಪ್ಪ, ತುಪ್ಪಳ್ಳಿ ಕೊಟ್ರೇಶ ಉಪಸ್ಥಿತರಿದ್ದರು. ಶಿಕ್ಷಕ ಮಾರಪ್ಪ ನಿರೂಪಿಸಿ ವಂದಿಸಿದರು