ವಿದ್ಯಾರ್ಥಿಗಳಿಗೆ ಲೈಸೆನ್ಸ್ ಮಾಡಿಸಲು ಮುಂದಾದ ಪ್ರಿನ್ಸಿಪಾಲ್ : ಪ್ರಸನ್ನ ಸಿಂಗ್
ಮುಂಡಗೋಡ 07: ಮುಂಡಗೋಡು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಯೋಜನೆ ಇದು. ಈ ಕಾಲೇಜಲ್ಲಿ ಈಗ 500-600 ಜನ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆಲ್ಲಾ ಲೈಸೆನ್ಸ್ ಮಾಡಿಸಲು ಪ್ರಿನ್ಸಿಪಾಲ್ ಮುಂದಾಗಿದ್ದಾರೆ ಹಾಗಾದರೆ ಅದರ ಹಿಂದಿರೋ ಕಾರಣ ಏನಂತೀರಾ ಇಲ್ಲಿದೆ ನೋಡಿ ಅದರ ಹಿಂದಿರೋ ವಿಷಯ. ಹೇಳಿ ಕೇಳಿ ಅದು ಡಿಗ್ರೀ ಕಾಲೇಜು ಈಗ 16 ದಾಟಿದರೆ ಮಕ್ಕಳು ಗಾಡಿ ತೆಗೆದುಕೊಂಡು ಓಡಾಡೋದು ಕಾಮನ್ ಆಗಿದೆ ಇನ್ನು ಡಿಗ್ರಿ ಮಕ್ಳು ಕೇಳ್ಬೇಕಾ? ಹೀಗಾಗಿ ದಿನಾ ನೂರಾರು ಗಾಡಿಗಳು ಕ್ಯಾಂಪಸ್ ನ ಆಚೆಗೆ ನಿಲ್ಲುತ್ತಿದ್ದವು.
ಒಮ್ಮೆ ಕುತೂಹಲಕ್ಕಾಗಿ ಪ್ರಾಚಾರ್ಯರಾದ ಪ್ರಸನ್ನ ಸಿಂಗ್ ಅವರು ಮಕ್ಕಳಿಗೆ ಲೈಸನ್ಸ್ ಬಗ್ಗೆ ಕೇಳಿದಾಗ ಅನೇಕರ ಕಡೆ ಲೈಸನ್ಸ್ ಇರಲಿಲ್ಲ. ಹೀಗಾಗಿ ಕಾಲೇಜಿನ ಬಿಡುವಿನ ದಿನಗಳನ್ನು ನಿಗದಿ ಮಾಡಿ ತಿಂಗಳ ಪರ್ಯಂತ ಅಭಿಯಾನೋಪಾದಿಯಲ್ಲಿ ಮಕ್ಕಳಿಗೆ ಎಲ್. ಎಲ್. ಆರ್ ಅನ್ನು ಕಾಲೇಜ್ ವತಿಯಿಂದ ಮಾಡಿಸಿ ಕೊಡಲಾಗುತ್ತಿದೆ.
ಇವರೇನು ಎಕ್ಸಾಮ್ ಫೀ ತುಂಬೋದಕ್ಕೋ ಅಥವಾ ಸ್ಕಾಲರ್ ಶಿಪ್ ಹಾಕೋದಕ್ಕೋ ಹೀಗೆ ನಿಂತಿರೋ ಹುಡುಗರಲ್ಲ! ಇವರು ಈ ರೀತಿ ಸಾಲುಗಟ್ಟಿ ನಿಂತಿದ್ದು ಡ್ರೈವಿಂಗ್ ಲೈಸನ್ಸ್ ಮಾಡಿಸೋದಕ್ಕೆ! ಮಾಡಿ ಕೊಡುತ್ತಿರುವವರು ಈ ಕಾಲೇಜಿನ ಪ್ರಿನ್ಸಿಪಾಲ್ ಇದೇನಪ್ಪಾ ಇದು ಇದ್ಯಾವಾಗಿಂತ ಕಾಲೇಜಲ್ಲಿ ಲೈಸನ್ಸ್ ಮಾಡಿಕೋಡೋ ಸ್ಕೀಮ್ ಬಂತು ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ತುಂಬಿಸಿ ಆರ್ ಟಿ ಒ ಆಫೀಸ್ ಗೆ ಕಳಿಸೋ ಜವಾಬ್ದಾರಿ ಕಾಲೇಜು ಹೊತ್ತುಕೊಂಡಿದ್ದು ಇದರಿಂದ ಅಂದಾಜು 1000 ರೂಪಾಯಿಯಷ್ಟು ಉಳಿತಾಯವಾಗಲಿದೆ ಹಾಗೂ ಲೈಸನ್ಸ್ ಮಾಡೋ ನೆಪದಲ್ಲಿ ಕಾಲೇಜ್ ತಪ್ಪಿಸೋ ಅವಕಾಶ ಕೂಡ ಇರುವುದಿಲ್ಲ.
ಹಳ್ಳಿಯಿಂದ ಬರುವ ಬಡ ಮಕ್ಕಳಿಗೆ ಅತ್ಯಾನುಕೂಲವಾದ ಈ ಯೋಜನೆಯನ್ನು ಜಿಲ್ಲೆಯಲ್ಲೇ ಮೊದಲ ಬಾರಿ ಶುರು ಮಾಡಿರುವ ಗರಿಮೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಡಗೋಡ ಹಾಗೆಯೇ ಪ್ರಾಚಾರ್ಯ ಪ್ರಸನ್ನ ಸಿಂಗ್ ತಿಳಿಸಿದ್ದಾರೆ.