ಕಡ್ಡಿರಾಂಪುರ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Primary school anniversary in Kaddirampur village

ಕಡ್ಡಿರಾಂಪುರ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ 

ಹೊಸಪೇಟೆ 18: ವಿಜಯನಗರ ಜಿಲ್ಲೆ ಹೊಸಪೇಟೆಯ ಕಡ್ಡಿರಾಂಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವಿಜಯನಗರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯನಗರ, ಉಪನಿರ್ದೇಶಕರ ಕಾರ್ಯಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊಸಪೇಟೆ, ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಹೊಸಪೇಟೆ, ಹಾಗೂ ಎಸ್‌. ಡಿ. ಎಮ್‌. ಸಿ ಅಧ್ಯಕ್ಷರು ಮತ್ತು ಸದಸ್ಯರು ಇವರ ನೇತೃತ್ವದಲ್ಲಿ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಯಿತು. 

ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು, ಹಂಪಿ ಅಧ್ಯಕ್ಷರಾದ ರಜನಿ ಮೇಡಂ, ಪಂಚಾಯತ್ ಡೆವಲಪ್ಮೆಂಟ್ ಆಫೀಸರ್‌ಗಳಾದ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧಿಕಾರಿಗಳಾದ ಶಿವರಾಂ  ಸಾರ್, ಶಾಲಾ ಸಿಬ್ಬಂದಿ ವರ್ಗದವರು ಮುಂತಾದವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. 

ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ನಿಮ್ಮೊಂದಿಗಿರುತ್ತೇನೆ. ಮುಂದಿನ ದಿನಗಳಲ್ಲಿ 9 ಮತ್ತು 10ನೇ ತರಗತಿ ಸೇರೆ​‍್ಡಗೆ ಸಂಪೂರ್ಣವಾಗಿ ನನ್ನ ಬೆಂಬಲವಿರುತ್ತದೆ. ಅದಕ್ಕೆ ಸಂಬಂಧ ಪಟ್ಟಂತೆ ಯಾವುದೇ ತೊಂದರೆ ಎದುರಾದರೂ ಅದನ್ನು ನಾನು ನಿಭಾಯಿಸುತ್ತೇನೆ  ಎಂದರು. ಬೆಳಗುವ ಸಿರಿ ಮೊಳಕೆಯಲ್ಲಿ ಎನ್ನುವ ನಾಣ್ಣುಡಿಯಂತೆ ಮಕ್ಕಳ ಪ್ರತಿಭೆ ಕೇವಲ ಶಿಕ್ಷಣಕ್ಕಾಗಿ ಸೀಮಿತವಾಗಿರದೆ ಅವರವರ ಕಲೆ, ಸಂಸ್ಕೃತಿ, ಸಾಹಸ ಅಥವಾ ಅವರವರ ವಿಶೇಷ ಪ್ರತಿಭೆಯನ್ನು ಹೊರಹಾಕಲು ಈ ಒಂದು ಶಾಲಾ ವಾರ್ಷಿಕೋತ್ಸವ ಅತ್ಯಂತ ವಿಶೇಷವಾಗಿ ನೆರವಾಗುತ್ತದೆ ಎಂದರು. 

ಈ ಒಂದು  ಶಾಲಾ ವಾರ್ಷಿಕೋತ್ಸವದ ಸುಂದರ ಸಮಾರಂಭದ ಕಾರ್ಯಕ್ರಮದಲ್ಲಿ  ಗೋಪಾಲ, ಹುಲಿಯಪ್ಪ, ನಲ್ಲಾಸ್ವಾಮಿ, ಶಿವು, ಪ್ರಶಾಂತ್, ಅಜ್ಜಪ್ಪ ಸ್ವಾಮಿ, ರಘು ನಾಯ್ಕ್‌ ಸಾವಿರಾರು ಮಕ್ಕಳು ಹಾಗೂ ಪಾಲಕರು ಪೋಷಕರು  ಗ್ರಾಮದ ಹಿರಿಯ ಮುಖಂಡರು  ಉಪಸ್ಥಿತರಿದ್ದರು.