ಲೋಕದರ್ಶನ ವರದಿ
ಗೋಕಾಕ 11: ವಿಶ್ವಕರ್ಮ ಸಮಾಜ ಬಾಂಧವರು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕೆಂದು ವಿಶ್ವಕರ್ಮ ಹೋರಾಟ ಸಮೀತಿ ರಾಜಾಧ್ಯಕ್ಷೆ ಗಾಯತ್ರಿ ಚಂದ್ರಶೇಖರ ಹೇಳಿದರು.
ಅವರು, ಮಂಗಳವಾರದಂದು ಸಾಯಂಕಾಲ ನಗರದ ಅಂಬಿಗೇರ ಗಲ್ಲಿಯ ಕಾಳಿಕಾ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ರಾಜ್ಯದ 45 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ವಿಶ್ವಕರ್ಮ ಸಮಾಜ ಸಂಘಟನಾತ್ಮಕ ಹೋರಾಟಗಳನ್ನು ಮಾಡದೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಎಡವುತ್ತಿರುವದು ಬೇಸರದ ಸಂಗತಿ ಸಮಾಜವನ್ನು ಸಂಘಟಿಸುವ ಮಹತ್ತರ ಉದ್ದೇಶದಿಂದ ರಾಜಾದ್ಯಂತ ವಿಶ್ವಕರ್ಮ ಹೋರಾಟ ಸಮೀತಿಯನ್ನು ಹುಟ್ಟುಹಾಕಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೋಳಬೇಕೆಂದು ಗಾಯತ್ರಿ ಚಂದ್ರಶೇಖರ್ ಹೇಳಿದರು .
ಸಮಾಜದ ಮುಖಂಡ ಸುರೇಶ ರಂಗಪ್ಪ ಪತ್ತಾರ ಅವರನ್ನು ವಿಶ್ವಕರ್ಮ ಹೋರಾಟ ಸಮೀತಿಯ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ವಿಶ್ವಕರ್ಮ ಗಾಯತ್ರಿಪೀಠದ ಶಾಂತಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶರ್ಿವಚನ ನೀಡಿದರು
ಈ ಸಂದರ್ಭದಲ್ಲಿ ರವಿ ಮಾಲದಿನ್ನಿ, ಸಿದ್ದು ಬಡಿಗೇರ, ದೆವೇಂದ್ರ ಬಡಿಗೇರ, ವಾಸು ಪತ್ತಾರ, ಬಸವರಾಜ ಪತ್ತಾರ, ಶಿವಾನಂದ ಪತ್ತಾರ, ರವಿ ಪೋತದಾರ, ಆನಂದ ಸತ್ತಗೇರಿ, ಪ್ರಕಾಶ ಸತ್ತಗೇರಿ, ನಾಗಪ್ಪ ಪತ್ತಾರ, ಸುಜಾತಾ ಪತ್ತಾರ, ಸುಜಾತಾ ಸತ್ತಗೇರಿ, ಪುಷ್ಪಾ ಪತ್ತಾರ, ಸುಖನ್ಯ ಸತ್ತಗೇರಿ, ಸ್ವೇತಾ ಪತ್ತಾರ, ಸ್ವಾತಿ ಪತ್ತಾರ, ಲಲಿತಾ ಪತ್ತಾರ ಸೇರಿದಂತೆ ಇತರರು ಇದ್ದರು.