ಕಂಪ್ಲಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆಗೆ ಚಾಲನೆ
Commencement of the trekking from Kampli to Srisailam
ಲೋಕದರ್ಶನ ವರದಿ
ಕಂಪ್ಲಿ 07: ಪಟ್ಟಣದ ಶ್ರೀ ಕಲ್ಯಾಣಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರಿ, ಹೊಸಪೇಟೆಯ ಮರುಳಸಿದ್ಧಾಶ್ರಮದ ಸಿದ್ಧಲಿಂಗಸ್ವಾಮಿಗಳ ಮಾರ್ಗದರ್ಶನದಲ್ಲಿ ಕಂಪ್ಲಿಯ ವೀರಶೈವ ಸಮಾಜದ ಯುವ ಮುಖಂಡರಾದ ಪುಟ್ಟಿ ಸಚಿನ್, ಅರವಿ ಅಮರೇಶಗೌಡ ನೇತೃತ್ವದಲ್ಲಿ ಪಟ್ಟಣದ ಸುಮಾರು ಐವತ್ತಕ್ಕೂ ಅಧಿಕ ಭಕ್ತರು ಶುಕ್ರವಾರ ಬೆಳಗಿನ ಜಾವ ಶ್ರೀಶೈಲ ಭ್ರಮರಾಂಭದೇವಿ ಸಹಿತ ಮಲ್ಲಿಕಾರ್ಜನಸ್ವಾಮಿ ದರ್ಶನಕ್ಕೆ ತೆರಳಿದರು. ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಮತ್ತು ಕಲ್ಯಾಣ ಚೌಕಿಮಠದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಕಲ್ಯಾಣ ಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರಿಗಳು ಮತ್ತು ಹೊಸಪೇಟೆಯ ಮರುಳಸಿದ್ಧಾಶ್ರಮದ ಸಿದ್ಧಲಿಂಗ ತಾತನವರು ಪಾದಯಾತ್ರೆಗೆ ಚಾಲನೆ ನೀಡಿದರು. ಮಾರ್ಗಮಧ್ಯೆ ಕುರುಗೋಡು ದೊಡ್ಡಬಸವೇಶ್ವರ ಮತ್ತು ಬಳ್ಳಾರಿಯ ಅಧಿದೇವತೆ ಕನಕದುರ್ಗಮ್ಮ ದೇವಿಯ ದರ್ಶನ ಪಡೆದು ಯಾತ್ರೆಯನ್ನು ಆರಂಭಿಸಿದರು. ಶ್ರೀಶೈಲ ತಲುಪಿದ ನಂತರ ಶ್ರೀಶೈಲ ಮಲ್ಲಿ ಕಾರ್ಜುನನ ಸ್ಪರ್ಷ ದರ್ಶನ ಮಾಡಿ ನಂತರ ಭ್ರಮಾರಾಂಭ ದೇವಿಯ ದರ್ಶನ ಪಡೆದು ಹಿಂತಿರುಗುವುದಾಗಿ ಶಾಸ್ತ್ರಿಗಳು ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 